Advertisement
– ಕಾಮಕಸ್ತೂರಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.– ಎಲೆಯನ್ನು ಕುದಿಸಿ ಕಷಾಯ ಮಾಡಿ, ಜೇನುತುಪ್ಪ ಬೆರೆಸಿ ಕುಡಿದರೆ ಶೀತಬಾಧೆ ಗುಣವಾಗುತ್ತದೆ.
-ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಲ್ಲಿ ನೆನೆಸಿ, ಬೆಳಗ್ಗೆ ಆ ನೀರನ್ನು ಸಕ್ಕರೆ ಜೊತೆ ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ.
-ಹೂವುಗಳನ್ನು ನೀರಿನಲ್ಲಿ ಅರೆದು, ಬೆಳಗ್ಗೆ ಮತ್ತು ರಾತ್ರಿ ಜೇನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಗುಣವಾಗುತ್ತದೆ.
– ಕಾಮಕಸ್ತೂರಿ ಬೀಜಗಳನ್ನು 2-3 ಗಂಟೆ ನೆನೆಸಿ, 1 ಲೋಟ ಹಾಲು ಮತ್ತು 1 ಚಮಚ ಸಕ್ಕರೆ ಜೊತೆ ಸೇವಿಸಿದರೆ ಪಿತ್ತ ಶಮನವಾಗುತ್ತದೆ.
-ಬೀಜವನ್ನು ತಣ್ಣೀರಿನಲ್ಲಿ ನೆನೆಸಿ, ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ರಕ್ತ ಭೇದಿ ನಿಲ್ಲುತ್ತದೆ.