ಮೂಡುಬಿದಿರೆ: ಕೋಣಗಳ ಆರೋಗ್ಯದ ಹಿತದೃಷ್ಟಿ ಸಹಿತ ವಿವಿಧ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ನವೆಂಬರ್‌ನಲ್ಲಿ ಆರಂಭವಾಗುವ ಕಂಬಳ ಕೂಟಗಳನ್ನು ಮುಂದಿನ ವರ್ಷದ ಮಾರ್ಚ್‌ನೊಳಗಡೆ ಮುಗಿಸಲು ಕಂಬಳ ಸಮಿತಿ ಸಮಾಲೋಜನೆ ಸಭೆ ಚಿಂತನೆ ನಡೆಸಿದೆ.
ಸಮಾಜ ಮಂದಿರದಲ್ಲಿ ರವಿವಾರ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಮಿತಿಯ ಸಮಾಲೋಚನೆ ಸಭೆ ನಡೆದಿದ್ದು ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಂಬಳವನ್ನು ಶಿಸ್ತುಬದ್ಧವಾಗಿ ನಿಗ ದಿತ ಸಮಯದಲ್ಲಿ ಮುಗಿಸುವ ಹೊಣೆ ಕೇವಲ ವ್ಯವಸ್ಥಾಪಕರದಲ್ಲ. ಇದಕ್ಕೆ ದುಡಿಯುವ ಪ್ರತಿಯೊಬ್ಬರೂ ಜವಾಬ್ದಾರಿ ಎಂದು ರೋಹಿತ್ ಹೆಗ್ಡೆ ಹೇಳಿದರು.
ಸಮಿತಿಯ ಗೌರವ ಸಲಹೆಗಾರ ಭಾಸ್ಕರ್ ಎಸ್.ಕೋಟ್ಯಾನ್, ವಕ್ತಾರ ಗುಣಪಾಲ ಕಡಂಬ, ತೀರ್ಪುಗಾರರ ಸಂಚಾಲಕ ಸುರೇಶ್ ಕೆ. ಪೂಜಾರಿ ರೆಂಜಾಳ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್, ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ, ಚಂದ್ರಹಾಸ ಸನಿಲ್, ಕೇಶವ ಭಂಡಾರಿ, ವಕ್ತಾರ ರಾಜೀವ್ ಶೆಟ್ಟಿ ಎಡೂ¤ರು, ಕೋಶಾಧಿಕಾರಿ ಹರ್ಷವರ್ಧನ್ ಪಡಿವಾಳ್, ತೀರ್ಪುಗಾರರಾದ ಸುಧಾಕರ ಶೆಟ್ಟಿ ಮುಗರೋಡಿ, ರವೀಂದ್ರ ಕುಮಾರ್ ಕುಕ್ಕುಂದೂರು, ವಲೇರಿಯನ್ ಡೇಸ ಅಲ್ಲಿಪಾದೆ, ಪ್ರಮುಖರಾದ ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ ಮತ್ತಿತರರು ಉಪಸ್ಥಿತರಿದ್ದರು.