ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್, ಕಾಶ್ಮೀರದಲ್ಲಿ ಇನ್ನೂ ಯಾಕೆ ಸರಕಾರ ಜನಮತ ಗಣನೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಚೆನ್ನೈಯಲ್ಲಿ ಮಾತನಾಡಿದ ಅವರು ಜನಮತ ಸಂಗ್ರಹ ಮಾಡಿ. ಜನರು ಮಾತನಾಡಲು ಅವಕಾಶ ನೀಡಿ. ಯಾಕೆ ಇನ್ನೂ ಈ ಪ್ರಕ್ರಿಯೆ? ಯಾಕೆ ಸರಕಾರ ಹೆದರುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಫೋಟೋಗಳನ್ನು ಜನರು ಹೀರೋಗಳೆಂದು ಬಿಂಬಿಸಿ ಪ್ರದರ್ಶಿಸುತ್ತಿದ್ದಾರೆ. ಇದು ಅತ್ಯಂತ ಮೂರ್ಖ ಸಂಗತಿ. ಅದೇ ರೀತಿ ಭಾರತ ಕೂಡ ನಡೆದುಕೊಳ್ಳುತ್ತಿದೆ. ಇದು ಸರಿಯಲ್ಲ. ಭಾರತ ಉತ್ತಮ ದೇಶ ಎಂದು ನಾವು ಸಾಬೀತುಪಡಿಸಬೇಕಾದರೆ, ನಾವೂ ಅದೇ ರೀತಿ ನಡೆದುಕೊಳ್ಳಬಾರದು. ಈ ವಿಷಯವನ್ನು ಮೂರು ದಶಕಗಳ ಹಿಂದೆ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಿದ್ದೆ ಎಂದು ಕಮಲ್ ಹೇಳಿದ್ದಾರೆ. ಕಮಲ್ ಹೇಳಿಕೆ ದೇಶಾದ್ಯಂತ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.