ಮಂಗಳೂರು: ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಉಳಿವಿನ ಮೂಲಕ ಭಾರತವನ್ನು ಸರ್ವಶ್ರೇಷ್ಠ ವನ್ನಾಗಿಸಲು ಸರ್ವರೂ ಕಟಿಬದ್ಧರಾಗ ಬೇಕು ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕಂಕನಾಡಿ ಗರಡಿಯ 150ನೇ ವರ್ಷದ ಗರಡಿ ಸಂಭ್ರಮ ಕಾರ್ಯ ಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಅನ್ಯಾಯ, ಅಸತ್ಯದ ವಿರುದ್ಧ ಹೋರಾಡಿದ ಕೋಟಿ ಚೆನ್ನಯರ ಶಕ್ತಿ ನಮಗೆ ದಾರಿದೀಪವಾಗಬೇಕು. ಕರಾವಳಿಯ 250ಕ್ಕೂ ಅಧಿಕ ಗರಡಿಗಳಿಗೆ ಕಂಕನಾಡಿ ಗರಡಿಯು ಕಿರೀಟ ಪ್ರಾಯವಾಗಿದೆ ಎಂದು ಹೇಳಿದ ಅವರು, ಕಲ್ಲು, ನದಿ, ಮಣ್ಣು ಸಹಿತ ಎಲ್ಲ ವಸ್ತುಗಳಲ್ಲಿಯೂ ದೇವರನ್ನು ಕಂಡ ಪುಣ್ಯ ಭೂಮಿ ನಮ್ಮದು ಎಂದರು.
ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನವಿತ್ತರು. ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ‘ಚಪ್ಪರ ಕೊಂಬು’ ಕೃತಿಯನ್ನು ಉದ್ಯಮಿ ಜಿತೇಂದ್ರ ಸುವರ್ಣ ಬಿಡು ಗಡೆ ಮಾಡಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಉಮಾನಾಥ ಕೋಟ್ಯಾನ್, ಡಾ| ಭರತ್ ಶೆಟ್ಟಿ ವೈ., ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ವೇದ ಕುಮಾರ್, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಅಭಿವೃದ್ದಿ ಸಮಿತಿ ಗೌರವಾಧ್ಯಕ್ಷ ಕೆ.ಪಿ.ಶೆಟ್ಟಿ, ರೋಹನ್ ಕಾರ್ಪೊರೇಶನ್ ಆಡಳಿತ ನಿರ್ದೇಶಕ ರೋಹನ್ ಮೊಂತೇರೋ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕೆ ಊರ್ಮಿಳಾ ರಮೇಶ್ ಕುಮಾರ್, ಪ್ರಮುಖರಾದ ಕ್ಯಾ| ಬ್ರಿಜೇಶ್ ಚೌಟ, ನಿಶಾಂತ್ ಜೆ. ಸುವರ್ಣ, ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್, ಕಂಕನಾಡಿ ಗರಡಿ 150ರ ಸಂಭ್ರಮ ಸಮಿತಿಯ ಅಧ್ಯಕ್ಷ ಎಂ. ಮೋಹನ್ ಉಜೊjàಡಿ ಮುಂತಾದವರು ಉಪಸ್ಥಿತರಿದ್ದರು.
ಕ್ಷೇತ್ರದ ಟ್ರಸ್ಟಿ ದಿನೇಶ್ ಅಂಚನ್ ಸ್ವಾಗತಿಸಿದರು. ಉಪನ್ಯಾಸಕ ಕೇಶವ ಬಂಗೇರ ನಿರೂಪಿಸಿದರು.