Advertisement

ಕಲ್ಸಂಕ ರಾಯಲ್‌ ಗಾರ್ಡನ್‌: ಜನಾಕರ್ಷಣೆಗೊಳ್ಳುತ್ತಿದೆ “ಉಡುಪಿ ಉತ್ಸವ’

12:06 AM Jan 25, 2020 | Sriram |

ಉಡುಪಿ: ಉಡುಪಿ ಕಲ್ಸಂಕದ ರಾಯಲ್‌ ಗಾರ್ಡನ್‌ ಮೈದಾನದಲ್ಲಿ ಎನ್‌ಸಿಎಫ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಯುತ್ತಿದ್ದ ಭಾರತದ ಅತೀ ದೊಡ್ಡ ಶಾಪಿಂಗ್‌ ಮತ್ತು ಮನೋರಂಜನ ವಸ್ತು ಪ್ರದರ್ಶನ “ಉಡುಪಿ ಉತ್ಸವ’ವು ಜನಾಕರ್ಷಣೆಗೊಳ್ಳುತ್ತಿದೆ.

Advertisement

ಉತ್ಸವದಲ್ಲಿ ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗೃಹಬಳಕೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಡ್ರೆಸ್‌ ಮೆಟೀರಿಯಲ್ಸ್‌, ಫ್ಯಾಶನ್‌ ಪಾದರಕ್ಷೆಗಳು, ಮಕ್ಕಳ ಆಟಿಕೆಗಳು, ಬೆಡ್‌ಶೀಟ್‌, ಬೆಡ್‌ ಸ್ಪ್ರೆಡ್‌, ಬೆಡ್‌ ಕವರ್‌, ಡೈನಿಂಗ್‌ ಟೇಬಲ್‌, ಫ್ರಿಜ್‌ಗೆ ಹಾಕುವ ಕವರ್, ತಲೆ ದಿಂಬುಗಳು, ಕರವಸ್ತ್ರಗಳು, ಬಗೆಬಗೆಯ ಆಕರ್ಷಕ ಹ್ಯಾಟ್‌ಗಳು, ಸ್ವಾಗ್ಸ್‌, ಆಕರ್ಷಕ ಬಳೆಗಳು, ಕಿವಿಯೋಲೆ, ವೆಜ್‌ ಕಟ್ಟರ್‌, ಕೇರಳ ಮಸಾಲ, ಬೆಲ್ಟ್‌ಗಳು, ತಂಪು ಕನ್ನಡಕಗಳು, ಮಕ್ಕಳ ವಾಚುಗಳು, ಶೃಂಗಾರ ಸಾಧನಗಳು, ಚಪ್ಪಲಿಗಳು, ಕಲ್ಕತ್ತಾ ಟಾಯ್ಸ, ನೀರು ಮತ್ತು ಜ್ಯೂಸ್‌ ಕುಡಿಯುವ ಗ್ಲಾಸ್‌ಗಳು, ಮೈಸೂರು ಸ್ಪೆಶಲ್‌ ಕಾಂಡಿಮೆಂಟ್ಸ್‌, ಖಾದಿ ಶರ್ಟ್ಸ್, ಕುರ್ತಾ ಮತ್ತು ಡ್ರೆಸ್‌ ಮೆಟೀರಿಯಲ್ಸ್‌, ಮೌತ್‌ ಫ್ರೆಶ್‌ನರ್‌ ಹಾಗೂ ಇನ್ನೂ ಅನೇಕ ಗೃಹಬಳಕೆಯ ವಸ್ತುಗಳ ಮಳಿಗೆಗಳಿವೆ.

ಪಾಪ್‌ಕಾರ್ನ್, ಡ್ರೈ ಫ‌ೂÅಟ್ಸ್‌ ಮತ್ತು ಮಸಾಲ ಐಟಮ್ಸ್‌, ರಾಜಸ್ಥಾನಿ ಪಕಲ್ಸ್‌, ಸ್ವದೇಶಿ ಆಹಾರೋತ್ಪನ್ನಗಳು, ಸಿಮ್ಲಾ ಚಿಲ್ಲಿ ಬಜ್ಜಿ, ಡೆಲ್ಲಿ ಮಸಾಲ ಪಾಪಡ್‌, ಐಸ್‌ಕ್ರೀಮ್‌, ಬಾಂಬೆ ಚಾಟ್ಸ್‌, ಕಬ್ಬಿನ ಹಾಲು ಜ್ಯೂಸ್‌, ಟೀ, ಕಾಫಿ, ದಾವಣಗೆರೆ ದೋಸೆ, ಕಾಟನ್‌ ಕ್ಯಾಂಡಿ, ಗೋಬಿ ಮಂಚೂರಿ, ಲೆಮನ್‌ ಜ್ಯೂಸ್‌, ಚಾಟ್ಸ್‌, ಚರ್ಮುರಿ, ಬೇಲ್‌ಪೂರಿ, ಮಸಾಲ ಪೂರಿ ಮತ್ತು ವೈವಿಧ್ಯಮಯ ಆಹಾರೋತ್ಪನ್ನಗಳ ಮಳಿಗೆಗಳಿವೆ.

ಯುವಜನತೆ, ಮಕ್ಕಳು, ಚಿಣ್ಣರನ್ನು ಆಕರ್ಷಿಸುವ ಬೋಟಿಂಗ್‌, ಟೊರ-ಟೊರ, ಡ್ರಾಗನ್‌ ಟ್ರೈನ್‌, ಕ್ಯಾಟರ್‌ಪಿಲ್ಲರ್‌, ಬ್ರೇಕ್‌ ಡ್ಯಾನ್ಸ್‌, ಝಿಗ್‌-ಝಾಗ್‌, ಜೈಯಂಟ್‌ ವ್ಹೀಲ್‌ ಇತ್ಯಾದಿ 25ಕ್ಕೂ ಅಧಿಕ ಅಮ್ಯೂಸ್‌ಮೆಂಟ್‌ಗಳಿವೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next