Advertisement

ಕಠುವಾ ಗ್ಯಾಂಗ್‌ ರೇಪ್‌ : ನಟ ಕಮಲ ಹಾಸನ್‌ ಆಕ್ರೋಶ

11:53 AM Apr 13, 2018 | Team Udayavani |

ಚೆನ್ನೈ : ಜಮ್ಮು ಕಾಶ್ಮೀರದ ಕಠುವಾದಲ್ಲಿ  ಎಂಟು ವರ್ಷ ಪ್ರಾಯದ ಬಾಲಕಿಯ ಮೇಲೆ ನಡೆದಿರುವ ಗ್ಯಾಂಗ್‌ ರೇಪ್‌ ಮತ್ತು ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ತಮಿಳು ನಟ, ರಾಜಕಾರಣಿ ಕಮಲ ಹಾಸನ್‌, ಅಮಾಯಕ ಬಾಲಕಿಗೆ ಒದಗಿದ ದುರ್ಗತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

“ನಿಮ್ಮ ಸ್ವಂತ ಮಗಳಿಗೇ ಹೀಗಾಗಿದ್ದರೆ ಮಾತ್ರವೇ ನಿಮಗದರ ನೋವು ಅರ್ಥವಾಗುತ್ತಿತ್ತು’ ಎಂದು ಕಮಲ ಹಾಸನ್‌ ಟ್ವೀಟ್‌ ಮಾಡಿದ್ದಾರೆ. 

ಮಕ್ಕಳ್‌ ನೀತಿ ಮಯ್ಯಮ್‌ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿರುವ ಕಮಲ ಹಾಸನ್‌ ಅವರು ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ : “ನನ್ನನ್ನು ಕ್ಷಮಿಸು ಮಗುವೇ, ನಿನಗೆ ಈ ದೇಶವನ್ನು ನಾವು ಸುರಕ್ಷಿತವಾಗಿಸಿಲ್ಲ; ಆದರೆ ನಿನ್ನಂತಹ ನತದೃಷ್ಟ ಮಕ್ಕಳಿಗೆ ನ್ಯಾಯ ಒದಗಿಸಲು ನಾನು ಹೋರಾಡುತ್ತೇನೆ’. 

Advertisement

Udayavani is now on Telegram. Click here to join our channel and stay updated with the latest news.

Next