Advertisement

ಕಮಿಲ ರೋಡ್‌: ಹತ್ತೇ ದಿನಗಳಲ್ಲಿ ಕಾಂಕ್ರೀಟ್‌ ರಸ್ತೆಗೆ ತೇಪೆ 

11:20 AM Feb 08, 2018 | Team Udayavani |

ಸುಬ್ರಹ್ಮಣ್ಯ: ಗುತ್ತಿಗಾರು ಕಮಿಲ ಬಳ್ಪದ ಸುಮಾರು 5 ಕಿಮೀ ಸಂಪರ್ಕ ರಸ್ತೆಯಲ್ಲಿ 1.5 ಕಿಮೀ ದೂರದ ರಸ್ತೆಯನ್ನು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆಯ ಮೂಲಕ ಅಭಿವೃದ್ಧಿ ಪಡಿಸಲು ಕ್ರಮವಹಿಸುವುದಾಗಿ ಪಿಎಂಜಿಎಸ್‌ವೈ ವಿಭಾಗ ಇಂಜಿನಿಯರ್‌ ಹನುಮಂತಪ್ಪ ತಿಳಿಸಿದ್ದಾರೆ.

Advertisement

ಗುತ್ತಿಗಾರು- ಕಮಿಲ ರಸ್ತೆಯ ಅರ್ಧ ಕಿಲೋ ಮೀಟರ್‌ ಕಾಂಕ್ರೀಟು ಕಾಮಗಾರಿ ನಡೆದು 10 ದಿನದಲ್ಲಿ ಬಿರುಕು ಬಿಟ್ಟಿರುವ ಕುರಿತು ಸ್ಥಳಿಯರು ಅಸಮಧಾನ ವ್ಯಕ್ತಪಡಿಸಿದ್ದು ಅಲ್ಲದೆ ಬುಧವಾರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಬೆನ್ನಲ್ಲೆ ಈ ಕ್ರಮ ಜರಗಿಸಿದ್ದಾರೆ. ಬುಧವಾರ ಗುತ್ತಿಗೆದಾರರ ಜತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

ಅಭಿವೃದ್ಧಿಗೆ ಯೋಜಿಸಿರುವ ರಸ್ತೆ ಅಗಲೀಕರಣ ಹಾಗೂ ರಸ್ತೆ ಸಮತಟ್ಟು ಮಾಡುವ ಕಾರ್ಯ ಮುಗಿದು ಅರ್ಧ ಕಿಲೋ
ಮೀಟರ್‌ ಕಾಂಕ್ರೀಟ್‌ ರಸ್ತೆ ಹಾಗೂ ಉಳಿದ 1 ಕಿಲೋ ಮೀಟರ್‌ ಡಾಮರೀಕರಣದ ಕೆಲಸ ನಡೆಯುತ್ತಿದೆ. ಆದರೆ ಇಲ್ಲಿ
ಮಾಡಿರುವ ಕಾಂಕ್ರೀಟು ಕಾಮಗಾರಿ ನಡೆಸಿ 10 ದಿನದಲ್ಲೇ ಬಿರುಕು ಬಿಟ್ಟಿರುವ ಬಗ್ಗೆ ಮಂಗಳವಾರ ಸಾರ್ವಜನಿಕರು ಪಿಎಂಜಿ ಎಸ್‌ವೈ ವಿಭಾಗ ಇಂಜಿನಿಯರ್‌ ಗಮನಕ್ಕೆ ತಂದಿದ್ದರು ಹಾಗೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಈಗಾಗಲೇ 3 ಕಡೆ ಬಿರುಕು ಬಿಟ್ಟಿರುವುದು ಕಂಡುಬಂದಿದ್ದು, ಇದರಿಂದ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಹಾಗೂ ಬಿರುಕು ಬಿಟ್ಟ ಕಡೆಗಳಲ್ಲೂ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಮುಂದೆ 5 ವರ್ಷಗಳ ಕಾಲ ನಿರ್ವಹಣೆಯೂ ಇರುವುದ ರಿಂದ ಈ ನಡುವೆ ಯಾವುದೇ ಸಮಸ್ಯೆ ಬಂದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಬಂದರೂ ತತ್‌ಕ್ಷಣವೇ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಇಂಜಿನಿಯರ್‌ ತಿಳಿಸಿದರು. ಈ ಸಂದರ್ಭ ಕಮಿಲದ ನಿವಾಸಿಗಳು ಉಪಸ್ಥಿತರಿದ್ದರು. ಕಮಿಲ ರಸ್ತೆ ಕಳಪೆ ಕುರಿತು ಸುದಿನದಲ್ಲಿ ಬುಧವಾರ ಸುದ್ದಿ ಪ್ರಕಟವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next