Advertisement

ಮಲ್ಲೇಶ್ವರದಲ್ಲಿ ಕಲ್ಯಾಣ್‌ ಜುವೆಲ್ಲರಿ ಶೋ ರೂಂ

12:38 PM Dec 09, 2017 | |

ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿ ನೂತನವಾಗಿ ಆರಂಭವಾಗಿರುವ ಕಲ್ಯಾಣ್‌ ಜುವೆಲ್ಲರ್ ಮಳಿಗೆಯನ್ನು ಕಲ್ಯಾಣ್‌ ಜುವೆಲ್ಲರ್ನ ಪ್ರಚಾರ ರಾಯಭಾರಿಗಳಾದ ನಟ ಶಿವರಾಜ್‌ಕುಮಾರ್‌, ಹಿರಿಯ ತಮಿಳು ನಟ ಪ್ರಭು ಅವರು ಶುಕ್ರವಾರ ಉದ್ಘಾಟಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

Advertisement

ಕಲ್ಯಾಣ್‌ ಜುವೆಲ್ಲರ್ ತನ್ನ ಮೊದಲ ಮಳಿಗೆಯನ್ನು 2010ರಲ್ಲಿ ಬೆಂಗಳೂರಿನಲ್ಲಿ ಆರಂಭಿದ ನಂತರ ರಾಜ್ಯಾದ್ಯಂತ ಒಟ್ಟು 13 ಸ್ಥಳಗಳಲ್ಲಿ ಶೋರೂಂಗಳನ್ನು ಹೊಂದಿದೆ. ಬೆಂಗಳೂರು ಯಾವಾಗಲೂ ನಮ್ಮ ಹೃದಯದಲ್ಲಿ ಒಂದು ವಿಶೇಷ ಸ್ಥಾನ ಪಡೆದಿದೆ. ನಾವು ನಮ್ಮ ಗ್ರಾಹಕರಿಗೆ ಆಕರ್ಷಕ ಶಾಪಿಂಗ್‌ ಅನುಭವ ನೀಡಲು ಬಯಸುತ್ತೇವೆ.

ಗ್ರಾಹಕರು ವೈವಿಧ್ಯದ ವಿನ್ಯಾಸದ ಗುಣಮಟ್ಟದ ಆಭರಣಗಳನ್ನು ಅನೇಕ ಲಾಭಗಳು ಮತ್ತು ಉನ್ನತ ಗ್ರಾಹಕ ಸೇವೆ ನಿರೀಕ್ಷಿಸಬಹುದು. ಈ ಶೋರೂಂನಲ್ಲಿ ಕಲ್ಯಾಣ್‌ನ ದೇಶದ ಎಲ್ಲಾ ಭಾಗಗಳ ಚಿನ್ನ, ವಜ್ರ, ಕತ್ತರಿಸದ ಮತ್ತು ಅಮೂಲ್ಯ ಕಲ್ಲುಗಳ ಆಭರಣಗಳನ್ನು ಕಾಣಬಹುದು ಎಂದು ಅಧ್ಯಕ್ಷ ಟಿ.ಎಸ್‌.ಕಲ್ಯಾಣರಾಮನ್‌ ಹೇಳಿದರು.

ನಮ್ಮ ಮಳಿಗೆಗಳಲ್ಲಿ ಕಲ್ಯಾಣ್‌ನ ಜನಪ್ರಿಯ ಗೃಹ ಬ್ರ್ಯಾಂಡ್‌ಗಳ ವೈವಿಧ್ಯದ ಆಭರಣಗಳ ದಾಸ್ತಾನು ಇರಲಿದೆ. ಒಂದು ಲಕ್ಷಕ್ಕೂ ಅಧಿಕ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳನ್ನು ನೀಡಿದ್ದು, ದೈನಂದಿನ ಬಳಕೆ ಸೇರಿದಂತೆ ವಿಶೇಷ ಆಚರಣೆಗಳಲ್ಲಿ ಧರಿಸಲು ಸೂಕ್ತವಾದ ವೈವಿಧ್ಯದ ಆಭರಣಗಳಿವೆ ಎಂದು ಹೇಳಿದರು. ಕಲ್ಯಾಣ್‌ ಜುವೆಲ್ಲರ್ನ ಅಧ್ಯಕ್ಷರೂ ಆದ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌. ಕಲ್ಯಾಣರಾಮನ್‌ ಮತ್ತು ಕಾರ್ಯಕಾರಿ ನಿರ್ದೇಶಕರಾದ ರಾಜೇಶ್‌ ಕಲ್ಯಾಣರಾಮನ್‌ ಮತ್ತು ರಮೇಶ್‌ ಕಲ್ಯಾಣರಾಮನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next