Advertisement
ಸೌಲಭ್ಯಗಳಿಲ್ಲವಿಶಾಲವಾದ ಸಭಾಂಗಣದಲ್ಲಿ ಸಭಿಕರಿಗೆ ಕುಳಿತುಕೊಳ್ಳಲು ಒಂದೇ ಒಂದು ಕುರ್ಚಿ ಇಲ್ಲ. ಸಭೆ ನಡೆಸಲು ವೇದಿಕೆ ಇಲ್ಲ. ಬಟ್ಟೆ ಬದಲಿಸಲು ಕೊಠಡಿಯಿಲ್ಲ. ವಿಶ್ರಾಂತಿ ಕೋಣೆಯೂ ಇಲ್ಲ. ಮದುವೆ ಇತ್ಯಾದಿ ನಡೆಸುವುದಾದರೆ ಅಡುಗೆ ಕೋಣೆಯಿಲ್ಲ. ಕಳೆದ ವರ್ಷ ಸಮುದಾಯ ಭವನದ ಅವ್ಯವಸ್ಥೆಯ ಬಗ್ಗೆ ಬಳ್ಕೂರಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿದ್ದರು. ಆದರೆ ಈವರೆಗೆ ಯಾವ ಪ್ರಯೋಜನ ಕೂಡ ಆಗಿಲ್ಲ.
ಉಡುಪಿಯಲ್ಲಿ ದಲಿತ ಕುಂದು-ಕೊರತೆಗಳ ಸಭೆಯಲ್ಲಿ ಈ ಸಮುದಾಯ ಭವನದ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದಾಗ ಪೋಲೀಸ್ ವರಿಷ್ಠಾಧಿಕಾರಿಗಳು ಶಾಸಕರಿಗೆ ಈ ಬಗ್ಗೆ ಕೊಟ್ಟ ಮನವಿ ಪತ್ರವನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಸೂಚಿಸಿದ್ದರು. ಕಳ್ಳಿಗುಡ್ಡೆಯ ಸಮುದಾಯ ಭವನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಶಿಧರ್ ಕಳ್ಳಿಗುಡ್ಡೆ ಅವರು ಶಾಸಕರ ಮನವಿಯನ್ನು ಜಿಲ್ಲಾ ಸಮಾಜ ಕಲ್ಯಾಣಿಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳಿಗೂ ನೀಡಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯ. ನಾವು ಇನ್ನೇನು ಮಾಡಬೇಕು?
ಬಳ್ಕೂರು ಗ್ರಾಮದ ಕಳ್ಳಿಗುಡ್ಡೆಯ ಸಮುದಾಯ ಭವನಕ್ಕೆ ಹಲವು ಮೂಲ ಸೌಕರ್ಯಗಳನ್ನು ಒದಗಿಸಿ ಕಾಯಕಲ್ಪಗೊಳಿಸುವುದಕ್ಕಾಗಿ ಅಭಿವೃದ್ಧಿ ಸಮಿತಿಯನ್ನು ಸ್ಥಳೀಯರಾದ ನಾವು ರಚಿಸಿಕೊಂಡಿದ್ದೇವೆ. ಈಗಾಗಲೇ ಶಾಸಕರಲ್ಲಿ ಚರ್ಚಿಸಿ ಅವರ ಮನವಿಯನ್ನು ಸಂಬಂಧಪಟ್ಟವರಿಗೆ ನೀಡಿದ್ದೇವೆ. ಉದ್ಘಾಟನೆಯಾಗಿ ನಾಲ್ಕು ವರ್ಷಗಳಾದರೂ ಈ ಭವನದಲ್ಲಿ ಯಾವುದೇ ಸಭೆ-ಸಮಾರಂಭಗಳು ನಡೆದಿಲ್ಲ. ನಾವು ಇನ್ನೇನು ಮಾಡಬೇಕು ಎಂದು ತೋಚುತ್ತಿಲ್ಲ.
– ಶಶಿಧರ್ ಕಳ್ಳಿಗುಡ್ಡೆ, ಅಧ್ಯಕ್ಷ, ಅಭಿವೃದ್ಧಿ ಸಮಿತಿ, ಸಮುದಾಯ ಭವನ
Related Articles
ಕಳ್ಳಿಗುಡ್ಡೆಯ ಸಮುದಾಯ ಭವನದ ಅವವ್ಯಸ್ಥೆಯನ್ನು ನೋಡಿದ್ದೇವೆ. ಈ ಭವನದ ಕಾರ್ಯಕಲ್ಪಕ್ಕಾಗಿ ಜಿಲ್ಲಾ ಸಮಾಜ ಕಲ್ಯಾಧಿಕಾರಿಗಳಿಗೆ ಮನವಿಯನ್ನು ನೀಡಿದ್ದೇವೆ ಗ್ರಾ.ಪಂ. ನಿಂದ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನದ ಕೊರತೆಯಿದೆ.
– ಅಕ್ಷಶ್ ಶೇರೆಗಾರ್, ಅಧ್ಯಕ್ಷರು, ಗ್ರಾ.ಪಂ. ಬಳ್ಕೂರು
Advertisement