ನ್ಯೂಯಾರ್ಕ್: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅಧ್ಯಕ್ಷೆಯಾದರೇ ಅಮೆರಿಕಾಕ್ಕೆ ಅವಮಾನ. ಜನರು ಆಕೆಯನ್ನು ಇಷ್ಟಪಡುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಒಂದು ವೇಳೆ ಈ ಬಾರಿಯ ಚುನಾವಣೆಯಲ್ಲಿ ಜೋ ಬಿಡೆನ್ ವಿಜೇತರಾದರೇ ಚೀನಾ ಗೆಲುವು ಸಾಧಿಸಿದಂತೆ. ಜಾಗತಿಕ ಇತಿಹಾಸದಲ್ಲೇ ಅತ್ಯುತ್ತಮ ಆರ್ಥಿಕತೆಯನ್ನು ನಾವು ಸೃಷ್ಟಿಸಿದ್ದೆವು. ಆದರೇ ಚೀನಾ ಪ್ಲೇಗ್ ನಿಂದ ಅವೆಲ್ಲಾ ನಾಮಾವಶೇಷವಾದವು. ಇದೀಗ ಆರ್ಥಿಕತೆಯನ್ನು ಮತ್ತೆ ಬಲಿಷ್ಠವಾಗಿಸಸುತ್ತಿದ್ದೇವೆ ಎಂದು ನಾರ್ಥ್ ಕರೋಲಿನಾ ದಲ್ಲಿ ನಡೆದ ರ್ಯಾಲಿ ಉದ್ದೇಶಿಸಿ ಮಾತನಾಡಿದರು.
ಜನತೆ ಕಮಲಾ ಹ್ಯಾರಿಸ್ ಅವರನ್ನು ಇಷ್ಟಪಡುವುದಿಲ್ಲ. ಯಾರೂ ಕೂಡ ಇಷ್ಟಪಡಲ್ಲ. ಆಕೆ ಅಮೆರಿಕಾದ ಮೊದಲ ಅಧ್ಯಕ್ಷೆಯಾಗುವುದು ಸಾಧ್ಯವೇ ಇಲ್ಲ. ಹಾಗಾದರೇ ಅದು ದೇಶಕ್ಕೆ ಅವಮಾನ ಎಂದು ತಿಳಿಸಿದ್ದಾರೆ.
ಇದು ಸ್ಪಷ್ಟ. ಚೀನಾ ಮತ್ತು ದಂಗೆಕೋರರು ಜೋ ಬಿಡೆನ್ ಗೆಲವು ಸಾಧಿಸಬೇಕೆಂದು ಬಯಸುತ್ತಿದ್ದಾರೆ. ಯಾಕೆಂದರೇ ಬಿಡೆನ್ ನೀತಿ ಅಮೆರಿಕಾದ ಕುಸಿತಕ್ಕೆ ಕಾರಣವಾಗುತ್ತದೆ ಎಂಬುದು ಅವರಿಗೆ ಮೊದಲೇ ತಿಳಿದಿದೆ. ಅದಾಗ್ಯೂ ಜೋ ಬಿಡೆನ್, ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷೆ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಅಚ್ಚರಿಯೇ ಸರಿ. ಯಾಕೆಂದರೇ ಅದಾಗಲೇ ಅಧ್ಯಕ್ಷ ಸ್ಥಾನ ರೇಸ್ ನಿಂದ ಹೊರಗುಳಿದಿದ್ದರು ಎಂದು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಈ ವರ್ಷದ ನವೆಂಬರ್ 3ರಂದು ನಡೆಯಲಿದೆ.