Advertisement

ಪಶ್ಚಿಮ ಘಟ್ಟದಲ್ಲೂ ಕಳಿಂಗ ಕಪ್ಪೆ ಪತ್ತೆ

06:52 PM Aug 28, 2020 | Suhan S |

ಶಿರಸಿ: ಭಾರತದ ಪೂರ್ವ ಘಟ್ಟದಲ್ಲಿ ಕಾಣಸಿಗುತ್ತಿದ್ದ ಕಳಿಂಗ ಕಪ್ಪೆ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಪತ್ತೆಯಾಗಿದೆ. ಜೀವವೈವಿಧ್ಯ ಸಂಶೋಧಕ ತಾಲೂಕಿನ ವರ್ಗಾಸರದ ಅಮಿತ ಹೆಗಡೆ ತಂಡ ಇದನ್ನು ಪತ್ತೆ ಹಚ್ಚಿದ್ದಾರೆ.

Advertisement

ಕವಿವಿ ಧಾರವಾಡದ ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವ ಸಂವಹನ ಪ್ರಯೋಗಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿರುವ ಇವರು ಪ್ರೊ| ಗಿರೀಶ ಕಾಡದೇವರು ಅವರ ಮಾರ್ಗದರ್ಶನದಲ್ಲಿ ಹಾಗೂ ಪುಣೆಯ ಝೂವಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾದ ವಿಜ್ಞಾನಿ ಕೆ.ಪಿ. ದಿನೇಶ ಅವರ ಸಹಯೋಗದಲ್ಲಿ ಈ ಕಪ್ಪೆ ಪತ್ತೆ ಹಚ್ಚಿದ್ದಾರೆ.

ಶಿರಸಿ ಭಾಗದಲ್ಲಿ ಈ ವಿಶಿಷ್ಟ ತಳಿಯ ಕಪ್ಪೆ ಪತ್ತೆಯಾಗಿದ್ದು, ಜೀವವೈವಿಧ್ಯ-ಸಮೃದ್ಧ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ, ಈ ಸಂಶೋಧನೆಯು ಕೇವಲ ಒಂದು ಶ್ರೇಣಿಯ ವಿಸ್ತರಣೆಯಲ್ಲ. ಆದರೆ ಇದು ರೂಪವಿಜ್ಞಾನದಲ್ಲಿ ಸಂಪೂರ್ಣ ಭಿನ್ನವಾಗಿ ಕಾಣುವ ಶೋಧ ಕಾರ್ಯವಾಗಿದೆ. ಈ ಕಪ್ಪೆಯನ್ನು ಸಂಶೋಧಕರ ತಂಡದಿಂದ 2018ರಲ್ಲಿ ಪೂರ್ವ ಘಟ್ಟದ ಉತ್ತರ ಭಾಗವಾದ ಓರಿಸ್ಸಾ ಹಾಗೂ ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಲಾಗಿತ್ತು.

ಅಚ್ಚರಿ ಎಂಬಂತೆ ಈ ಕಳಿಂಗ ಕಪ್ಪೆ ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿರುವುದು ನಿಜಕ್ಕೂ ವಿಸ್ಮಯ ಮೂಡಿಸಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಕಂಡುಬಂದ ಕಳಿಂಗ ಕಪ್ಪೆ ಕೇವಲ ಶ್ರೇಣಿ ವಿಸ್ತರಣೆ ಸಂಶೋಧನೆಯಲ್ಲ, ಬದಲಾಗಿ ತನ್ನ ದೇಹ ವಿನ್ಯಾಸದಲ್ಲಿ ಸಂಪೂರ್ಣವಾಗಿ ಭಿನ್ನವಾಗಿದೆ.

ಈ ದೊಡ್ಡ ಗಾತ್ರದ ಕ್ರಿಕೆಟ್‌ ಕಪ್ಪೆ ಹೆಚ್ಚಿನ ಫಿನೋಟೈಫಿಕ್‌ ಪ್ಲಾಸ್ಟಿಟಿಯನ್ನು ತೋರಿಸುತ್ತದೆ. ವ್ಯವಂಶಿಕವಾಗಿ ಒಂದೇ ಜಾತಿಯ ಕಪ್ಪೆಗಳು ನೋಡಲು ಬೇರೆ ಬೇರೆ ಪ್ರಕಾರವಾಗಿ ಕಂಡುಬರುತ್ತವೆ. ಈ ಸಂಶೋಧನೆಯಲ್ಲಿ ಪೂರ್ವ ಹಾಗೂ ಪಶ್ಚಿಮ ಘಟ್ಟಗಳ್ಳಲ್ಲಿ ಕಂಡು ಬರುವ ಕಳಿಂಗ ಕಪ್ಪೆಗಳು ಅನುವಂಶಿಕವಾಗಿ ಒಂದೇ ಆಗಿದ್ದು ನೋಡಲು ರೂಪದಲ್ಲಿ ಸಾಕಷ್ಟು ಬದಲಾವಣೆಗಳನ್ನು ತೋರಿಸುತ್ತಿವೆ ಎಂದು ವಿವರಿಸಿದ್ದಾರೆ.

Advertisement

ನೈಸರ್ಗಿಕ ಪರಿಸರದ ವ್ಯತ್ಯಾಸಗಳು ಅಥವಾ ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ತೀವ್ರವಾದ ರೂಪವಿಜ್ಞಾನದ ದೇಹ ವ್ಯತ್ಯಾಸಗಳನ್ನು ತೋರಿಸುವ ಜೀವಿ ಸಾಮರ್ಥ್ಯ. ಸಂಶೋಧಕ ಅಮಿತ್‌ ಈವರೆಗೆ ನಡೆಸಿರುವ ಅಧ್ಯಯನದ ಅನುಭವದಲ್ಲಿ, ಪಶ್ಚಿಮ ಘಟ್ಟದಲ್ಲಿ ನಾನು ಹಲವಾರು ಬಾರಿ ಈ ಕಪ್ಪೆಯನ್ನು ಕಂಡಿದ್ದೇನೆ. ಇದು ಪಶ್ಚಿಮ ಘಟ್ಟದಿಂದ ತಿಳಿದಿರುವ ಫೆಜೆವರಾಯ ಮಿನರ್ವರಿಯಾ ಪ್ರಭೇದಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. 21ನೇ ಶತಮಾನದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯದಲ್ಲಿ ಅನೇಕ ಜೀವವೈವಿಧ್ಯಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಆದಾಗ್ಯೂ ಪ್ರಸ್ತುತ ನಮ್ಮ ದೇಶದಲ್ಲಿ ಹೊಸ ಪ್ರಭೇದಗಳು ಇತ್ತೀಚೆಗಷ್ಟೇ ಬೆಳಕಿಗೆ ಬರುತ್ತಿವೆ. ಈ ಹೊಸ ಅನ್ವೇಷಣೆ ಸಕಾರಾತ್ಮಕವಾಗಿದೆ. ಆದರೆ ಹೊಸ ಜಾತಿಗಳು, ಪ್ರಭೇದಗಳು ಹೇಗೆ ವರ್ತಿಸುತ್ತವೆ, ಅವುಗಳ ಸ್ವಭಾವಗಳೇನು ಅಥವಾ ವಿಭಿನ್ನ ಜೈವಿಕ ಭೌಗೋಳಿಕ ಶ್ರೇಣಿಗಳಿಗೆ ಅವು ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ನಮಗೆ ಇನ್ನೂ ಹೆಚ್ಚು ತಿಳಿದಿಲ್ಲ. ಇವುಗಳನ್ನು ಸಂರಕ್ಷಿಸುವುದು ನಮಗೆ ಕಷ್ಟ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next