ಚೆನೈ: ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಶೀಘ್ರ ಗುಣಮುಖರಾಗಲಿ ಎಂದು ಎ.ಆರ್ ರೆಹಮಾನ್, ಇಳಯರಾಜ, ಧನುಷ್ ಸೇರಿದಂತೆ ಹಲವರು ಹಾರೈಸಿದ್ದರು. ಇದೀಗ ಕಮಲ್ ಹಾಸನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಕಮಲ್ ಹಾಸನ್ “ನಾವು ನಿಮಗಾಗಿ ಕಾಯುತ್ತಿದ್ದೇವೆ. ನೀವು ನನ್ನ ಧ್ವನಿಯಾಗಿ, ನಾನು ನಿಮ್ಮ ಮುಖವಾಗಿ ಹಲವಾರು ವರ್ಷಗಳಿಂದ ಬಾಳಿದ್ದೇವೆ. ನಿಮ್ಮ ಧ್ವನಿ ಇನ್ನು ಜೋರಾಗಿ ಕೇಳಿಸಬೇಕಾಗಿದೆ. ಶೀಘ್ರ ಗುಣಮುಖರಾಗಿ ಬನ್ನಿ ಸಹೋದರ ಎಂದು ಬರೆದಿದ್ದಾರೆ.
ಕಮಲ್ ಹಾಸನ್ ಮತ್ತು ಎಸ್ ಪಿ. ಬಾಲಸುಬ್ರಹ್ಮಣ್ಯಂ ಹಲವಾರು ಸಿನಿಮಾಗಳಿಗೆ ಜೊತೆಗೂಡಿ ಕಾರ್ಯನಿರ್ವಹಿಸಿದ್ದರು. ಇದೀಗ ಎಸ್.ಪಿ.ಬಿ ತೀವ್ರ ಅನಾರೋಗ್ಯದಿಂದ ಹಾಗೂ ಕೋವಿಡ್ 19 ಕಾರಣದಿಂದ ಚೈನೈನ ಎಂಜಿಎಂ ಹಾಸ್ಪತ್ರೆಯಲ್ಲಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ.
ಎಸ್.ಪಿ.ಬಿ ಪುತ್ರ ಎಸ್.ಪಿ ಚರಣ್ ಕೂಡ ತಮ್ಮ ತಂದೆ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಶೀಘ್ರ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.