Advertisement
ಪಟ್ಟಣದಲ್ಲಿ ನೀರಿನ ಸಮಸ್ಯೆ ದಿನೇ-ದಿನೇ ಹೆಚ್ಚಾಗುತ್ತಿದೆ. ಕೆಲವು ವಾರ್ಡ್ ಗಳಲ್ಲಿನ ಮನೆಯಲ್ಲಿರುವ ನಳಗಳಿಗೆ 5 ದಿನಕ್ಕೊಮ್ಮೆ, ಕೆಲವೆಡೆ 10-15 ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದಾರೆ. ಪಂಚಾಯತ ಅಧಿಕಾರಿ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಜನರು ಸಚಿವರ ಎದುರು ಗೋಳು ತೋಡಿಕೊಂಡರು. ನಂತರ ಸಚಿವರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಪಿಡಿಒ ವಿನೋದ ಕುಲಕರ್ಣಿ ಅವರನ್ನು ಕರೆಯಿಸಿ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು. ತಾಲೂಕಿನಲ್ಲಿರುವ ಕಬ್ಬು ಬೆಳೆಗಾರರು ಕಬ್ಬನ್ನು ಕಟಾವು ಮಾಡಿಸಿ ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿ ಸುಮಾರು 3 ತಿಂಗಳು ಕಳೆದರೂ ಅವರ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲದೇ ಕೆಲವು ತೊಗರಿ ಬೆಳೆಗಾರರಿಗೆ ಖಾತೆಗೆ ಹಣಜಮೆ ಮಾಡಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.