Advertisement

ಕಂಬಳ ತರಬೇತಿ ಶಿಬಿರ ಅ. 4ಕ್ಕೆ ಮುಕ್ತಾಯ; ಅ. 10ರಂದು ಶಿಬಿರಾರ್ಥಿಗಳ ಕಂಬಳ

01:52 AM Oct 02, 2021 | Team Udayavani |

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯ ಕೋಟಿ – ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ಸೆ. 19ರಿಂದ ನಡೆಯುತ್ತಿರುವ 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರವು ಅ. 4ರಂದು ಮುಕ್ತಾಯಗೊಳ್ಳಲಿದೆ. ಅ. 10ರಂದು ಹಗಲು ಇದೇ ಸ್ಥಳದಲ್ಲಿ ಶಿಬಿರಾರ್ಥಿಗಳಿಂದಲೇ ಕಂಬಳ ನಡೆಯಲಿದೆ ಎಂದು ಕಂಬಳ ಅಕಾಡೆಮಿಯ ಸಂಚಾಲಕ ಕೆ. ಗುಣಪಾಲ ಕಡಂಬ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

Advertisement

“ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿ ಯಿಂದ ತರಬೇತಿ ಶಿಬಿರ ನಡೆಯುತ್ತಿದೆ. ಕಂಬಳ ದಿನ ದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯವರು ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡುವರು ಎಂದರು.

ಕಂಬಳಕ್ಕೆ 30 ಜೊತೆ ಕೋಣ
ತರಬೇತಿಗಾಗಿ ಕೋಣಗಳ ಯಜಮಾನರು ತಮ್ಮ ಕೋಣಗಳನ್ನು ಒದಗಿಸಿದ್ದು, ಅ. 10ರಂದು ನಡೆಯಲಿರುವ ಕಂಬಳಕ್ಕೆ 30 ಜೊತೆ ಕೋಣಗಳು ಆಗಮಿಸಲಿವೆ. ಸರಪಾಡಿಯ ಜೋನ್‌ ಸಿರಿಲ್‌ ಡಿ’ಸೋಜಾ ಶಿಬಿರಾಧಿಕಾರಿಯಾಗಿದ್ದು ಆಳ್ವಾಸ್‌ ಶಿಕ್ಷಣ ಸಂಸ್ಥೆಯವರು ಯೋಗ ತರಬೇತಿ, ರಾಷ್ಟ್ರೀಯ ತರಬೇತುದಾರರಾದ ವಸಂತ ಜೋಗಿ ಮತ್ತು ಶಾಂತಾರಾಮ ವ್ಯಾಯಾಮ ತರಬೇತಿ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ರಾಜ್ಯ ಹೈಕೋರ್ಟ್‌ಗೆ ಅ.11ರಿಂದ ದಸರಾ ರಜೆ

ಸಮಾರೋಪ ಸಮಾರಂಭ
ಅ. 4ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್‌ ಮತ್ತಿತರರು ಪಾಲ್ಗೊಳ್ಳುವರು.

Advertisement

ಮಹಿಳೆಯರಿಗೂ ತರಬೇತಿ
ಕಂಬಳ ಕೋಣಗಳ ಆರೈಕೆ, ಪಾಲನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಮುಂದೆ ಮಹಿಳೆಯರಿಗೂ ಮಹಿಳೆಯರಿಂದಲೇ ತರಬೇತಿ ನೀಡುವ ಚಿಂತನೆ ಇದೆ .

 

Advertisement

Udayavani is now on Telegram. Click here to join our channel and stay updated with the latest news.

Next