Advertisement

1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್‌

08:21 AM Nov 21, 2021 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾದ ಜೋ ಬೈಡೆನ್‌ ಅವರು, ಶನಿವಾರದಂದು ವಾರ್ಷಿಕವಾಗಿ ವೈದ್ಯಕೀಯ ತಪಾಸಣೆಗೆ (ಕಲೊನೊ ಸ್ಕೊಪಿ) ಒಳಗಾಗಿದ್ದ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಲ್ಪಾವಧಿಗೆ ಅಮೆರಿಕ  ಅಧ್ಯಕ್ಷೆಯಾಗಿ ಅಧಿಕಾರ ನಡೆಸಿದ್ದಾರೆ.

Advertisement

ಆ ಮೂಲಕ, ಅಧ್ಯಕ್ಷ ಸ್ಥಾನದಲ್ಲಿ ಕುಳಿತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೈಡೆನ್‌ ಅವರಿಗೆ ಅರಿವಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ಅಧ್ಯಕ್ಷೀಯ ಅಧಿಕಾರವನ್ನು ಕಮಲಾರಿಗೆ ಹಸ್ತಾಂತರಿಸಲಾಗಿತ್ತು.

ಅಮೆರಿಕದ ಕಾಲಮಾನ ಶನಿವಾರ ಬೆಳಗ್ಗೆ 10:10ರಿಂದ 11:35ರ ವರೆಗೆ (ಒಟ್ಟು 1 ಗಂಟೆ 25 ನಿಮಿಷ) ಕಮಲಾ ಅವರು ಅಧ್ಯಕ್ಷೆಯಾಗಿದ್ದರು ಎಂದು ವೈಟ್‌ಹೌಸ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next