Advertisement

ರಮೇಶ ಆಚಾರ್ಯ ಅವರಿಗೆ ಕಲ್ಕೂರ ಶೇಣಿ ಕಲೋತ್ಸವ ಪ್ರಶಸ್ತಿ

09:10 AM Jul 26, 2017 | Karthik A |

ಮಂಗಳೂರು: ಹಿರಿಯ ಯಕ್ಷಗಾನ ಸ್ತ್ರೀ ಪಾತ್ರಧಾರಿ ಎಂ.ಕೆ. ರಮೇಶ ಆಚಾರ್ಯ ಅವರು ಕಲ್ಕೂರ ಪ್ರತಿಷ್ಠಾನದಿಂದ ವರ್ಷಂಪ್ರತಿ ನೀಡಲಾಗುವ ಕಲ್ಕೂರ ಶೇಣಿ ಕಲೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಬಡಗು ಹಾಗೂ ತೆಂಕುತಿಟ್ಟಿನ ಎರಡೂ ವಿಭಾಗಗಳಲ್ಲೂ ಸಮಾನವಾಗಿ ತನ್ನ ಕಲಾ ಪ್ರೌಢಿಮೆಯಿಂದ ಚಿರಪರಿಚಿತರಾಗಿರುವ ಆಚಾರ್ಯ ಅವರು ಸುರತ್ಕಲ್‌ ಮೇಳದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ ಅನೇಕ ವರ್ಷಗಳ ಕಾಲ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ಕಲಾಸೇವೆಗೈದಿರುವರು.

Advertisement

ಧರ್ಮಸ್ಥಳ, ಮಂದಾರ್ತಿ, ಸಾಲಿಗ್ರಾಮ, ಪೆರ್ಡೂರು ಇತ್ಯಾದಿ ಮೇಳಗಳಲ್ಲಿ ಕಲಾವಿದರಾಗಿದ್ದ ಎಂ.ಕೆ. ರಮೇಶ ಆಚಾರ್ಯ ಅವರು ಮೂಲತಃ ತೀರ್ಥಹಳ್ಳಿಯವರು. ಜು. 28ರ ಸಂಜೆ ನಗರದ ಡಾನ್‌ ಬಾಸ್ಕೋ ಹಾಲ್‌ನಲ್ಲಿ ಜರಗಲಿರುವ ಶೇಣಿ ಸಂಸ್ಮರಣೆ ಕಲೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next