Advertisement

ಸೆಪ್ಟೆಂಬರ್‌ನೊಳಗೆ ಕಲ್ಮಡ್ಡಿ ಏತ ನೀರಾವರಿ ಸೌಲಭ್ಯ

04:59 PM Jul 03, 2021 | Team Udayavani |

ಗೋಕಾಕ: ಸೆಪ್ಟೆಂಬರ್‌ ತಿಂಗಳೊಳಗೆ ಕೌಜಲಗಿ ಮತ್ತು ಸುತ್ತಲಿನ ಹಳ್ಳಿಗಳ ಜಮೀನುಗಳಿಗೆ ಕಲ್ಮಡ್ಡಿ ಏತ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಮತ್ತು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ತಳಕಟ್ನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಜಾಕ್‌ವೆಲ್‌ ನಿರ್ಮಾಣ ಕಾಮಗಾರಿ ಶುಕ್ರವಾರ ವೀಕ್ಷಿಸಿ ಮಾತನಾಡಿದ ಅವರು, ರೈತರ ಬಹುದಿನಗಳ ಕನಸು ಇನ್ನು ಮೂರು ತಿಂಗಳೊಳಗೆ ನನಸಾಗಲಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯಿಂದ ಕಲ್ಮಡ್ಡಿ ಏತ ನೀರಾವರಿಗೆ ಅಂದಾಜು 161 ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ಭರದಿಂದ ಸಾಗಿದೆ. ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ 5,680 ಎಕರೆ ಜಮೀನುಗಳಿಗೆ ಕಲ್ಮಡ್ಡಿ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ದೊರಕಲಿದೆ. ಈಗಾಗಲೇ ತಳಕಟ್ನಾಳ ಬಳಿ ಜಾಕ್‌ವೆಲ್‌ ಕಾಮಗಾರಿ ಮುಗಿದಿದ್ದು, ಪ್ಲಾಸ್ಟಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಕಳೆದ ತಿಂಗಳಲ್ಲಿ ಸುರಿದ ಮಳೆಯಿಂದ ಕಾಮಗಾರಿಗೆ ಸ್ವಲ್ಪ ಅಡಚಣೆಯಾಗಿದೆ. ಹೀಗಾಗಿ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದೇ ನೀರಾವರಿ ಯೋಜನೆಯಲ್ಲಿ ಕೆರೆ ತುಂಬಿಸಲಾಗುವುದು. ಅದರಲ್ಲಿ ಕಪರಟ್ಟಿ, ಖಂಡ್ರಟ್ಟಿ, ಕೌಜಲಗಿ ಮತ್ತು ಬಿಲಕುಂದಿ ಗ್ರಾಮಗಳಲ್ಲಿರುವ ಒಟ್ಟು 6 ಕೆರೆ ಭರ್ತಿ ಮಾಡಲಾಗುವುದು. ಕೌಜಲಗಿ, ಬಿಲಕುಂದಿ, ಗೋಸಬಾಳ, ಬಗರನಾಳ ಹಾಗೂ ಮನ್ನಿಕೇರಿ ಗ್ರಾಮಗಳ ರೈತರಿಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆ ದೊರೆಯಲಿದೆ.

ಕಲ್ಮಡ್ಡಿ ಏತ ನೀರಾವರಿ ಯೋಜನಾನುಷ್ಠಾನದಿಂದ ರೈತರಿಗೆ ವರದಾನವಾಗಲಿದೆ ಎಂದರು. ಈ ವೇಳೆ ತಾಪಂ ಸದಸ್ಯ ಲಕ್ಷ್ಮಣ ಮಸಗುಪ್ಪಿ, ವಿರೂಪಾಕ್ಷಿ ಮುಂಗರವಾಡಿ, ಲಕ್ಕಪ್ಪ ಹುಲಕುಂದ, ಕೆಂಪಣ್ಣ ಬೆಣ್ಣಿ, ಹಣಮಂತ ನಾಯಿಕ, ರೇವಣ್ಣ ವಡೇರ, ಹನಮಂತ ಅಜ್ಜನ್ನವರ, ಅಜ್ಜಪ್ಪ ಹುಲಕುಂದ, ರಾಮಣ್ಣಾ ಬಾಣಿ, ಬಸಪ್ಪ ಕಪರಟ್ಟಿ, ಸಣ್ಣ ನೀರಾವರಿ ಇಲಾಖೆ ಎಇಇ ಶ್ರೀಕಾಂತ ಮೆಳವಂಕಿ, ಜೆಇ ಜೈಭೀಮ, ಗುತ್ತಿಗೆದಾರ ಸುಧಾಕರ ಶೆಟ್ಟಿ, ನಾಗಪ್ಪ ಮಾದರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next