Advertisement

ತಮಿಳುನಾಡು ರಾಜಕಾರಣ ಬದಲಾಗಬಲ್ಲುದು: ಕಮಲಹಾಸನ್‌ ವಿಶ್ವಾಸ

11:32 AM Sep 15, 2017 | udayavani editorial |

ಚೆನ್ನೈ : “ತಮಿಳುನಾಡು ರಾಜಕಾರಣ ಬದಲಾಗಲು ಸಾಧ್ಯವಿದೆ ಮತ್ತು ನಾನು ಆ ಬದಲಾವಣೆಯನ್ನು ತರಲು ಬಯಸಿದ್ದೇನೆ’ ಎಂದು ತಮಿಳು ಚಿತ್ರರಂಗದ ಮೆಗಾ ಸ್ಟಾರ್‌ ಕಮಲಹಾಸನ್‌ ಹೇಳಿದ್ದಾರೆ.

Advertisement

ಹೊಸ ರಾಜಕೀಯ ಪಕ್ಷವನ್ನು ತಾನು ಶೀಘ್ರವೇ ಆರಂಭಿಸುವುದಾಗಿ ಈಚೆಗಷ್ಟೇ ಭಾರೀ ದೊಡ್ಡ ಬಾಂಬ್‌ ಸಿಡಿಸಿದ್ದ 62ರ ಹರೆಯದ ನಟ ಕಮಲಹಾಸನ್‌, ತಮಿಳು ನಾಡಿನ ಎಲ್ಲ ಸಮಸ್ಯೆಗಳಿಗೆ ತನ್ನಿಂದ ತತ್‌ಕ್ಷಣದ ಪರಿಹಾರವೇನೂ ಸಿಗದು; ಆದರೂ ತಾನು ರಾಜ್ಯ ರಾಜಕಾರಣದಲ್ಲಿ, ಆಡಳಿತೆಯಲ್ಲಿ ಬದಲಾವಣೆಯ ಪ್ರಕ್ರಿಯೆಯನ್ನು ಆರಂಭಿಸಲು ಬಯಸಿದ್ದೇನೆ ಎಂದು “ದ ಕ್ವಿಂಟ್‌’ಗೆ ನೀಡಿದ ಸಂದರ್ಶನದಲ್ಲಿ  ಹೇಳಿದರು.

ತನ್ನ ರಾಜಕೀಯ ಮಹತ್ವಾಕಾಂಕ್ಷೆಯ ಬಗ್ಗೆ ಸ್ಪಷ್ಟ ಉತ್ತರ ನೀಡಲು ಇಷ್ಟಪಡದ ಕಮಲಹಾಸನ್‌, “ನನಗೆ ನೀವು ಓಟ್‌ ಹಾಕಿ ಬಳಿಕ ನನ್ನನ್ನು ಕಿತ್ತೂಗೆಯಲು ಐದು ವರ್ಷ ತೆಗೆದುಕೊಳ್ಳಬೇಡಿ; ನಾನು ಸರಿಯಾಗಿ ಕೆಲಸ ಮಾಡಲಿಲ್ಲ ಎಂದಾದರೆ ತತ್‌ಕ್ಷಣವೇ ನನ್ನನ್ನು ಕಿತ್ತೆಸೆಯಿರಿ’ ಎಂದು ಹೇಳಿದರು. 

ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರದ ವಿರುದ್ಧ  ಹೋರಾಡುವುದೇ ನನ್ನ ಮುಖ್ಯ ಗುರಿಯಾಗಿದೆ; ಒಂದೋ ನಾನು ರಾಜಕಾರಣದಿಂದ ತೊಲಗಬೇಕು; ಇಲ್ಲವೇ ಭ್ರಷ್ಟಾಚಾರದ ಪಿಡುಗು ರಾಜಕಾರಣದಿಂದ ತೊಲಗಬೇಕು’ ಎಂದು ಕಮಲಹಾಸನ್‌ ನಿಷ್ಠುರವಾಗಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next