Advertisement
ಶ್ರೀಕೃಷ್ಣನ ಕ್ಷೇತ್ರದಲ್ಲಿ ಕಲ್ಯಾಣ್ ಜುವೆಲರ್ಸ್ ಮಳಿಗೆ ಆರಂಭಗೊಳ್ಳುತ್ತಿದ್ದು ಎಲ್ಲೆಡೆ ಕಲ್ಯಾಣವಾಗಲಿ. ಉತ್ತಮ ಗುಣಮಟ್ಟದ ಆಭರಣಗಳು ಸ್ಪರ್ಧಾತ್ಮಕ ದರದಲ್ಲಿ ದೊರಕಲಿ. ನೀವೆಲ್ಲರೂ ಪ್ರೋತ್ಸಾಹ ಕೊಡಬೇಕು ಎಂದು ಉಡುಪಿ ಹಿಂದಿನ ಡಯಾನ ಸರ್ಕಲ್ ಎದುರು ಆರಂಭಗೊಂಡ ಕಲ್ಯಾಣ್ ಜುವೆಲರ್ಸ್ ಮಳಿಗೆಯ ಹೊರಗೆ ನಿರ್ಮಿಸಿದ ವೇದಿಕೆಯಲ್ಲಿ ಶಿವರಾಜ್‌ಕುಮಾರ್ ಹೇಳಿದರು.
2010ರಲ್ಲಿ ಬೆಂಗಳೂರು ಮಳಿಗೆ ಮೂಲಕ ರಾಜ್ಯದಲ್ಲಿ ವ್ಯವಹಾರ ಆರಂಭಿಸಿದ ಕಂಪೆನಿ ಬಳಿಕ ಮೈಸೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿಯಲ್ಲಿ ಮಳಿಗೆಗಳನ್ನು ತೆರೆಯಿತು. ಹೊಸ ಮಳಿಗೆಗಳ ಮೂಲಕ ರಾಜ್ಯದಲ್ಲಿ ಒಟ್ಟು 12 ಮಳಿಗೆಗಳನ್ನು ಹೊಂದಿದಂತಾಗಿದೆ. ‘ಆಭರಣ ಉದ್ಯಮದ ವ್ಯವಹಾರಕ್ಕೆ ಕರ್ನಾಟಕದಲ್ಲಿ ವಿಪುಲ ಅವಕಾಶಗಳಿವೆ. ಹೀಗಾಗಿ ಐದು ಹೊಸ ಮಳಿಗೆಗಳನ್ನು ತೆರೆದು ಗ್ರಾಹಕ ಕೇಂದ್ರಿತ ಗ್ರಾಹಕ ಕೇಂದ್ರಿತ ಮಾರು ಕಟ್ಟೆಯನ್ನು ಪ್ರಗತಿ ಮಾಡುತ್ತಿದ್ದೇವೆ. ಈ ಮೂಲಕ ಗ್ರಾಹಕರಿಗೆ ವಿಶ್ವದರ್ಜೆಯ ಆಭರಣಗಳನ್ನು ಪೂರೈಸುತ್ತಿದ್ದು, ಗ್ರಾಹಕರಿಗೆ ತಮಗನಿಸಿದ ಕನಸಿನ ಆಭರಣಗಳನ್ನು ಖರೀದಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಮಳಿಗೆಯಲ್ಲಿ ಚಿನ್ನ, ವಜ್ರ, ಸ್ಟೋನ್ ಸ್ಟಡೆಡ್ ಆಭರಣಗಳ ವಿನ್ಯಾಸಗಳು ಸೇರಿದಂತೆ ಆಕರ್ಷಕ ಆಭರಣಗಳು ಸಿಗಲಿವೆ’ ಎಂದು ಟಿ.ಎಸ್. ಕಲ್ಯಾಣರಾಮನ್ ತಿಳಿಸಿದರು. ಕುಂದಾಪುರದ ಮೀನಮ್ಮ| ಸೂಪರ್ ಸೂಪರ್ ಟೇಸ್ಟಮ್ಮ….
ಹಿತೈಷಿಗಳು ಹಾಡೊಂದನ್ನು ಹಾಡಲು ಒತ್ತಾಯಿಸಿದಾಗ ತಾನು ಅಭಿನಯಿಸಿದ ‘ಗಲಾಟೆ ಅಳಿಯಂದಿರು’ ಚಲನಚಿತ್ರದ ‘ಕುಂದಾಪುರದ ಮೀನಮ್ಮ| ಸೂಪರ್ ಸೂಪರ್ ಟೇಸ್ಟಮ್ಮ| ಮೋರಿಶಿಯಸ್ ಗೊಂಬೆ ಇವಳ ಕಣ್ ಮೀನಮ್ಮ|| ಹಾಡನ್ನು ಶಿವರಾಜಕುಮಾರ್ ಹಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಕರಾವಳಿ ಕರ್ನಾಟಕ ಮೀನುಗಾರಿಕೆಗೆ ಪ್ರಸಿದ್ಧ. ಇಲ್ಲಿನ ಮೀನು ಚೆನ್ನಾಗಿರುತ್ತದೆ. ನಾನು ಬರ್ತಾ ಇರ್ತೀನಿ ಎಂದು ಶಿವರಾಜ್‌ಕುಮಾರ್ ಪ್ರೇಕ್ಷಕರತ್ತ ಕೈಬೀಸಿ ಹೇಳಿದರು.
Related Articles
ನಿಮ್ಮ ಆರೋಗ್ಯದ ಗುಟ್ಟು ಏನು ಎಂದಾಗ “ಏನಿಲ್ಲ. ವ್ಯಾಯಾಮವನ್ನು ನಿತ್ಯ ಮಾಡುತ್ತೇನೆ. ಪಾಸಿಟಿವ್ ತಿಂಕಿಂಗ್ ಶಕ್ತಿಯನ್ನು ಕೊಡುತ್ತದೆ’ ಎಂದು ಶಿವರಾಜ್ ಕುಮಾರ್ ಹೇಳಿದರು.
Advertisement
ಹೆಲಿಕಾಪ್ಟರ್‌ನಲ್ಲಿ ಸಂಚಾರರಾಜ್ಯದ ಐದು ಕಡೆ ಒಂದೇ ದಿನ ಶೋರೂಮ್‌ಗಳನ್ನು ಉದ್ಘಾಟಿಸಲು ಶಿವರಾಜಕುಮಾರ್ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿದರು.