Advertisement

ಹೋರಾಟ ತೀವ್ರ ಗೊಳಿಸಲು ಕಲ್ಯಾಣಶ್ರೀ ಸಲಹೆ

07:35 PM Aug 25, 2022 | Team Udayavani |

ಭಾಲ್ಕಿ: ಈಗಾಗಲೇ ಕರ್ನಾಟಕದಲ್ಲಿ ಸುಮಾರು 25 ಸಾವಿರ ಬೇಡ ಜಂಗಮರಿಗೆ ಪ್ರಮಾಣ ಪತ್ರ ದೊರೆತಿದೆ. ಇದನ್ನೇ ಎಲ್ಲರಿಗೂ ಮುಂದುವರಿಸಬೇಕು ಎಂದು ಬಳ್ಳಾರಿಯ ಕಲ್ಯಾಣ ಶ್ರೀಗಳು ಆಗ್ರಹಿಸಿದ್ದಾರೆ.

Advertisement

ಪಟ್ಟಣದ ತಹಸೀಲ ಕಚೇರಿ ಎದುರಿಗೆ ಟೆಂಟ್‌ ಹೊಡೆದು ಸುಮಾರು 48 ದಿವಸಗಳ ಕಾಲ ಹೋರಾಟ ನಡೆಸುತ್ತಿರುವ ಬೇಡ ಜಂಗಮ ಸಮಾಜದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದ ಅವರು, ಬೇಡ ಜಂಗಮ ಸಮಾಜದ ಮುಖಂಡರು, ನಿರಂತರ, ಚಾಚು ತಪ್ಪದೇ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ. ನಮ್ಮ ಹೋರಾಟ ನ್ಯಾಯಬದ್ಧ, ಸಂವಿಧಾನ ಬದ್ಧ ಹೋರಾಟವಾಗಿದೆ. ನಾವೇನು ಪ್ರಮಾಣ ಪತ್ರ ಹೊಸದಾಗಿ ನೀಡಬೇಕೆಂದು ಕೇಳುತಿಲ್ಲ. ಈಗಾಗಲೇ ಪಡೆದುಕೊಂಡವರ ಜೊತೆಯಲ್ಲಿ ಜಂಗಮ ಸಮಾಜದ ಕಡು ಬಡವರಿಗೂ ಪ್ರಮಾಣ ಪತ್ರ ದೊರೆಯಬೇಕು ಎನ್ನುವ ಉದ್ದೇಶದಿಂದ ಹೋರಾಟ ಮುಂದುವರಿಸಿದ್ದೇವೆ. ಗೋವಿಂದ ಕಾರಜೋಳ ಅವರು ಬೇಡ ಜಂಗಮರು ಹಂದಿ ಮಾಂಸ ತಿನ್ನುತ್ತಾರೆ, ಕುಡಿಯುತ್ತಾರೆ ಎಂದು ಸತ್ತು ಹೋದ ಕಾನೂನಿನ ಬಗ್ಗೆ ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದಕ್ಕೆ ಜಂಗಮರು ದೃತಿಗೆಡದೇ ಹೋರಾಟ ಮುಂದುವರೆಸಬೇಕು. ಬ್ರಿಟಿಷರ ಆಡಳಿತದಲ್ಲಿ, ನಿಜಾಮರ ಆಡಳಿತದಲ್ಲಿ ನಮಗೆ ನ್ಯಾಯ ಸಿಕ್ಕಿದೆ. ಅದೇ ರೀತಿ ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್‌ ಅವರೂ ಕೂಡ ಬೇಡ ಜಂಗಮರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವುದನ್ನು ಪರಿಗಣಿಸಿ ಸಂವಿಧಾನದಲ್ಲಿ ನಮಗೆ ನ್ಯಾಯ ಕೊಟ್ಟಿದ್ದಾರೆ. ಆದರೆ, ಆಡಳಿತ ಮಾಡುತ್ತಿರುವ ಜನಪ್ರತಿನಿಧಿಗಳು, ಕಾನೂನು ಮಾಡುತ್ತಿರುವ ಅಧಿಕಾರಿಗಳ ಕೈ ಹಿಡಿದಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಹೋರಾಟಕ್ಕೆ ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಸಾಥ್‌ ನೀಡಿ, ಕಲ್ಯಾಣಶ್ರೀಗಳವರೊಂದಿಗೆ ಭಾಗವಹಿಸಿದ್ದರು. ಭಾಲ್ಕಿಯ ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಡಾ| ಪ್ರಭುಲಿಂಗ ಸ್ವಾಮಿ, ಗುರಯ್ನಾ ಸ್ವಾಮಿ, ಪಂಚಯ್ನಾ ಸ್ವಾಮಿ ಮಾತನಾಡಿದರು.

ಸುಭಾಷ ಕೆನಾಡೆ, ಸತೀಶ ಸ್ವಾಮಿ, ಶಂಭುಲಿಂಗ ಸ್ವಾಮಿ, ಶಿವಶರಣಯ್ನಾ ಸ್ವಾಮಿ, ಶಿವಯೋಗಿ ಸ್ವಾಮಿ, ಕಾರ್ತಿಕ ಸ್ವಾಮಿ, ಮನ್ಮಥಯ್ನಾ ಸ್ವಾಮಿ, ಶಿವಾನಂದ ಸ್ವಾಮಿ, ಕಲ್ಲಯ್ನಾ ಸ್ವಾಮಿ, ಧೂಳಯ್ನಾ ಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next