ಬೆಂಗಳೂರು: ಕರಾವಳಿಯ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಕಂಬಳ ಕ್ರೀಡಾಕೂಟವನ್ನು ಬೆಂಗಳೂರಿಗೆ ಪರಿಚಯಿಸಲು ಅಗತ್ಯವಿರುವ ಸಿದ್ಧತೆಗಳು ನಡೆಯುತ್ತಿದೆ.
ಈಗಾಗಲೇ ಕಂಬಳದ ಆಯೋಜನೆಗೆ ಸಂಬಂಧಿಸಿ ಎರಡು ಸುತ್ತಿನ ಮಾತುಕತೆ ಪೂರ್ಣಗೊಂಡಿದೆ.
ಕಂಬಳವನ್ನು ನಗರ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಇದಕ್ಕೆ ಮೈಸೂರು ಮಹಾರಾಣಿ ಹಾಗೂ ಯುವರಾಜರು ಮೌಖಿಕವಾಗಿ ಅನುಮತಿ ನೀಡಿದ್ದಾರೆ. 2 ಲಕ್ಷ ಮಂದಿ ವೀಕ್ಷಣೆಗೆ ಆಗಮಿಸಲಿದ್ದಾರೆ. ಎಲ್ಲ ಮಾತುಕತೆ ಪೂರ್ಣಗೊಂಡ ಬಳಿಕ ಕಂಬಳ ಆಯೋಜನೆ ಹಾಗೂ ವೀಕ್ಷಣೆಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ.
ಅರಮನೆ ಮೈದಾನದಲ್ಲಿ ನಿರ್ಮಿಸಲಾಗುವ ಕಂಬಳ ಕರೆಗಳನ್ನು ಶಾಶ್ವತವಾಗಿರಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಬೆಂಗಳೂರಿನ ಗಡಸು ನೀರು ಕೋಣಗಳಿಗೆ ಕುಡಿಯಲು ಸೂಕ್ತವೇ ಎನ್ನುವ ಕುರಿತು ತಿಳಿಯಲು ನೀರಿನ ಮಾದರಿಯನ್ನು ಬೆಂಗಳೂರು ಹಾಗೂ ಪುಣೆ ಲ್ಯಾಬ್‌ಗ ರವಾನಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ. ಇದರೆ ಜತೆಗೆ ಕಂಬಳ ಯಜಮಾನರ ವಿಶ್ವಾಸಕ್ಕೆ ತೆಗೆದುಕೊಂಡು ಕೋಣಗಳನ್ನು ಬೆಂಗಳೂರಿಗೆ ತರುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ಕಂಬಳವು ನವೆಂಬರ್ ತಿಂಗಳಿನಲ್ಲಿ ನಡೆಯುವ ಸಾಧ್ಯಗಳಿವೆ.