Advertisement

ಕಂಬಳ ಸಮಿತಿ ತುರ್ತು ಸಭೆ: ನಿಯಮ ತಿದ್ದುಪಡಿ 

12:21 AM Jan 05, 2023 | Team Udayavani |

ಮೂಡುಬಿದಿರೆ: ಜಿಲ್ಲಾ ಕಂಬಳ ಸಮಿತಿಯ ಆಶ್ರಯದಲ್ಲಿ ಕೋಣಗಳ ಯಜಮಾನರ ತುರ್ತುಸಭೆಯು ಕಡಲಕೆರೆ ನಿಸರ್ಗಧಾಮದ ಬಳಿ ಬುಧವಾರ ಸಂಜೆ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್‌ ಕುಮಾರ್‌ ಹೆಗ್ಡೆ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಕಂಬಳ ಕೂಟಗಳ ನಿಯಮಾವಳಿಗಳ ತಿದ್ದುಪಡಿಗಳಿಗೆ ಚರ್ಚೆ ನಡೆದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಮುಂದಿನ ಕಂಬಳಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನವರು ನೀಡಿರುವ ಸೆನ್ಸರ್‌ ಸಿಸ್ಟಂ ಅಳವಡಿಸುವುದು. ಅದರ ಪೂರ್ಣ ಜವಾಬ್ದಾರಿಯನ್ನು ಕಂಗಿನ ಮನೆ ವಿಜಯಕುಮಾರ್‌ಗೆ ನೀಡುವುದೆಂದು ನಿರ್ಧರಿಸಲಾಯಿತು. ತಾಂತ್ರಿಕ ದೋಷಗಳಿಂದ ಸೆನ್ಸರ್‌ ತೊಂದರೆಯಾದಲ್ಲಿ ಮೂರನೇ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿ ಮತ್ತು ಆಯಾಯ ಕಂಬಳ ಸಮಿತಿಯಿಂದ ನಿಯೋಜಿಸಲ್ಪಟ್ಟವರನ್ನು ನಿಯುಕ್ತಿ ಮಾಡುವುದು. 3ನೇ ತೀರ್ಪುಗಾರ ನೀಡುವ ತೀರ್ಮಾನದ ಹೊತ್ತಿನಲ್ಲಿ ಟಿವಿ ನೋಡಲು ಎರಡು ಕೋಣಗಳ ಪ್ರತಿನಿಧಿಗಳು ಅಥವಾ ಯಜಮಾನರಿಗೆ ಅವಕಾಶ ನೀಡಲಾಗುವುದು ಎಂದು ತೀರ್ಮಾನಿಸಲಾಯಿತು.

ತೀರ್ಪುಗಾರರು ಮದ್ಯ ಸೇವಿಸಿ ಭಾಗವಹಿಸುವಂತಿಲ್ಲ. ಯಾವುದೇ ಕಾರಣಕ್ಕೂ ಅಶಿಸ್ತು ಪ್ರದರ್ಶಿಸಿದಲ್ಲಿ ಅಂತಹವರನ್ನು ಮುಂದಿನ ಕಂಬಳಗಳಿಗೆ ಅಮಾನತುಗೊಳಿಸಲಾಗುವುದು. ತೀರ್ಪುಗಾರರು ಮತ್ತು ಉದ್ಘೋಷಕರು ಕಂಬಳಕ್ಕೆ ಸಂಬಂಧಪಡದ ವಿಷಯಗಳನ್ನು ಪ್ರಸ್ತಾವಿಸುವುದು ಸರಿಯಲ್ಲ. ಸ್ಪರ್ಧೆಗೆ ಕೋಣಗಳಿಗೆ ಕರೆಕೊಟ್ಟಾಗ ತತ್‌ಕ್ಷಣ ಕರೆಗೆ ಬರತಕ್ಕದ್ದು ಸಕಾರಣವಿಲ್ಲದೆ ವಿಳಂಬ ಮಾಡಿದಲ್ಲಿ ಸಮಿತಿಯಲ್ಲಿ ನಿಗದಿಪಡಿಸಲಾದ ಕಾಲಮಿತಿ ಆಧಾರದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ನಿರ್ಧರಿಸಲಾಯಿತು.

ಕಂಬಳ ಸಮಿತಿಯ ಉಪಾಧ್ಯಕ್ಷ ರಶ್ಮಿತ್‌ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿಯ ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಂಚಾಲಕ ಸುರೇಶ್‌ ಕೆ. ಪೂಜಾರಿ ಸಮಿತಿಯ ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್‌, ಪಿ.ಆರ್‌. ಶೆಟ್ಟಿ, ಕೋಣಗಳ ಯಜಮಾನರಾದ ಶಕ್ತಿಪ್ರಸಾದ್‌ ಶೆಟ್ಟಿ, ನಂದಳಿಕೆ ಶ್ರೀಕಾಂತ್‌ ಭಟ್‌, ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಬಜಪೆ ಗಂಧಬೆಟ್ಟು ಅರುಣ್‌ ಶೆಟ್ಟಿ, ಚಂದ್ರಹಾಸ್‌ ಸನಿಲ್‌, ರಂಜಿತ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next