Advertisement

Bantwal ಮಳೆಗೆ ಕಲ್ಲಡ್ಕ ಹೆದ್ದಾರಿ ಕೆಸರುಮಯ; ಟ್ರಾಫಿಕ್‌ ಜಾಮ್‌

01:26 AM May 14, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕ ಭಾಗದಲ್ಲಿ ಒಂದೇ ಮಳೆಗೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹೆದ್ದಾರಿಯಲ್ಲಿ ನೀರು ತುಂಬಿರುವ ಜತೆಗೆ ಕೆಸರುಮಯಗೊಂಡ ಪರಿಣಾಮ ಸೋಮವಾರ ಕೆಲವು ಸಮಯ ಟ್ರಾಫಿಕ್‌ ಜಾಮ್‌ ಉಂಟಾಯಿತು. ಇದರಿಂದ ವಾರದ ರಜೆ ಮುಗಿಸಿ ಕಚೇರಿಗೆ ತೆರಳುತ್ತಿದ್ದವರಿಗೆ ಭಾರೀ ತೊಂದರೆಯಾಯಿತು.

Advertisement

ಮೇ 11ರಂದು ಸಂಜೆ ಹಾಗೂ ಸೋಮವಾರ ಮುಂಜಾನೆ ಮಳೆ ಸುರಿದಿದೆ. ಕಲ್ಲಡ್ಕದಲ್ಲಿ ಸರ್ವಿಸ್‌ ರಸ್ತೆಗೆ ಡಾಮರು ಹಾಕದೆ ಇರುವುದರಿಂದ ಕೆಸರಿನಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಸರ್ವಿಸ್‌ ರಸ್ತೆಯಲ್ಲಿ ಸೂಕ್ತ ರೀತಿಯ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಕಲ್ಲಡ್ಕ ಪೇಟೆಯಿಂದ ಆರಂಭಗೊಂಡ ಟ್ರಾಫಿಕ್‌ ಜಾಮ್‌ ಒಂದು ಬದಿಯಲ್ಲಿ ನರಹರಿ ಪರ್ವತ ಹಾಗೂ ಮತ್ತೂಂದು ಬದಿಯಿಂದ ಕುದ್ರೆಬೆಟ್ಟುವರೆಗೂ ಮುಂದುವರಿದಿತ್ತು. ಸಂಪೂರ್ಣ ಕೆಸರಿನ ಸ್ಥಿತಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಸಾಕಷ್ಟು ತೊಂದರೆ ಗೊಳಗಾಗಿದ್ದು, ಉಟ್ಟ ಬಟ್ಟೆಯಲ್ಲೂ ಕೆಸರು ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು.

ಬೆಳಗ್ಗೆ 9.30ರ ವೇಳೆಗೆ ಬಿಸಿಲು ಬಂದ ಕಾರಣ ಕೆಸರು ಒಣಗಿ ಸಹಜ ಸ್ಥಿತಿಗೆ ಮರಳಿತು. ಒಂದೇ ಮಳೆಗೆ ಕಲ್ಲಡ್ಕದಲ್ಲಿ ಈ ಸ್ಥಿತಿ ಉಂಟಾದರೆ ಮುಂದೆ ಪೂರ್ತಿ ಮಳೆಗಾಲದಲ್ಲಿ ಯಾವ ಸ್ಥಿತಿ ಇರಬಹುದು ಎಂಬ ಪ್ರಶ್ನೆ ಎದುರಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next