Advertisement

ಕಲ್ಯಾಣ್‌: ಸಂತ ನಿರಂಕಾರಿ ಮಿಷನ್‌ನಿಂದ ರಕ್ತದಾನ ಶಿಬಿರ

12:58 PM Sep 10, 2021 | Team Udayavani |

ಕಲ್ಯಾಣ್‌: ಸಂತ ನಿರಂಕಾರಿ ಮಿಷನ್‌ ವತಿಯಿಂದ ರಕ್ತದಾನ ಶಿಬಿರವು ಸೆ. 5ರಂದು ಕಲ್ಯಾಣ್‌ನಲ್ಲಿ ನಡೆಯಿತು. ವಿಲೇಪಾರ್ಲೆಯಲ್ಲಿ ಸಂತ ನಿರಂಕಾರಿ ಬ್ಲಿಡ್‌ ಬ್ಯಾಂಕ್‌ನವರ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ 112 ಮಂದಿ ನಿರಂಕಾರಿಗಳು ರಕ್ತದಾನಗೈದು ಮಾನವೀಯತೆ ಮೆರೆದರು.

Advertisement

ಸದ್ಗುರು ಮಾತಾ ಸುದೀಕ್ಷಾಜಿ ಮಹಾರಾಜ್‌ ಅವರ ಮಾನವ ಕುಲದ ಸೇವೆಯೇ ದೇವರ ನಿಜವಾದ ಭಕ್ತಿ ಎಂಬ ಧ್ಯೆಯೋ ದ್ದೇಶದೊಂದಿಗೆ ಕೊಂಗಾಂವ್‌ ಮತ್ತು ಕಲ್ಯಾಣ್‌ ಪಶ್ಚಿಮ ಪ್ರದೇಶದ ನಿರಂಕಾರಿ ಭಕ್ತರು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದರು. ಡೊಂಬಿವಲಿ ವಲಯದ ವಲಯ ಮುಖ್ಯಸ್ಥ ರಾವ್‌ ಸಾಹೇಬ್‌ ಹಸ್ಬೆ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಕೊಂಗಾಂವ್‌ ಗ್ರಾ.ಪಂ.ನ ಉಪ ಸರಪಂಚ್‌ ರಾಜೇಶ್‌ ಮುಕಡಂ ಮತ್ತು ಕಲ್ಯಾಣ್‌ ವಿಭಾಗೀಯ ಸಂಯೋಜಕ ಜಗನ್ನಾಥ್‌ ಮಾತ್ರೆ ಉಪಸ್ಥಿತರಿದ್ದರು. ಶಿಬಿರಕ್ಕೆ ಪಂ. ಸಮಿತಿ ಸದಸ್ಯ ದರ್ಶನ್‌ ಮಾತ್ರೆ, ಗ್ರಾ. ಪಂ. ಸದಸ್ಯರು, ಕೊಂಗಾಂವ್‌ನ ಕಮಲಾಕರ್‌ ನಾಯಕ್‌, ಶಿವಸೇನೆ ವಿಭಾಗೀಯ ಮುಖಂಡ ಪ್ರಹ್ಲಾದ್‌ ರಖಡೆ ಮತ್ತು ಸಮಾಜ ಸೇವಕ ನಂದು ರಾಖಡೆ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಂಡಲದ ವಿವಿಧ ಶಾಖೆಗಳ ಮುಖಂಡರು ಮತ್ತು ಸೇವಾದಳದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಮಹಿಳೆಯರು ಮಂತ್ರಿಗಳಾಗಬಾರದು, ಮಕ್ಕಳನ್ನಷ್ಟೇ ಹೆರಬೇಕು: ತಾಲಿಬಾನ್

ಮಂಡಲದ ಸ್ಥಳೀಯ ವಿಭಾಗೀ ಯ ಸಂಯೋಜಕ ಮತ್ತು ಸ್ಥಳೀಯ ಸೇವಾದಳ ಸಂಚಾಲಕ ಪ್ರಕಾಶ್‌ ಕೊಕ್ತಾರೆ ಮಾರ್ಗದರ್ಶನದಲ್ಲಿ ಶಿಬಿರವು ಯಶಸ್ವಿಯಾಗಿ ನಡೆಯಿತು. ಸೇವಾದಳದ ಸ್ಥಳೀಯ ಘಟಕ ಮತ್ತು ಸಂತ ನಿರಂಕಾರಿ ಚಾರಿಟೆಬಲ್‌ ಫೌಂಡೇಶನ್‌ನ ಸ್ವಯಂಸೇವಕರು ಸಹಕರಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next