Advertisement
ಐದು ವರ್ಷಗಳ ಹಿಂದೆ ಅವರು ಕಲ್ಲಬೆಟ್ಟು ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದಿದ್ದು, ಅದನ್ನು ಮರುಪಾವತಿಸದೆ ಇರುವುದರಿಂದ ಬ್ಯಾಂಕ್ ಸಹಕಾರಿ ಉಪನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಿ, ಅಡವಿಟ್ಟಿದ್ದ ಆಸ್ತಿಯನ್ನು ಏಲಂ ನಡೆ ಸಲು ಪ್ರಕ್ರಿಯೆ ಆರಂಭಿ ಸಿ ತ್ತು. ಬುಧವಾರ ರವಿರಾಜ್ ಹೆಗ್ಡೆ ಅವರು ತನಗೆ ಅನ್ಯಾಯವಾಗಿದೆ ಎಂದು ಬ್ಯಾಂಕ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸ್ಥಳದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಬಗ್ಗೆ ಬ್ಯಾಂಕ್ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಹೇಳಿಕೆ ನೀಡಿದ್ದು “ರವಿರಾಜ್ ಅವರು ಸೂಕ್ತ ದಾಖಲೆಯನ್ನಿಟ್ಟು ಸಾಲ ಪಡೆದಿದ್ದು ಮರುಪಾವತಿಸದೆ ಇರುವುದರಿಂದ ಬ್ಯಾಂಕ್ ಕಾನೂನು ಕ್ರಮ ಕೈಗೊಂಡಿದೆ. ಬ್ಯಾಂಕ್ ಅವರಿಗೆ ಅನ್ಯಾಯವೆಸಗಿಲ್ಲ’ ಎಂದಿದ್ದಾರೆ.