Advertisement

ನಾಲ್ಕು ವರ್ಷಗಳ ಬಳಿಕ ಕುದಿ ಕಂಬಳ

10:22 AM Sep 07, 2018 | Team Udayavani |

ಕಾರ್ಕಳ: ಕಂಬಳಕ್ಕೆ ಕೋಣಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಮಿಯ್ನಾರು ಕಂಬಳ ಕ್ರೀಡಾಂಗಣದಲ್ಲಿ ಕುದಿ ಕಂಬಳ (ಕೋಣಗಳಿಗೆ ಓಟದ ಅಭ್ಯಾಸ) ಪ್ರಾರಂಭಗೊಂಡಿದೆ. ನಾಲ್ಕು ವರ್ಷಗಳ ಅನಂತರ ಇದು ನಡೆಯುತ್ತಿದೆ.
2014ರಿಂದ ಕಂಬಳಕ್ಕೆ ಎದುರಾಗಿದ್ದ ಕಾನೂನಿನ ಅಡೆತಡೆಯಿಂದಾಗಿ ಕರಾವಳಿಯ ಕಂಬಳ ನೀರಸವಾಗಿ ನಡೆದಿತ್ತು. ಕುದಿ ಕಂಬಳ ಕೂಡ ಹುರುಪು ಕಳೆದುಕೊಂಡಿತ್ತು. ಈ ಬಾರಿ ಕಂಬಳಪ್ರಿಯರು ಹೊಸ ಹುರುಪಿನಲ್ಲಿ ಕಂಬಳ ಗದ್ದೆಗೆ ಇಳಿಯಲಿದ್ದಾರೆ.  

Advertisement

ಸರಕಾರದ ಸುತ್ತೋಲೆ ಪ್ರಕಾರ ಕಂಬಳ
2018-19ನೇ ಸಾಲಿನ ಕಂಬಳಕ್ಕೆ ರಾಜ್ಯ ಸರಕಾರ ನಿರ್ದಿಷ್ಟ 12 ನಿಯಮಗಳನ್ನು ರೂಪಿಸಿ ಕಳೆದ 
ಮಾರ್ಚ್‌ನಲ್ಲಿ ಸುತ್ತೋಲೆ ಹೊರಡಿಸಿದೆ. ಆ ಪ್ರಕಾರ ಕಂಬಳ ನಡೆಯಲಿದ್ದು, ಕುದಿ ಕಂಬಳವೂ ಸುತ್ತೋಲೆಯ ಪ್ರಕಾರ ನಡೆಯುತ್ತಿದೆ. 

ತರಬೇತಿ ಶಿಬಿರದ ಚಿಂತನೆ
ಕಾನೂನಿನ ತೊಡಕಿನಿಂದಾಗಿ ನಾಲ್ಕು ವರ್ಷಗಳಿಂದ ತರಬೇತಿ ಶಿಬಿರ ನಡೆದಿಲ್ಲ. ಈ ಬಾರಿ 10-15 ದಿನಗಳ ತರಬೇತಿ ಶಿಬಿರ ನಡೆಸಲು ಅಕಾಡೆಮಿ ಚಿಂತನೆ ನಡೆಸಿದೆ. ಅಕ್ಟೋಬರ್ ನಲ್ಲಿ ತರಬೇತಿ ನಡೆಯಲಿದೆ. ಕೋಣಗಳ ಓಟ, ಕಂಬಳ ನಿರ್ವಹಣೆ, ಕೋಣಗಳ ಸಾಕಾಣಿಕೆ, ಓಟಗಾರರಿಗೆ ತರಬೇತಿ ನೀಡಲಾಗುತ್ತದೆ.

ಮಿಯ್ನಾರಿನಲ್ಲಿ  ಸುಸಜ್ಜಿತ ವ್ಯವಸ್ಥೆ
ಮಿಯ್ನಾರು ಕಂಬಳ ಗದ್ದೆಯಲ್ಲಿ ಮಳೆಗಾಲದಲ್ಲಿಯೂ ತರಬೇತಿಗೆ ಬೇಕಾದ ಪೂರ್ಣ ಸೌಕರ್ಯವಿದೆ. ಹೀಗಾಗಿ ಅವಿಭಜಿತ ದ.ಕ. ಜಿಲ್ಲೆಯ ಕೋಣಗಳನ್ನು ಕುದಿ ಕಂಬಳಕ್ಕಾಗಿ ಮಿಯ್ನಾರಿಗೆ ತರಲಾಗುತ್ತಿದೆ. ಕಂಬಳ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿ ಕುದಿ ಕಂಬಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಕೋಣಗಳಿಗೆ ಅಭ್ಯಾಸ
ಕೋಣಗಳಿಗೆ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಕುದಿ ಕಂಬಳ ನಡೆಸಲಾಗುತ್ತಿದೆ. ಆಗಸ್ಟ್‌ 15ರ (ತುಳು ತಿಂಗಳ ಸೋಣ) ಅನಂತರ ಪ್ರಾರಂಭವಾಗಿದೆ. ಉತ್ತಮವಾಗಿ ಓಡುವ ಕೋಣಗಳಿಗೆ ಅದಕ್ಕೆ ಹೊಂದಿಕೊಳ್ಳುವ ಜತೆಗಳ ಆಯ್ಕೆಯೂ ಮಾಡಲಾಗುತ್ತದೆ. 
ಸೀತಾರಾಮ ಶೆಟ್ಟಿ  ಬಂಟ್ವಾಳ, ಕೋಣಗಳ ಮಾಲಕ

Advertisement

 ತರಬೇತಿ ಶಿಬಿರ 
ಸದ್ಯ ಕೋಣಗಳಿಗೆ ಅಭ್ಯಾಸಕ್ಕಾಗಿ ಮಿಯ್ನಾರಿನಲ್ಲಿ ಕುದಿಕಂಬಳ ಕಂಬಳ ನಡೆಸಲಾಗುತ್ತಿದೆ. ಕಂಬಳ ಸಂರಕ್ಷಣೆಯ ನಿಟ್ಟಿನಲ್ಲಿ ಅಕಾಡೆಮಿ ಯಿಂದ ಈ ಬಾರಿ ತರಬೇತಿ ಶಿಬಿರ ನಡೆಸಲು ಚಿಂತನೆ ನಡೆಸಲಾಗಿದೆ. ತರಬೇತಿ ಪಡೆದ ಹಲವರು ಇಂದು ಯಶಸ್ವಿ ಓಟಗಾರರಾಗಿದ್ದಾರೆ.
ಗುಣಪಾಲ ಕಡಂಬ, ಕಂಬಳ ತಜ್ಞರು.

ಸುತ್ತೋಲೆ ಪ್ರಕಾರ ಕಂಬಳ
2018-19ನೇ ಸಾಲಿನಲ್ಲಿ ಕಂಬಳ ನಡೆಸಲು ಸಮಸ್ಯೆ ಎದು ರಾಗದು. ಹೀಗಾಗಿ ಕುದಿ ಕಂಬಳ ನಡೆಸಲಾಗುತ್ತಿದೆ. ಸರಕಾರ ಹೊರಡಿಸಿದ ಸುತ್ತೋಲೆ ಪ್ರಕಾರ ಕಂಬಳ ನಡೆಯಲಿದೆ. ಸೆ. 23ರಂದು ಈ ಕುರಿತ ಸಭೆ ನಡೆಯಲಿದೆ.
–  ಪಿ.ಆರ್‌. ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next