Advertisement

ಕಲ್ಯಾಣ-ಕಿತೂರು ಕರ್ನಾಟಕ ಮರು ನಾಮಕರಣಕ್ತೆ ಒತ್ಕಾಯ

10:10 AM Jul 16, 2018 | |

ಕಲಬುರಗಿ: ಅಖಂಡ ಕರ್ನಾಟಕ ನಿರ್ಮಾಣದ ನೆಟ್ಟಿನಲ್ಲಿ ರಾಜ್ಯ ಸರ್ಕಾರ ಹೈದ್ರಾಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು-ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಬೇಕೆಂದು ನಾಡೋಜ ಡಾ| ಎಂ. ಚಿದಾನಂದ ಮೂರ್ತಿ ಆಗ್ರಹಿಸಿದರು.

Advertisement

ತಾಲೂಕಿನ ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಕರ್ನಾಟಕ ಕೇಂದ್ರೀಯ ವಿವಿಯಿಂದ ಗೌರವ ಡಾಕ್ಟರೆಟ್‌ ಪಡೆದುದ್ದರ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಶಕ-ದಶಕಗಳು ಕಳೆದರೂ ಇಲ್ಲಿಯವರೆಗೂ ಹೈದ್ರಾಬಾದ ಕರ್ನಾಟಕ-ಮುಂಬೈ ಕರ್ನಾಟಕ ಎನ್ನುವ ದಾಸ್ಯದ ಮನೋಭಾವದಿಂದ ಹೊರ ಬರುವಂತಾಗಲು ಸರ್ಕಾರ ಮರು ಕೂಡಲೇ ನಾಮಕರಣ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ನೆಲ ಅತ್ಯಂತ ಪವಿತ್ರಮಯ ಮತ್ತು ಪುಣ್ಯಮಯವಾಗಿದೆ. ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ಪರಿಚಯಿಸಿದ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ ವಚನ ಸಾಹಿತ್ಯ, ದಾಸ ಸಾಹಿತ್ಯ ಒದಗಿಸಿದ ಈ ನೆಲದಲ್ಲಿ ಜನಪದ ಸಾಹಿತ್ಯವೂ ಬಹುದೊಡ್ಡ ಮಟ್ಟಿಗೆ ನಾಡಿಗೆ
ಕೊಡುಗೆಯಾಗಿ ಬಂದಿದೆ. ಕನ್ನಡಿಗರ ಉದಾಸೀನತೆಯಿಂದ ಕರ್ನಾಟಕದ ಅರ್ಧದಷ್ಟು ಭಾಗವನ್ನು ಈಗಾಗಲೇ ನಾವು ಕಳೆದುಕೊಂಡಿದ್ದೇವೆ. ನಾಡು ನುಡಿಗಾಗಿ ಸದಾ ಕಾಲ ಜಾಗೃತರಾಗಿ  ಹೋರಾಡುವುದು ಅಗತ್ಯವಾಗಿದೆ ಎಂದರು.

ಪ್ರಸ್ತುತ ವೀರಶೈವ ಲಿಂಗಾಯತ ಎನ್ನುವ ಭೇದ ಮಾಡುವ ಮೂಲಕ ಸರ್ಕಾರವೇ ಅಖಂಡತೆಗೆ ಪೆಟ್ಟು ಕೊಟ್ಟಿದ್ದು, ಅತ್ಯಂತ ನೋವಿನ ಸಂಗತಿಯಾಗಿದೆ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎನ್ನುವುದನ್ನು ಅನೇಕ ಉದಾಹರಣೆಗಳ ಮೂಲಕ ಸಭಿಕರ ಮುಂದೆ ತೆರೆದಿಟ್ಟ ಅವರು, ಎಲ್ಲರನ್ನು ತೆಗೆದುಕೊಂಡು ಹೋಗುವ ಸರಕಾರಗಳು ನಮಗೆ ಬೇಕೇ ಹೊರತು ಒಗ್ಗಟ್ಟನ್ನು ಒಡೆದು ರಾಜಕೀಯ ಲಾಭ ಮಾಡಿಕೊಳ್ಳುವ ಮನಸ್ಥಿತಿ ಇಂದು ಹೆಚ್ಚಾಗುತ್ತಿರುವುದು ಖೇದಕರವಾಗಿದೆ ಎಂದು ವಿಷಾದಿಸಿದರು.

ಸಾನ್ನಿಧ್ಯ ವಹಿಸಿದ್ದ ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿ, ಸಾಹಿತ್ಯ ಸಂಶೋಧನೆ ಕ್ಷೇತ್ರದಲ್ಲಿ ಎಂ. ಚಿದಾನಂದಮೂರ್ತಿ ಅವರ ಕೊಡುಗೆ ಅಪಾರವಾಗಿದೆ. ಹಿರಿಯ ಚೇತನದ ನಿಸ್ವಾರ್ಥ ಸೇವೆ ಗುರುತಿಸಿ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್‌ ಪ್ರದಾನ ಮಾಡಿರುವುದು ಸಂಭ್ರಮದ ಸಂಗತಿಯಾಗಿದೆ ಎಂದರು.

Advertisement

ಶರಣಬಸವ ವಿಶ್ವ ವಿದ್ಯಾಲಯದ ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೊಡ, ಯೋಗ ಸಾಧಕ ಗುರುಶಾಂತಪ್ಪ ಶೀಲವಂತ ಹಾಜರಿದ್ದರು. ಶಿವಶಂಕರ ಬಿರಾದಾರ ಪ್ರಾರ್ಥಿಸಿದರು, ಹಣಮಂತರಾಯ ಅಟ್ಟೂರ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ರವಿ ಶಹಾಪುರಕರ ವಂದಿಸಿದರು.

ಸಂತೋಷ ಆಡೆ, ಶಿವರಾಜ ಪಾಟೀಲ ಅವರಾದ, ಸಂಗಯ್ಯ ಸ್ವಾಮಿ, ಭೀಮಾಶಂಕರ ಚಕ್ಕಿ, ಶೀಲವಂತಯ್ಯ ಮಲ್ಯದ ಮಠ, ಸಂಜು ಟೆಂಗೆ, ಸುರೇಶ ತಂಗಾ, ಶ್ರವಣಕುಮಾರ ಮಠ ಹಾಗೂ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next