Advertisement

ರಾಜ್ಯೋತ್ಸವ ನಾಡಿನ ಬಹು ದೊಡ್ಡ ಹಬ್ಬ: ರಮೇಶ

07:38 PM Nov 02, 2019 | Naveen |

ಕಮಲನಗರ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ತಹಶೀಲ್ದಾರ್‌ ರಮೇಶ ಪೇದ್ದೆ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ರಾಜ್ಯೋತ್ಸವ ಈ ನಾಡಿನ ಬಹು ದೊಡ್ಡ ಹಬ್ಬವಾಗಿದೆ ಎಂದು ನುಡಿದರು.

ಡಾ| ಚನ್ನಬಸವ ಪಟ್ಟದ್ದೇವರ ಟ್ರಸ್ಟ್‌ ಅಧ್ಯಕ್ಷ, ಬಾ.ನಾ.ಸೊಲ್ಲಾಪೂರೆ ಮಾತನಾಡಿ, ಕನ್ನಡಿಗರು ಮಾತನಾಡುವ ಪ್ರಾಂತ್ಯಗಳ ಕುರಿತು ತಿಳಿಸಿದರು. ಹಂಚಿ ಹೋಗಿದ್ದ ಕನ್ನಡ ನಾಡು ಈಗ ಗಟ್ಟಿಯಾಗಿ ಉಳಿದಿದೆ ಎಂದರು.

ಸಮಾಜ ಸೇವಕ ಗುರುನಾಥ ವಡ್ಡೆ ಮಾತನಾಡಿ, ಕನ್ನಡ ಯಾವ ಭಾಷೆ, ಜಾತಿ, ಧರ್ಮಕ್ಕೂ ಸೀಮಿತವಿಲ್ಲ. ಎಲ್ಲ ಕನ್ನಡಿಗರು ಕನ್ನಡ ನಾಡಿನ ಸೇವಕರು. ಪ್ರತಿಯೊಬ್ಬರಲ್ಲೂ ಕನ್ನಡದ ಕಿಚ್ಚು ಇರಬೇಕು. ಎಲ್ಲ ಜಾತಿ, ಧರ್ಮದಲ್ಲಿ ಭಾಷೆಯನ್ನೂ ಸಮಾನವಾಗಿ ಕಾಣಬೇಕು ಎಂದು ನುಡಿದರು.

ಜನಾರ್ಧನ ಸಾವರ್ಗೆಕರ್‌ ಮಾತನಾಡಿದರು. ಉಪತಹಶೀಲ್ದಾರ್‌ ಗೋಪಾಲಕೃಷ್ಣ, ಕಂದಾಯ ನಿರೀಕ್ಷಕರು ಮಲ್ಲಿಕಾರ್ಜುನ, ಶ್ರೀಧರ, ಶ್ರೀಕಾಂತ, ಮುಖಂಡರಾದ ಬಸವರಾಜ ಪಾಟೀಲ, ವೈಜನಾಥ ವಡ್ಡೆ, ಸಂತೋಷ ಸೊಲ್ಲಾಪೂರೆ, ರಾಜಶೇಖರ ಅಜ್ಜ, ಮನೋಹರ ಗಾಯಕವಾಡ, ಸಂಗ್ರಾಮಪ್ಪಾ ರಾಂಪೂರೆ, ಜ್ಞಾನೋಬಾ ಡೊಂಬಾಳೆ ಇದ್ದರು.

Advertisement

ಡಾ| ಚನ್ನಬಸವಪಟ್ಟದ್ದೇವರ ಗ್ರಂಥಾಲಯ: ಪಟ್ಟಣದ ಡಾ| ಚನ್ನಬಸವಪಟ್ಟದ್ದೇವರ ಗ್ರಂಥಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಟ್ರಸ್ಟ್‌ ಅಧ್ಯಕ್ಷ ಬಾ.ನಾ. ಸೊಲ್ಲಾಪೂರೆ ಅವರು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಸಮಾಜ ಸೇವಕ ಗುರುನಾಥ ವಡ್ಡೆ ಮಾತನಾಡಿದರು. ಎಂ.ಕೆ.ಗಾಯಕವಾಡ, ರಾಜಶೇಖರ ಅಜ್ಜ, ರಮೇಶ ಹಿಪ್ಪಳಗಾವೆ, ಸಿದ್ದು ರಾಂಪೂರೆ, ರಂಗರಾವ್‌ ಜಾಧವ, ಚಂದ್ರಕಾಂತ ಗಳಗೆ, ಮನೋಜ ಹಿರೇಮಠ, ಮಹಾದು ಬರ್ಗೆ, ರವೀಂದ್ರ ಅಮೀತ ಕುಲಕರ್ಣಿ, ಅಂತೇಶ್ವರ ಪಾಟೀಲ, ಜನಾರ್ಧನ ಸಾವರ್ಗೆಕರ್‌, ಓಂಕಾರ ಸೋಲ್ಲಾಪೂರೆ ಇನ್ನಿತರರು ಇದ್ದರು.

ಮುರುಗ(ಕೆ) ಗ್ರಾಮ: ಮುರುಗ(ಕೆ) ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಸಚಿನ ಜಾಧವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಮಂಠಾಳಕರ್‌, ಶಿಕ್ಷಕರಾದ ಲಲಿತಾಬಾಯಿ ಚಾಂಡೇಶ್ವರೆ, ಲತಾ ಢಗೆ, ಮಹಾದೇವ ಬಿರಾದಾರ, ಗ್ರಾಮದ ಯುವ ಮುಖಂಡರಾದವಿಶಾಲ ಜಾಧವ, ದಯಾನಂದ  ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next