Advertisement

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ: ಸಮಗ್ರ ಶಿಶು ಶಿಕ್ಷಣ ತರಬೇತಿ ಶಿಬಿರ ಉದ್ಘಾಟನೆ

08:54 PM May 12, 2019 | Team Udayavani |

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಾಧನಾ ಸಭಾಭವನದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ 10 ದಿನಗಳ ಸಮಗ್ರ ಶಿಶು ಶಿಕ್ಷಣ ತರಬೇತಿ ಶಿಬಿರವನ್ನು ಮೇ 10ರಂದು ವಿದ್ಯಾಗೌರಿ ಪುತ್ತೂರು ದೀಪ ಬೆಳಗಿಸಿ ಉದ್ಘಾಟಿಸಿದರು.

Advertisement

ಶ್ರೀಕ್ಷೇತ್ರ ಒಡಿಯೂರಿನ ಸಾಧ್ವಿ ಮಾತಾನಂದಮಯಿ ಅವರು ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಡಾ| ಪ್ರಭಾಕರ ಭಟ್‌ ಕಲ್ಲಡ್ಕ,ನಾರಾಯಣ ಸೋಮಾಯಾಜಿ, ವಸಂತ ಮಾಧವ,ಶಿಶು ಶಿಕ್ಷಣದ ಅನ್ನಪೂರ್ಣಾ, ಭ| ಶಾಂತಾ,ಭ|ಗಂಗಾ ಉಪಸ್ಥಿತರಿದ್ದರು. ಒಟ್ಟು 49 ಮಂದಿ ಶಿಬಿರಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಶಿಬಿರದಲ್ಲಿ ಭಾಗವಹಿಸಿದರು.ಸುರೇಶ್‌ ಜಿ. ಪ್ರಸ್ತಾವಿಸಿದರು.ಭ|ಲಕ್ಷಿತಾ ಸ್ವಾಗತಿಸಿ, ವಾಣಿ ವಂದಿಸಿದರು. ಶೋಭಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next