Advertisement
ಅವರು ಪಟ್ಟಣದ ತಮ್ಮ ನಿವಾಸದ ಜನಸಂಪರ್ಕ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ 28 ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ ಮಾಡುವ ಸಂಬಂಧ ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಕೆಲವರಿಂದ ದಾಖಲಾತಿಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರು. ನಾಮನಿರ್ದೇಶನಕ್ಕಾಗಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಸಂಗ್ರಹಿಸುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ಗ್ರಾಮೀಣ ಜನತೆಯನ್ನು ದಾರಿತಪ್ಪಿಸುತ್ತಿದ್ದಾರೆ. ಅವರು ಗ್ರಾಮ ಪಂಚಾಯಿತಿಗೆ ನಾಮನಿರ್ದೇಶನ ಮಾಡುವ ಕುರಿತಂತೆ ಸರ್ಕಾರದಿಂದ ಜಾರಿಯಾಗಿಲ್ಲ. ನಾಗರಿಕರು, ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕರ ಮಾತಿಗೆ ಮರುಳಾಗಬಾರದೆಂದು ಮನವಿ ಮಾಡಿದರು. ಕೆಪಿಸಿಸಿ ಸದಸ್ಯರಾದ ಕಲ್ಲುಕಂಬ ಪಂಪಾಪತಿ, ಎಚ್. ಮಹ್ಮದ್ ಗೌಸ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಟಗಿ ಬಸವರಾಜಗೌಡ ಇದ್ದರು. Advertisement
ಗ್ರಾಪಂಗಳಿಗೆ ನಾಮನಿರ್ದೇಶನ ಮಾಡಿದರೆ ಹೋರಾಟ: ಶಾಸಕ ಗಣೇಶ
01:01 PM May 31, 2020 | Naveen |
Advertisement
Udayavani is now on Telegram. Click here to join our channel and stay updated with the latest news.