ಉಳ್ಳಾಲ: ಸ್ವಾರ್ಥ ಮನೋಭಾವವನ್ನು ದೂರಗೊಳಿಸಿ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಇಂದಿನ ಎಳೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ ವಿಚಾರವನ್ನು ತಿಳಿಸಿಕೊಡುವ ಕಾರ್ಯ ಆಗಬೇಕಿದೆ ಎಂದು ಎಂದು ಒಡಿಯೂರಿನ ಸಾದ್ವಿ ಶ್ರೀ ಮಾತಾನಂದಮಯಿ ಅವರು ಹೇಳಿದರು.
ಅವರು ಕಂಬಳಪದವಿನ ಶ್ರೀ ದುರ್ಗಾಕಾಳಿ ದೇವಸ್ಥಾನದಲ್ಲಿ ಅಷ್ಠಬಂಧ ದ್ರವ್ಯಕಲಶದ ಅಂಗವಾಗಿ ಶುಕ್ರವಾರ ನಡೆದ ಮಾತೃ ಸಂಗಮ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರ ಅದು ಪುಸ್ತಕದಲ್ಲಿದ್ದರೆ ಸಾಲದು ಅದು ನಮ್ಮ ಮಸ್ತಕದಲ್ಲಿರಬೇಕು. ಯುವ ಪೀಳಿಗೆಗೆ ಸಂಸ್ಕಾರಯುತ ಬದುಕನ್ನು ತಿಳಿಯಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಬಂಟ್ವಾಳ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷ ರಮಾ ಭಂಡಾರಿ, ಪಿ.ಎ.ಕಾಲೇಜು ಪ್ರಾಧ್ಯಾಪಕಿ ಡಾ| ಶರ್ಮಿಳಾ ಭೋಜ ಪೂಜಾರಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಉಪನ್ಯಾಸಕಿ ಡಾ| ಶೈಲಾ ತಾರನಾಥ್ ಪಜೀರು, ವಿಜಯಲಕ್ಷ್ಮೀ ಪ್ರಸಾದ್ ರೈ ಕಲ್ಲಿಮಾರು, ಪ್ರಾಧ್ಯಾಪಕಿ ಡಾ| ಮಂಜುಶ್ರೀ, ಮಾಜಿ ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಶಿಕ್ಷಕಿ ಆಶಾ ದಿಲೀಪ್ ರೈ, ವಿಜಯಲಕ್ಷ್ಮೀ ಅಜೇಕಲ ಗುತ್ತು, ವಿದ್ಯಾರತ್ನ ಶಾಲೆಯ ಸಂಚಾಲಕಿ ಸೌಮ್ಯ ರವೀಂದ್ರ ಶೆಟ್ಟಿ, ಸರಿತಾ ಸಂದೀಪ್ ರೈ, ವಸಂತಿ ಲೋಕನಾಥ್ ಶೆಟ್ಟಿ , ಕಮಲಾಕ್ಷಿ, ಮಾತೃಸಂಘದ ಅಧ್ಯಕ್ಷ ಜ್ಯೋತಿ ಪ್ರಶಾಂತ್, ಗೌರವಾಧ್ಯಕ್ಷೆ ಜಲಜಾಕ್ಷಿ ನಾರಾಯಣ
ಗೌಡ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜಸೇವಕ ಲೋಕನಾಥ್ ಶೆಟ್ಟಿ ದಂಪತಿ, ಹಾಗೂ ಕುಣಿತ ಭಜನಸಂಘಟಕಿ ವಿನುತಾ ಅವರನ್ನು ಸಮ್ಮಾನಿಸಲಾಯಿತು.
ನಯನಾ ಎಂ.ಪಕ್ಕಳ ಸ್ವಾಗತಿಸಿದರು. ಡಾ| ಸುರೇಖಾ ಅಮರನಾಥ ಶೆಟ್ಟಿ ವಂದಿಸಿದರು. ಸುರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಟೀಲು ಮೇಳದ ಸಂಪೂರ್ಣ ದೇವಿ ಮಹಾತೆ¾ ಯಕ್ಷಗಾನ ಪ್ರದರ್ಶನ ನಡೆಯಿತು.