ದೋಸೆ ಅಕ್ಕಿ- 4 ಕಪ್, ಉದ್ದಿನ ಬೇಳೆ- 1/2 ಕಪ್, ಅವಲಕ್ಕಿ- ಅರ್ಧ ಕಪ್, ಕಲ್ಲಂಗಡಿ ಹಣ್ಣಿನ ಬಿಳಿಭಾಗ (ತುರಿದಿದ್ದು)- 3 ಕಪ್ ರುಚಿಗೆ ಬೇಕಾದಷ್ಟು ಉಪ್ಪು, ನಿಂಬೆ ಗಾತ್ರದ ಬೆಲ್ಲ.
Advertisement
ಮಾಡುವ ವಿಧಾನದೋಸೆ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು ಎರಡು ತಾಸು ನೆನೆಹಾಕಿ. ಅವಲಕ್ಕಿಯನ್ನು ಅರ್ಧಗಂಟೆ ಮುಂಚೆ ನೆನೆಸಿದರೆ ಸಾಕು. ಕಲ್ಲಂಗಡಿಹಣ್ಣಿನ ಬಿಳಿಭಾಗವನ್ನು ತುರಿದಿಟ್ಟುಕೊಳ್ಳಿ ಅಥವಾ ಸಣ್ಣಗೆ ಹೆಚ್ಚಿ ಮಿಕ್ಸಿಮಾಡಿಕೊಳ್ಳಬಹುದು. ಈಗ ಅಕ್ಕಿಯಿಂದ ನೀರನ್ನು ಬಸಿದು ಅವಲಕ್ಕಿ ಸೇರಿಸಿ ನುಣ್ಣಗೆ ರುಬ್ಬಬೇಕು. ರುಬ್ಬುವಾಗ ನೀರಿನ ಬದಲಾಗಿ ಕಲ್ಲಂಗಡಿ ತುರಿಯನ್ನು ಹಾಕಿ. ನೀರಿನಾಂಶ ಅದರಲ್ಲಿ ಜಾಸ್ತಿ ಇರುವುದರಿಂದ ಮತ್ತೆ ನೀರು ಬೇಕಾಗುವುದಿಲ್ಲ. ರುಬ್ಬಿದ ಹಿಟ್ಟಿಗೆ ಉಪ್ಪು, ಬೆಲ್ಲ ಹಾಕಿ ಹದವಾಗಿ ಕಲಕಿ ಅರ್ಧ ಗಂಟೆ ಬಿಟ್ಟು ತೆಳ್ಳಗೆ ದೋಸೆ ಮಾಡಿ ತಿನ್ನಬಹುದು. ಗರಿ ಗರಿಯಾಗಿ ಕಲ್ಲಂಗಡಿ ಪರಿಮಳ ಹೊಂದಿದ ದೋಸೆ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.