Advertisement
ತಾಲೂಕಿನ ಬಾಗೂರು ಹೋಬಳಿ ಬಳಿ ಹಾದು ಹೋಗಿರುವ ಹೇಮಾವತಿ ನಾಲೆಯ ಸಮೀಪದಲ್ಲಿ ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆಗೆ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆಗಮಿಸಿದ್ದ ವೇಳೆ ಹಾಜರಿದ್ದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಲ್ಲೆಸೋಮನಹಳ್ಳಿ ಸಿದ್ದರಹಟ್ಟಿ ಗ್ರಾಮದ ಒಂದು ಕರೆ ಹಾಗೂ ನಾಲ್ಕು ಕಟ್ಟೆಯನ್ನು ರಾಜಕೀಯ ದುರುದ್ದೇಶದಿಂದ ಕೈಬಿಡಲಾಗಿದೆ ಎಂದು ಕಿಡಿಕಾರಿದರು.
Related Articles
Advertisement
ಶಿಷ್ಟಾಚಾರ ಪಾಲಿಸದ ಶಾಸಕ ಬಾಲಕೃಷ್ಣ: ಯೋಜನೆಯ ಸಂಬಂಧ ಸರ್ಕಾರದ ಮಟ್ಟದಲ್ಲಿ 12 ಬಾರಿ ಸಭೆ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಆಗಮಿಸುತ್ತಿರುವುದರಿಂದ ಶಾಸಕ ಸಿ.ಎನ್.ಬಾಲಕೃಷ್ಣ ಆತುರವಾಗಿ ತಾವೊಬ್ಬರೇ ಈ ಯೋಜನೆಗೆ ಪೂಜೆ ನಡೆಸಿ ಚಾಲನೆ ನೀಡಿ¨ªಾರೆ. ಶಿಷ್ಟಾಚಾರ ಪಾಲಿಸಿಲ್ಲ ಇದೇ ಧೋರಣೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕ್ಲಲೆಸೋಮಹಳ್ಳಿ ಏತನೀರಾವರಿ ಯೋಜನೆಯಿಂದ ಹೆಗ್ಗಡಿಗೆರೆ, ಲಕ್ಕರಸನಹಳ್ಳಿ, ರಂಗಾಪುರ, ಕಲ್ಲೇಸೋಮಹಳ್ಳಿ, ಓಬಳಾಪುರ, ಗೋವಿನಕೆರೆ, ಹೊಂಗೇಹಳ್ಳಿ, ಎಂ.ಶಿವರ, ಸೋಮನಹಳ್ಳಿ, ಮರಗೂರು, ಕೆಂಬಾಳು, ಚಿಕ್ಕರಸನಹಳ್ಳಿ, ಲಕ್ಕಿಹಳ್ಳಿ, ಬಳಘಟ್ಟೆ, ಕಕ್ಕೀಹಳ್ಳಿ, ಬಿದರೆ ಸೇರಿದಂತೆ ಈ ಭಾಗದ 19 ಕೆರೆಗಳನ್ನು ತುಂಬಿಸಲಾಗುತ್ತದೆ ಕಲ್ಲೆಸೋಮಹಳ್ಳಿಸಿದ್ದರಹಟ್ಟಿ ಕೆರೆ ತುಂಬಿಸಲು ಮುಂದಾಗುತ್ತೇನೆ ಎಂದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಎಂ.ಶಂಕರ್, ಶ್ರೀನಿವಾಸ ಕನ್‌ಸ್ಟ್ರಕ್ಷನ್ ವ್ಯವಸ್ಥಾಪಕ ಹರೀಶ, ಬಿದ್ರೆರಾಜು, ಅಶೋಕ, ಪುನೀತ್, ಸುರೇಶ ಮೊದಲಾದವರು ಉಪಸ್ಥಿತರಿದ್ದರು.
ಗುರುತ್ವಾಕರ್ಷಣೆ ಮೂಲಕ ಕೆರೆಗೆ ನೀರು: ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕಲ್ಲೆಸೋಮನಹಳ್ಳಿ ಸಿದ್ದರಹಟ್ಟಿ ಕರೆಗೆ ನೀರು ಹರಿಸಲಾಗುವುದು. ಈಗಾಗಲೇ ಜಾಕ್‌ವೆಲ್ ಕಾಮಗಾರಿ ಪ್ರಾರಂಭವಾಗಿದ್ದು, ಇಲಾಖೆಯ ಮುಖ್ಯ ಅಭಿಯಂತರ ಮಂಜಪ್ಪ ಹಾಗೂ ಕಾರ್ಯಪಾಲಕ ಅಭಿಯಂತರ ಮೋಹನರಾಜ್ ಅವರು ಎರಡು ದಿನದ ಹಿಂದೆ ಸ್ಥಳ ಪರಿಶೀಲನೆ ಮಾಡಿದ್ದಾರೆ. ಯೋಜನೆ ಎಲ್ಲಾ ಕೆರೆಗಳಿಗೆ ಗುರುತ್ವಾಕರ್ಷಣೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತದೆ ಎಂದು ಹೇಳಿದರು.
ಕುರುವಂಕ, ಗೊಲ್ಲರಹೊಸಹಳ್ಳಿ ಕೆರೆ ತುಂಬಿಸಿ: ಶಾಸಕ ಬಾಲಕೃಷ್ಣ ಅವರು ಯಾರೋ ಅನುಷ್ಠಾನಕ್ಕೆ ತಂದಿರುವ ಯೋಜನೆಗಳನ್ನು ತಾವೇ ಮಾಡಿಸಿದ ಹಾಗೇ ಎಲ್ಲಾ ಕಡೆ ಪ್ರಚಾರ ಮಾಡುತ್ತಿ¨ªಾರೆ. ಇದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ. ಕುರುವಂಕ ಗೊಲ್ಲರಹೊಸಹಳ್ಳಿ ಕೆರೆಗೆ ನೀರು ತುಂಬಿಸುವ ಕಾಮಗಾರಿಯನ್ನು ಶಾಸಕರು ತಮ್ಮ ಹಿಂಬಾಲಕರಿಗೆ ನೀಡಿದ್ದರಿಂದ ಆ ಯೋಜನೆ ಇಂದಿಗೂ ಪ್ರಾರಂಭವಾಗಿಲ್ಲ. ಮೊದಲು ಅದನ್ನು ಮುಕ್ತಾಯ ಮಾಡಲು ಶಾಸಕರು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಒತ್ತಾಯಿಸಿದರು.
ನಾನು ನೀರಾವರಿ ಇಲಾಖೆ ಸಂಸದೀಯ ಕಾರ್ಯದರ್ಶಿಯಾಗಿದ್ದಾಗ ಯೋಜನೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಅಧಿಕಾರಿಗಳ ಸಭೆ ಮಾಡಿದ್ದೇನೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಾಲೂಕಿನ ಏತನೀರಾವರಿಗೆ ಶ್ರಮಿಸಿದಲ್ಲದೇ ಮೈತ್ರಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮೂಲಕ ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆ ಹಣ ಬಿಡುಗಡೆ ಮಾಡಿಸಿದ್ದೇನೆ -ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್ ಸದಸ್ಯ