Advertisement
ಜತೆಗೆ ಅಲ್ಲಿನ ಪಕ್ಷಗಳು ನವೆಂಬರ್ ಚುನಾವಣೆಗಾಗಿ ಮೈತ್ರಿ ಕೂಟ ರಚನೆಯ ಘೋಷಣೆ ಮಾಡುವ ಮುನ್ನವೇ ಹೊಸ ಪಕ್ಷ ಉದಯವಾಗಬೇಕೆನ್ನುವುದು ಅವರ ಮಹತ್ವಾಕಾಂಕ್ಷೆ ಎನ್ನಲಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಹಾಲಿ ದಸರೆ ಅಥವಾ ಗಾಂಧಿ ಜಯಂತಿಯಂದು ಹೊಸ ಪಕ್ಷ ಘೋಷಣೆ ಸಾಧ್ಯತೆ ಇದೆ. ಸೆ.15ರಂದು ಚೆನ್ನೈನಲ್ಲಿ ಮತ್ತು ಸೆ.16ರಂದು ಕಲ್ಲಿಕೋಟೆಯಲ್ಲಿ ದೊಡ್ಡ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದಾರೆ ಕಮಲ್ ಹಾಸನ್. ಕೆಲ ದಿನಗಳ ಹಿಂದಷ್ಟೇ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ತಿರುವನಂತಪುರದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಎಡಪಕ್ಷಗಳ ನಿಲುವು ತಮಗೆ ಒಪ್ಪಿಗೆ ಎಂದು ಹೇಳಿದ್ದರು. ಹೀಗಾಗಿ ಅವರು ಸಿಪಿಎಂ ಸೇರಲಿದ್ದಾರೆ ಎಂದು ಹೇಳಲಾಗಿತ್ತು. Advertisement
ಮಾಸಾಂತ್ಯಕ್ಕೆ ಕಮಲ್ ಹೊಸ ಪಕ್ಷ ಶುರು?
08:40 AM Sep 14, 2017 | |
Advertisement
Udayavani is now on Telegram. Click here to join our channel and stay updated with the latest news.