Advertisement

ಕಾಮಧೇನು ಸಭಾಭವನ ಉದ್ಘಾಟನೆ

12:44 PM Mar 06, 2017 | |

ಮೂಡಬಿದಿರೆ: ಇಲ್ಲಿನ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಕ‌ಟ್ಟಡ ನಿರ್ಮಾಣ ಸಮಿತಿ ಆಶ್ರಯದಲ್ಲಿ ನಿರ್ಮಾಣಗೊಂಡಿರುವ “ಕಾಮಧೇನು’ ಸಭಾಭವನವನ್ನು ನಾಸಿಕ್‌ನ ಉದ್ಯಮಿ ಗಂಗಾಧರ ಕೆ. ಅಮೀನ್‌ ರವಿವಾರ ಉದ್ಘಾಟಿಸಿದರು.

Advertisement

ಕಾಮಧೇನು ಸಭಾಭವನದ ಎಂ. ಶೀನಪ್ಪ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪೂವಪ್ಪ ಕುಂದರ್‌ ವಹಿಸಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ| ಬಿ. ಮನೋಹರ, ನವೀಕೃತ ನಾರಾಯಣಗುರು ಸಭಾಭವನವನ್ನು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌ ಹಾಗೂ “ಎಂ. ಶೀನಪ್ಪ ಮಂಗಲ ಭವನ’ವನ್ನು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಉದ್ಘಾಟಿಸಿದರು.

ಬಲೊಟ್ಟು ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಯುವಶಕ್ತಿಯ ಸದುಪಯೋಗ ನ್ಯಾಯಮೂರ್ತಿ ಬಿ. ಮನೋಹರ ಮಾತನಾಡಿ, ಯುವಜನರು ಗುರುಹಿರಿಯರು, ಮಹಿಳೆಯರನ್ನು ಗೌರವದಿಂದ ಕಾಣಬೇಕು. ವಿದ್ಯೆ ಮತ್ತು ಮಹಿಳಾ ಸಶಕ್ತೀಕರಣಕ್ಕೆ ಆದ್ಯತೆ ನೀಡಬೇಕು ಎಂದರು. ಉದ್ಘಾಟಕ ಗಂಗಾಧರ ಕೆ. ಅಮೀನ್‌, ಅಮಲು ವ್ಯಸನ ಮುಕ್ತ ಸಮಾಜ ಕಟ್ಟಬೇಕಾಗಿದೆ; ಮನೆ, ಕುಟುಂಬ ಪರಿವಾರ, ಸಮಾಜದಲ್ಲಿ ಪರಸ್ಪರ ಸೌಹಾರ್ದ ಸಂಬಂಧ ಬೆಳೆಸಬೇಕಾಗಿದೆ ಎಂದರು.

ಜಾನಪದ ವಿದ್ವಾಂಸ ಡಾ| ಗಣೇಶ್‌ ಅಮೀನ್‌ ಸಂಕಮಾರ್‌ ಪ್ರಧಾನ ಭಾಷಣಗೈದರು. ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಅಭಯಚಂದ್ರ, ವಿನಯಕುಮಾರ್‌ ಸೊರಕೆ, ಮಂಗಳೂರು ಜನತಾ ಕನ್‌ಸ್ಟ್ರಕ್ಷನ್‌ನ ರಮೇಶ್‌ ಕುಮಾರ್‌, ಉದ್ಯಮಿ ನಾರಾಯಣ ಪಿ.ಎಂ., ಎಸ್‌ ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಭಾಸ್ಕರ ಕೋಟ್ಯಾನ್‌, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಭಾನುಮತಿ ಎಂ. ಶೀನಪ್ಪ ಮುಖ್ಯ ಅತಿಥಿಗಳಾಗಿದ್ದರು.

ಸ್ಮರಣೆ
ಸ್ಥಾಪಕ ಪ್ರಮುಖರು, ಹಿರಿಯ ಸದಸ್ಯರೊಂದಿಗೆ ಸಂಘದ ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಸುದೀರ್ಘ‌ ಕಾಲ ಸೇವೆ ಸಲ್ಲಿಸಿದ್ದ ದಿವಂಗತ ಎಂ. ಶೀನಪ್ಪ ಅವರ ಮುಂದಾಳತ್ವವನ್ನು ವಿಶೇಷವಾಗಿ ಸ್ಮರಿಸಲಾಯಿತು. ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಉದ್ಯಮಿ ನಾರಾಧಿಯಣ ಪಿ.ಎಂ. ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ನಾರಾಯಣ ಗುರು ಸೇವಾ ದಳದ ಅಧ್ಯಕ್ಷ ರಂಜಿತ್‌ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಗೋಪಿನಾಥ್‌, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್‌, ಕಾರ್ಯದರ್ಶಿ ರವೀಂದ್ರ ಎಂ. ಸುವರ್ಣ, ನಾರಾಯಣ ಗುರು ಸೇವಾದಳದ ಅಧ್ಯಕ್ಷ ರಂಜಿತ್‌ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಗೋಪಿನಾಥ್‌, ಕಟ್ಟಡ ಸಮಿತಿ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ನವೀನ್‌ಚಂದ್ರ ಕರ್ಕೇರ, ರವೀಂದ್ರ ಕರ್ಕೇರ, ಗಿರೀಶ್‌ ಹಂಡೇಲು, ಜಗದೀಶ್‌, ಶಂಕರ ಎ. ಕೋಟ್ಯಾನ್‌, ವಾಸು ಪೂಜಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement

ನಿತೇಶ್‌ ಕುಮಾರ್‌ ಮಾರ್ನಾಡು ಅವರು ಕಾರ್ಯಕ್ರಮ ನಿರೂಪಿಸಿದರು. ರೋಹನ್‌ ಅತಿಕಾರಿಬೆಟ್ಟು ಅವರು ಕೃತಜ್ಞತೆ ಸಲ್ಲಿಸಿದರು.

ಸಭಾಭವನಕ್ಕೆ  25 ಲ.ರೂ.
ಶಾಸಕ ಕೆ. ಅಭಯಚಂದ್ರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಧೇನು ಸಭಾಭವನಕ್ಕೆ 25 ಲ.ರೂ. ಅನುದಾನ ಮಂಜೂರು ಮಾಡಿರುವುದಾಗಿ ಘೋಷಿಸಿದರು. ಇದಲ್ಲದೆ ಎದುರಿನ ಸ್ವರಾಜ್ಯ ಮೈದಾನದ ಆವರಣ-ರಕ್ಷಣಾ ಬೇಲಿಗಾಗಿ 1 ಕೋ.ರೂ., ಮೈದಾನವನ್ನು ಸುತ್ತುವರಿದ ರಸ್ತೆಗೆ ಡಾಮರು ಹಾಕಲು 50 ಲ.ರೂ. ಮಂಜೂರು ಮಾಡಲಾಗಿದೆ ಎಂದು  ತಿಳಿಸಿದರು.

ಸಮ್ಮಾನ/ಗೌರವ
5 ಲಕ್ಷ ರೂ. ಕೊಡುಗೆ ನೀಡಿರುವ ಡಾ| ಎಂ. ಮೋಹನ ಆಳ್ವ ಅವರನ್ನು ಕಟ್ಟಡ ನಿರ್ಮಾಣ ಸಮಿತಿ ಪರವಾಗಿ ಅಧ್ಯಕ್ಷ ನಾರಾಯಣ ಪಿ.ಎಂ. ಸಮ್ಮಾನಿಸಿದರು. 25,000 ರೂ.ಗಿಂತ ಮೇಲ್ಪಟ್ಟು  ದೇಣಿಗೆ ನೀಡಿದ ದಾನಿಗಳು, ಸಂಘದ ಹಿರಿಯ ಸದಸ್ಯರು ಹಾಗೂ  ನಿರ್ಮಾಣ ಕಾಮಗಾರಿಗಳಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು. ಹಿರಿಯ ಸದಸ್ಯರ ಪರಧಿವಾಗಿ ಪಿ.ಕೆ. ರಾಜು ಪೂಜಾರಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next