Advertisement
ಆಚೆ ಬಾಗಿಲಿನಿಂದ ಬಂದವನು ಪಳನಿಯಂತೆ ಕಾಣಲಿಲ್ಲ. ಬಾಗಿಲಿಗೆ ಅಡ್ಡಲಾಗಿದ್ದ ಆತ ಯಾರೆಂದೂ ಸ್ಪಷ್ಟವಾಗಲಿಲ್ಲ. ಟಿವಿಯಲ್ಲಿ ಹನ್ನೊಂದರ ಮೇಲೆ ಬಿತ್ತರವಾಗುವ ದೆವ್ವ-ಭೂತಗಳ ಸೀರಿಯಲ್ಲುಗಳು ನೆನಪಾದವು. ದೆವ್ವವನ್ನು ನಂಬದಿದ್ದರೂ ಹೆದರಿಕೆ ಬಿಟ್ಟಿರಲಿಲ್ಲ.
“”ಅದ್ಯಾಕೆ ಸಾರ್, ಆಪಾಟಿ ಗಾಬ್ರಿಯಾಗ್ತಿàರಾ? ನಾನು ಕÇÉೇಶಿ! ಟೂ ತೌಸಂಡ್ ತ್ರೀ ಬ್ಯಾಚ್, ಎಂಬಿಎ ಸ್ಟೂಡೆಂಟು. ನಿಮ್ಮ ಶಿಷ್ಯ” ಅದು ಮನುಷ್ಯ ಜೀವಿ. ಅದರಲ್ಲೂ ಹಳೇ ಶಿಷ್ಯ ಕÇÉೇಶಿ ಎಂದು ಗೊತ್ತಾಗಿ ಶರೀರದಿಂದಾಚೆ ಹೊರಟಿದ್ದಜೀವ ಒಳಗೇ ನಿಂತಿತು. “ಈ ದೇಹದಿಂದ ದೂರನಾದೆ ಏಕೆ ಆತ್ಮನೇ? ಈ ಸಾವು ನ್ಯಾಯವೇ’ ಎಂದು ಹಾಡುವ ಪ್ರಮೇಯ ಬರಲಿಲ್ಲ!
“”ಹೀಗೇನೋ ಹೆದರಿಸೋದು ಕÇÉೇಶಿ? ನಿಂಗೆೆ ಹೊತ್ತು ಗೊತ್ತು ಇಲ್ಲವೆ? ಮನೆಗೆ ಹೋಗ್ತಿರೋ ಸಮಯದಲ್ಲಿ ಹೀಗೆ ಅಟಕಾಯಿಸ್ತಿದ್ದೀಯಲ್ಲ?” ದನಿ ಏರಿಸಿದೆ.
“”ತಪ್ಪಾಯ್ತು ಸಾರ್, ನೀವು ಶಾನೆ ಕೋಪ ಮಾಡ್ಕೊàತೀರಿ ಅಂತ ಗೊತ್ತಿತ್ತು. ಆದ್ರೆ ನಂಗೆ ಬೇರೆ ದಾರೀನೇ ಇಲ್ವÇÉಾ ಸಾರ್”
“”ಅಂತಾದ್ದೇನಯ್ಯ?” ದನಿ ಇನ್ನಷ್ಟು ಎತ್ತರಿಸಿದೆ.
“”ಮೊದುÉ ಲೈಟ್ ಹಾಕಿ ಸಾರ್. ಕ್ಲಾಸ್‌ನಲ್ಲಿ ಬಿಟ್ಟು ಹೊರಗೆ ನೀವ್ಯಾವತ್ತೂ ಹಿಂಗೆ ಆವಾಜ್ ಹಾಕಿದ್ದೇ ಇಲ್ಲ. ಇವತಾöಕೆ ಸಾರ್ ಹಿಂಗೆ?”
ನಾನು ಲೈಟ್ ಸ್ವಿಚ್ಚಿಗೆ ಕೈಹಾಕುವ ಮೊದಲೇ ಪಳನಿ ಎಲ್ಲಿದ್ದನೋ ಬಂದು ಲೈಟು ಹಾಕಿದ.
“”ಎಲ್ಲಿ ಹಾಳಾಗಿ ಹೋಗಿ¨ªೆ ಪಳನಿ?” ದಬಾಯಿಸಿದೆ.
“”ಕÇÉೇಶಿ ಸಾರು ಟೀ ಕೇಟ್ಟಾರು. ಅದು ವಾಂಗಿರುದಕ್ಕೆ ಪೋಯಿರುಂದೆ”
ಹತ್ತು ವರ್ಷದಿಂದ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದರೂ ಕನ್ನಡ ಕಲಿಯದೆ ನಮ್ಮನ್ನೇ ತಮಿಳು ಕಲಿಯುವಂತೆ ಮಾಡಿದ್ದ ಗಟ್ಟಿಗ ಪಳನಿ.
“”ಅವನ್ನ ಬೈಬೇಡಿ ಸಾರ್. ನಾನೇ ಕಳಿಸಿ¨ªೆ. ಟೀ ಎಡತ್ತನಿ ವಾಯ್ಯ” ಎಂದು ಪಳನಿಗೆ ಹೇಳಿದ ಕÇÉೇಶಿ. ಪಳನಿಗಿಂತಲೂ ಚೆನ್ನಾಗಿ ತುಮಿಳು ಮಾತಾಡುತ್ತಿದ್ದ. ಎಷ್ಟಾಗಲೀ ಕÇÉೇಶಿ ಬೆಂಗ್ಳೂರು ಕುಳ. ಬೆಂಗ್ಳೂರಿಗರಿಗೆ ಯಾವ ಪ್ರಯತ್ನವೂ ಇಲ್ಲದೆ ತುಮಿಳು, ತೆಲುಗು, ಹಿಂದಿ ಎಲ್ಲ ತಾನೇತಾನಾಗಿ ಬರುತ್ತವೆ.
ಪಳನಿ ಟೀ ಮತ್ತು ಬಿಸ್ಕೆಟ್ಟು ತಂದಿಟ್ಟ.
“”ನೀವು ಬರೋ ಹಂಗಿದ್ರೆ ಫೈವ್‌ಸ್ಟಾರ್ ಹೋಟಿÉಗೇ ಹೋಗ್ಬಬಹುದಿತ್ತು. ನೀವು ಶಾನೇ ಕಡಕ್ಕು ಅದಕ್ಕೇ ಇಷ್ಟಕ್ಕೇ ಮುಗಿಸ್ತಿದ್ದೀನಿ. ಟೀ ತಗಳ್ಳಿ, ಹಂಗೇ ಈ ಬಿಸ್ಕೆಟ್ಟು ಕಡೀರಿ. ಗುಡ್ಡೇ ಸಾರ್, ಕ್ಯಾಶೂದು”
ಇಂಟರ್‌ನಲ್ ಮಾರ್ಕ್ಸ್ಗೆ ಬೆಣ್ಣೆ ಸವರ್ತಿದ್ದ ಕÇÉೇಶಿ ಗುಣ ನನಗೆ ಚೆನ್ನಾಗಿ ಗೊತ್ತಿತ್ತು. ಅದನ್ನೇ ಈಗಲೂ ಮಾಡ್ತಿ¨ªಾನೆ ಅಂದ್ರೆ ನನ್ನಿಂದ ಯಾವುದೋ ಕೆಲಸ ಮಾಡಿಸೋಕೆ ಬಂದಿದಾನೆ ಅನ್ನೋದು ಖಾತ್ರಿಯಾಯಿತು.
ಟೀ ಗುಟುಕರಿಸುವಾಗ ಕÇÉೇಶಿ ಮಾತು ಶುರು ಮಾಡಿದ.
“”ನಿಮಗೆ ಮೊದ್ಲಿಂದಲೂ ಗೊತ್ತಲ್ಲ ಸಾರ್. ನಂಗೆ ಕನ್ನಡದ ಸೇವೆ ಅಂದ್ರೆ ಶಾನೆ ಇಷ್ಟ. ಅದಕ್ಕೇ ನಾಲ್ಕು ಸಿನೆಮಾ ತೆಗೆದೆ ಸಾರ್. ಮೂರು ಮೆಗಾ ಸೀರಿಯಲ್ ಮುಗಿಸಿದೆ ಸಾರ್”
“”ನಿನ್ನ ಮೊದಲನೆಯ ಸಿನೆಮಾ ತೋಪಾಯ್ತಂತಲ್ಲ ಕÇÉೇಶಿ. ಪೇಪನೊìàರೆಲ್ಲ ಹಿಗ್ಗಾಮುಗ್ಗಾ ಬೈದಿದ್ದರಂತೆ?”
“”ಹೂ ಸಾರ್. “ಲಾಂಗ್ ಲಕ್ಕಾ’ ತೋಪಾಯ್ತು. ಮೀಡಿಯಾದವ್ರನ್ನ ಸರಿಯಾಗಿ ನೋಡ್ಕೊಳಿÉÇÉಾನ್ನೋ ಹೊಟ್ಟೆಕಿಚ್ಚಿಗೆ ಬಾಯಿಗೆ ಬಂದಂತೆ ಬರೆದಿದ್ರು. ಆಮೇಲಿನವು ಸಕ್ಸಸ್ ಆದೊ ಸಾರಿ”
“”ಅದು ನಂಗೊತ್ತಿಲ್ಲ. ಮೊದಲೆ° ಸಿನೆಮಾ ಬಗ್ಗೆ ನಿನ್ನ ಬ್ಯಾಚಿನವನೊಬ್ಬ ಬಂದು ಹೇಳಿದ್ದ”
“”ಅದು ಬಿಟ್ಟಾಕಿ ಸಾರ್. ಈಗ ಇನ್ನೂ ಹೆಚ್ಚು ಕನ್ನಡದ ಸೇವೆ ಮಾಡೋಕೆ ಮನಸ್ಸು ಹಾತೊರೀತಾ ಐತೆ ಸಾರ್”
“”ಸರಿ ಏನು ಮಾಡ್ಬೇಕೂಂತಿದ್ದೀಯಾ?”
“”ಅದು ಗೊತ್ತಿದ್ರೆ ಇಲ್ಲೀತನಕ ಬರ್ತಿರಲಿಲ್ಲ ಸಾರ್. ಏನು ಮಾಡಬಹುದು ಅಂತಾ ತಮ್ಮ ಮಾರ್ಗದರ್ಶನ ಕೇಳ್ಳೋಕೆ ಬಂದಿದೀನಿ”
“”ನೋಡು ಕÇÉೇಶಿ, ಪಾಠ ಹೇಳ್ಳೋ ಮೇಷ್ಟ್ರು ನಾನು. ವ್ಯವಹಾರ ಶಾಸ್ತ್ರ ಬೋಧಿಸ್ತೀನೇ ಹೊರತು, ಅದನ್ನ ಅಳವಡಿಸೋದು ಗೊತ್ತಿಲ್ಲ ಇದ್ದದ್ದು ಇದ್ದ ಹಾಗೇ ಹೇಳಿದೆ”
“”ಹಿಂಗೆ ಮಾಡಿದ್ರೆ ಎಂಗೆ ಸಾರ್?”ಯೋಚನಾಪರವಶನಾದ ಕÇÉೇಶಿ ಕೇಳಿದ.
“”ಹ್ಯಾಗಪ್ಪಾ?”
ಒಂದು ಸ್ಕೂಲ್ ತೆಗೆದ್ರೆ ಎಂಗೆ?
ಕÇÉೇಶಿ ಓದೋದ್ರಲ್ಲಿ ಹಿಂದೆ, ವ್ಯವಹಾರದಲ್ಲಿ ಮುಂದೆ. ಖದೀಮ ಎÇÉಾ ಆಗಲೇ ಡಿಸೈಡ್ ಮಾಡ್ಕೊಂಡು ಬಂದಿದ್ದ.
ಅದನ್ನ ನನ್ನ ಬಾಯಿಯಿಂದ ಹೇಳಿಸೋಕೆೆ ಪ್ರಯತ್ನಪಡ್ತಿದ್ದª.
“”ಈಗಾಗ್ಲೆà ಸಾವಿರಾರು ಸ್ಕೂಲುಗಳಿವÇÉಾ!” ಆಕ್ಷೇಪಿಸಿದೆ.
“”ಇರ್ಲಿ ಸಾರ್. ನನ್ನ ಸ್ಕೂಲು ಸ್ಪೆಷಲ್ಲು”
“”ಅದೆಂಗಪ್ಪಾ ಸ್ಪೆಷಲ್ಲು?”
“”ನಂದು ಇಂಟರ್‌ನ್ಯಾಶನಲ್ ಸ್ಕೂಲು ಸಾರ್. ಅಲ್ಲಿ ಎÇÉಾ ಅನುಕೂಲಾನು ಇರುತ್ತೆ” “”ಮಕ್ಕಳು ಬೆಳಿಗ್ಗೆ ಸ್ಕೂಲಿಗೆ ಬಂದ್ರೆ ಅÇÉೇ ಅವಕ್ಕೆ ಟಿಫನ್ನು, ಊಟ, ಸಂಜೆಗೆ ಸ್ನಾಕ್ಸು ಎÇÉಾ ಅÇÉೇ ಸರ್ವ್ ಮಾಡ್ತೀವಿ. ಪಾಠ ಪ್ರವಚನ ಎÇÉಾ ಹೈಟೆಕ್ಕು. ಸ್ಕೂಲÇÉೇ ಸ್ವಿಮ್ಮಿಂಗ್ ಪೂಲು, ಡ್ಯಾನ್ಸ್ ಕ್ಲಾಸು, ಸಂಗೀತ ಕ್ಲಾಸು ಎÇÉಾ ಇರುತ್ತವೆ. ನೀವು ನಮಗೆ ಸಿನಿಮಾ ತರಾ ಸ್ಕ್ರೀನ್ ಮೇಲೆ ಪ್ರಸೆಂಟೇಶನ್ ಮಾಡಿ ಲೆಕ್ಚರ್ ಕೊಡ್ತಿದ್ರಲ್ಲ ಹಂಗೆ ಪಾಠ ನಡೆಯುತ್ತೆ. ಕನ್ನಡ ಜನರಿಗೆ ಅಷ್ಟೂ ಸೇವೆ ಮಾಡದಿದ್ರೆ ಹೆಂಗೆ ಸಾರ್?”
ಕÇÉೇಶಿಯ ವಿವರಣೆಗೆ ನಾನು ಬೆಚ್ಚಿದೆ. “”ಇಂಟರ್‌ನ್ಯಾಶನಲ್ ಸ್ಕೂಲು ತೆಗೆದರೆ ಅದು ಜನರಿಗೆ ಸಹಾಯ ಹೇಗಾದೀತು?”
“”ಮತ್ತೆ ಇಂತಾ ಸ್ಕೂಲಲ್ಲಿ ಫೀಸು ಎಷ್ಟು ನಿಗದಿ ಮಾಡ್ತೀಯಾ?”
“”ವರ್ಷಕ್ಕೆ ಒಂದು ಲಕ್ಷ ಚಿಲ್ಲರೆ ಅಷ್ಟೇಯ” ಅದು ಯಾವ ಮಹಾ ದೊಡ್ಡ ಮೊತ್ತ ಎನ್ನುವಂತೆ ಕÇÉೇಶಿ ಮಾತನಾಡಿದ್ದ. ನಿಜವೇ… ದೇವನಳ್ಳಿಯ ಕುಳ, ಎಡವಟ್ಟು ಸಿನಿಮಾಗಳ ನಿರ್ಮಾಪಕ, ನಿರ್ದೇಶಕ, ಎಂದೆಂದೂ ಕೊನೆಯೇ ಕಾಣದಂತಹ ಮೆಗಾ ಟಿವಿ ಸೀರಿಯಲ್ಲುಗಳ ನಿರ್ಮಾಪಕ ಕÇÉೇಶಿಗೆ ಅದು ಚಿಲ್ಲರೆ ಹಣ.
“”ಅÇÉಾ ಕÇÉೇಶಿ, ಒಂದು ಲಕ್ಷ ಚಿಲ್ಲರೆ ಕೊಟ್ಟು ಕನ್ನಡ ಸ್ಕೂಲಿಗೆ ಕಳಿಸೋ ತಂದೆ-ತಾಯಿಗಳು ಜರಡಿ ಹಾಕಿ ಜಾಲಾಡಿದ್ರೂ ಬೆಂಗ್ಳೂರಲ್ಲಿ ಸಿಕ್ಕೋದಿಲ್ಲ. ನಿನ್ನ ಸ್ಕೂಲು ಖಾಲಿ ಹೊಡೆಯುತ್ತೆ” ಎಚ್ಚರಿಸಿದೆ.
“”ಕನ್ನಡದ ಸ್ಕೂಲು?” ಎನ್ನುತ್ತ ಕÇÉೇಶಿ ಪಕಪಕನೆ ನಕ್ಕು ನುಡಿದ, “”ಕನ್ನಡದ ವಿಷಯ ಯಾರು ಮಾತಾಡಿದ್ರು ಸಾರ್? ಇಂಟರ್‌ನ್ಯಾಶನಲ್ ಸ್ಕೂಲಿಲ್ಲಿ ಕನ್ನಡ ಕಲಿಸೋದಾ?” ಅವನ ನಗೆಯ ಧಾಟಿ ನೀವೆಂಥ ದಡ್ಡರು ಎಂದು ಗೇಲಿ ಮಾಡಿದಂತಿತ್ತು.
“”ಮತ್ತೆ…?”
“”ಸಾರ್, ಇಂಟರ್‌ನ್ಯಾಷನಲ್ ಸ್ಕೂಲೆಂದರೆ ಅಲ್ಲಿ ಮೀಡಿಯಮ್ಮು ಇಂಗ್ಲಿಶು! ತಿಳ್ಕಳ್ಳಿ ಸಾರ್”
ಕÇÉೇಶಿ ಮಹಾ ಕಿಲಾಡಿ. ಸಮಾಜಕ್ಕೆ ಮಹಾನ್ ಉಪಕಾರ ಮಾಡಬೇಕೆಂದು ಬಾಯಿಯಿಂದ ಮಾತು ಬರುತ್ತಿತ್ತು. ಆದರದು ಹೃದಯದ ಮಾತಲ್ಲ. ಉಪಕಾರದ ಕಿಂಚಿತ್ ಅಂಶವೂ ಅವನ ಯೋಜನೆಯಲ್ಲಿ ಕಾಣಿಸಲಿಲ್ಲ.
“”ಅಲ್ಲಯ್ನಾ, ಕನ್ನಡದ ಸೇವೆ ಮಾಡ್ಬೇಕೂಂತ ಹತ್ತು ನಿಮಿಷದ ಹಿಂದೆ ಹೇಳಿ¨ªೆ?” ಅವನ ಖೆಡ್ಡಾದಲ್ಲಿ ಅವನನ್ನೇ ಸಿಕ್ಕಿಸಿದೆ.
“”ಅಯ್ಯೋ ಇÇÉಾಂದ್ನ ಸಾರ್? ಈ ಇಂಟರ್‌ನ್ಯಾಶನಲ್ ಸ್ಕೂಲು ಮಾಡ್ತಿರೋದೇ ಕನ್ನಡದ ಜನರಿಗೆ ಸಹಾಯ ಮಾಡಬೇಕೂಂತಾನೇ”
“”ಇಂಗ್ಲಿಶ್ ಸ್ಕೂಲು ತೆಗೆದ್ರೆ ಕನ್ನಡದ ಸೇವೆ ಎಲ್ಬಂತು ಕÇÉೇಶಿ?”
“”ಅದೂR ಒಂದೈಡಿಯಾ ವåಡಗಿದ್ದೀನಿ ಸಾರ್! ನಮ್ಮೂರಲ್ಲಿ ಕನ್ನಡ ಸ್ಕೂಲು, ಅದು ನಿಜವಾದ ಕನ್ನಡ ಸೇವೆ. ಬೆಂಗಳೂರಲ್ಲಿ ಇಂಟರ್‌ನ್ಯಾಶನಲ್ ಸ್ಕೂಲು ಅದು ಕನ್ನಡ ಜನೋಪಕಾರ! ಹೆಂಗೆ ಸಾರ್?”
ನಾನು ಕತ್ತೆತ್ತಿ ಛಾವಣಿ ನೋಡಿದೆ. ಥರ್ಮೋಕೋಲ್ ಸೀಲಿಂಗ್ ಮೇಲೊಂದು ಹಲ್ಲಿ ಕÇÉೇಶಿಯ ಐಡಿಯಾ ಒಪ್ಪದೆ “ಲೊಚ್ ಲೊಚ್’ ಎಂದಿತು.
“”ನೋಡಿದ್ರಾ ಸಾರ್, ನನ್ನ ಮಾತು ಎಷ್ಟು ಸತ್ಯಾಂತ?”
“”ಸರಿ, ಈಗ ನನ್ನಿಂದೇನಾಗಬೇಕಿತ್ತು?” ಕÇÉೇಶಿ ಹತ್ರ ಮಾತಾಡಿ ಪ್ರಯೋಜನವಿÇÉಾಂತ ಅವನನ್ನು ಉಪಾಯವಾಗಿ ಆಚೆ ಸಾಗಿ ಹಾಕುವ ಪ್ರಯತ್ನ ಮಾಡಿದೆ.
“”ಇನ್ನೆರಡು ತಿಂಗಳಿಗೆ ನಿಮಗೆ ರಿಟೈರ್‌ವೆುಂಟಲ್ವಾ ಸಾರ್?”
“”ಹೌದು”
“”ನಮ್ಮ ಸ್ಕೂಲಿಗೆ ಯಾಕೆ ನೀವು ಡೈರೆಕ್ಟರ್ ಆಗಿ ಬರಬಾರದು?”
“”ಯಾವ ಸ್ಕೂಲಿಗೆ? ಕನ್ನಡ ಸ್ಕೂಲಿಗೋ ಇÇÉಾ ಇಂಗ್ಲಿಷ್ ಸ್ಕೂಲಿಗೋ?”
“”ಏ… ಬಿಡೂ¤ನ್ನಿ. ನಿಮ್ಮನ್ನ ಕನ್ನಡ ಸ್ಕೂಲಿಗೆ ಕರಿಯೋಕಾಯ್ತದ? ಎಂಬಿಎ ಫೊÅಫೆಸರ್‌ನ ಕನ್ನಡ ಸ್ಕೂಲಿಗೆ ಕರೆಯೋಕಾಯ್ತದ? ಇಂಟರ್‌ನ್ಯಾಶನಲ್ ಸ್ಕೂಲಿಗೆ ಸಾರ್… ಸಂಬಳ ಎಷ್ಟು ಬೇಕೋ ಕೇಳ್ಕಳ್ಳಿ. ನೀವು ನನ್ನ ಗುರುಗಳು. ನಂಗೆ ಬದುಕೋ ಮಾರ್ಗ ಕಲಿಸಿದೋರು”
“”ಕÇÉೇಶಿ, ರೈಲು ಹತ್ತಿಸಬೇಡ. ಇದು ಆತುರದಲ್ಲಿ ತಗೊಳ್ಳೋ ತೀರ್ಮಾನವಲ್ಲ. ಇನ್ನೂ ಎರಡು ತಿಂಗಳು ಟೈಮಿದೆಯಲ್ಲ? ಯೋಚನೆ ಮಾಡ್ತೀನಿ. ನಂಗೆ ಹಣಕ್ಕೆ ಕೆಲಸ ಮಾಡೋ ಮನಸ್ಸಿಲ್ಲ”
“”ಹಣ ತಗೋಬೇಡಿ ಬಿಡಿ. ಬರೀ ಗೌರವಧನ ತಂಗಂಡುಬಿಡಿ”
“”ಗೌರವಧನವೂ ಹಣವೇ ಅಲ್ಲವೇನೊ?” ಎಂದು ಕೇಳುವ ಮನಸ್ಸಾಯಿತು. ಕÇÉೇಶಿಯ ಕನ್ನಡ ಸೇವೆಯ ವಿಚಾರಧಾರೆ ಕೇಳಿದ ಮೇಲೆ ಅವನ ಸಹವಾಸವೇ ಬೇಡ ಎನ್ನಿಸಿತು. ಹೇಗಾದರೂ ಮಾಡಿ ಅವನನ್ನ ಅಚೆ ಕಳಿಸೋಣ ಎನ್ನಿಸಿತು.
“”ಅದನ್ನೆಲ್ಲ ಆಮೇಲೆ ನೋಡೋಣ? ಪಳನಿ ಮೊದಲು ಬಾಗಿಲು ಹಾಕು” ಎಂದು ಬ್ರಿàಫ್ಕೇಸನ್ನು ಎತ್ತಿಕೊಂಡು, ಇನ್ನು ಮಾತು ಸಾಕು ಎನ್ನುವ ಸೂಚನೆ ಕೊಟ್ಟೆ ಕÇÉೇಶಿಗೆ.
ಎಸ್. ಜಿ. ಶಿವಶಂಕರ್