Advertisement

500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ

04:25 PM Jun 27, 2024 | Team Udayavani |

ಹೈದರಾಬಾದ್:‌ ಇಂದು ಬಹುಕೋಟಿ ನಿರ್ಮಾಣದ ʼಕಲ್ಕಿ 2898 AD’ (Kalki 2898 AD) ವರ್ಲ್ಡ್‌ ವೈಡ್‌ ರಿಲೀಸ್‌ ಆಗಿದೆ. ಮುಂಜಾನೆ ಶೋನಿಂದಲೇ ಸಾಲುಗಟ್ಟಿ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ.

Advertisement

ಪ್ರಭಾಸ್‌ (Prabhas) ವೃತ್ತಿ ಬದುಕಿನ ಮತ್ತೊಂದು ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ʼಕಲ್ಕಿ 2898 AD’ ಸೆಟ್ಟೇರಿದ ದಿನದಿಂದ ಹೈಪ್‌ ಹೆಚ್ಚಿಸುತ್ತಲೇ ಬಂದಿತ್ತು. ಪೋಸ್ಟರ್‌, ಟೀಸರ್‌ ಕೊನೆಗೆ ʼಬುಜ್ಜಿʼ ಕಾರನ್ನು ಬಳಸಿಕೊಂಡು ಭರ್ಜರಿ ಪ್ರಚಾರವನ್ನು ಮಾಡಲಾಗಿತ್ತು.

ʼಕಲ್ಕಿ 2898 AD’ ಒಂದು ಸೈನ್ಸ್‌ ಫೀಕ್ಷನ್‌ ಕಥೆಯೊಳ್ಳ ಸಿನಿಮಾ. ಈ ಕಥೆಯಲ್ಲಿ ಪೌರಾಣಿಕ ಅಂಶವನ್ನು ಸೇರಿಸಿ ಹೊಸ ಲೋಕವನ್ನೇ ನಿರ್ದೇಶನ ನಾಗ್‌ ಅಶ್ವಿನ್‌ (Nag Ashwin)  ಅವರು ಸೃಷ್ಟಿಸಿದ್ದಾರೆ. ಇವರ ಕಾಲ್ಪನಿಕ ಲೋಕವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ವರ್ಷಾನುಗಟ್ಟಲೇ ಚಿತ್ರಕ್ಕಾಗಿ ದುಡಿದು, ಶ್ರಮವಹಿಸಿದ್ದಕ್ಕೆ ತಕ್ಕ ಪ್ರತಿಫಲವನ್ನು ನಿರ್ದೇಶಕರು ಮೊದಲ ದಿನದಿಂದಲೇ ಪಡೆಯುತ್ತಿದ್ದಾರೆ.

ʼಕಲ್ಕಿ 2898 AD’ ಒಂದೆರೆಡು ಕೋಟಿಯ ಸಿನಿಮಾವಲ್ಲ. ಚಿತ್ರ ನಿರ್ಮಾಣಕ್ಕಾಗಿ  ವೈಜಯಂತಿ ಮೂವೀಸ್ ಬರೋಬ್ಬರಿ 500 ಕೋಟಿ ರೂ. ವ್ಯಯಿಸಿದ್ದಾರೆ. ಒಂದು ಚಿತ್ರಕ್ಕಾಗಿ ಇಷ್ಟೊಂದು ಕೋಟಿ ಹಣ ಸುರಿಯುವುದು ಅಷ್ಟು ಸುಲಭವಲ್ಲ. ಅಂದಾಜು ಬಜೆಟ್‌ ಇಟ್ಟುಕೊಂಡು ಈ ಯೋಜನೆ ಆಗಿರುವುದಲ್ಲ.

ಚಿತ್ರ ಇಂದು ರಿಲೀಸ್‌ ಆಗಿದೆ. ಈ ನಡುವೆ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಹಾಕಿರುವ ಸ್ಟೋರಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಿತ್ತುಹೋಗಿರುವ ಚಪ್ಪಲಿಯ ಫೋಟೋವೊಂದನ್ನು ಹಾಕಿದ್ದಾರೆ.

Advertisement

ʼಕಲ್ಕಿ 2898 AD’ ಚಿತ್ರ ಆರಂಭವಾದಾಗಿನಿಂದ ರಿಲೀಸ್‌ ಆಗುವವರೆಗೆ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಇದೇ ಚಪ್ಪಲಿಯನ್ನು ಹಾಕಿಕೊಂಡಿದ್ದರು.  ಈ ಚಪ್ಪಲಿ ಸವೆದು ಹೋಗಿದ್ದರೂ ಅದನ್ನು ಅವರು ಬದಲಾಯಿಸಿಲ್ಲ. ಇದು ಅವರ ಶ್ರಮವನ್ನು ತೋರಿಸುತ್ತದೆ. ʼಇದೊಂದು ಸುದೀರ್ಘ ಹಾದಿʼ ಎಂದು ನಾಗ್‌ ಅಶ್ವಿನ್‌ ಅವರು ಬರೆದುಕೊಂಡಿದ್ದಾರೆ.

500 ಕೋಟಿ ವೆಚ್ಚದ ಸಿನಿಮಾ ಮಾಡಿದ್ದರೂ ಎಲ್ಲೂ ಕೂಡ ತಾನೊಬ್ಬ ದೊಡ್ಡ ನಿರ್ದೇಶಕವೆಂದು ತೋರಿಸದೆ ಸಾಮಾನ್ಯನಂತಿರುವ ನಾಗ್‌ ಅಶ್ವಿನ್‌ ಅವರ ವ್ಯಕ್ತಿತ್ವವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಸಿನಿಮಾದ ಸೀಕ್ವೆಲ್‌ ಕೂಡ ರಿಲೀಸ್‌ ಆಗುತ್ತದೆ ಎಂದು ಸಿನಿಮಾ ನೋಡಿದ ಬಳಿಕ ಅನೇಕ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಭಾಸ್‌, ದೀಪಿಕಾ, ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌, ದಿಶಾ ಪಠಾನಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next