Advertisement

“ಪ್ರತ್ಯೇಕತೆ ಕೂಗು ಏಳದಂತೆ ಮಾಡೋಣ’

03:28 PM Feb 14, 2021 | |

ಸೇಡಂ: ಕಲ್ಯಾಣ ಕರ್ನಾಟಕ ಮತ್ತು ಉತ್ತರ·ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಏಳದಂತೆಮಾಡಬೇಕಾದರೆ ಆ ಭಾಗಕ್ಕಾದ ಅನ್ಯಾಯ
ಸರಿಪಡಿಸಬೇಕಾಗಿದೆ ಎಂದು ಈಶಾನ್ಯಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕರಾಜಕುಮಾರ ಪಾಟೀಲ ತೇಲ್ಕೂರ್‌ ಹೇಳಿದರು.ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರಕೇಂದ್ರ ಹಮ್ಮಿಕೊಂಡಿದ್ದ ಗುಲಬರ್ಗಾ
ವಿಶ್ವವಿದ್ಯಾಲಯ ಉಪ ಕುಲಪತಿ ಮತ್ತು ನೂತನಕುಲಸಚಿವರ ಸನ್ಮಾನ ಸಮಾರಂಭ ಉದ್ಘಾಟಿಸಿಅವರು ಮಾತನಾಡಿದರು.

Advertisement

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಆಗಬೇಕು. ಎಲ್ಲೆಲ್ಲಿ ಅಸಮತೋಲನ ಇದೆಯೋಅವುಗಳನ್ನು ಸರಿಯಾಗಿಸಿದಾಗ ಮಾತ್ರ ಪ್ರತ್ಯೇಕರಾಜ್ಯದ ಕೂಗನ್ನು ತಡೆಯಲು ಸಾಧ್ಯವಾಗುತ್ತದೆ.ಈ ಕುರಿತು ಎಲ್ಲ ರಾಜಕೀಯ ನಾಯಕರುಎಚ್ಚರಿಕೆ ವಹಿಸಬೇಕು ಎಂದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಸಂವಿಧಾನದಮೂಲಕ ನೀಡಿದ ಮೂಲಭೂತ ಕರ್ತವ್ಯ ಮತ್ತುಹಕ್ಕುಗಳನ್ನು ಪಡೆದಿರುವುದಕ್ಕೆ ಹೆಮ್ಮೆ ಪಡಬೇಕು.800 ವರ್ಷಗಳ ಹಿಂದೆ ಇದೇ ಕಾರ್ಯವನ್ನುಅಂದಿನ ಶರಣರು ಪ್ರತಿಪಾದಿಸಿದ್ದರು. ಅವೇಈಗಿನ ಸಂವಿಧಾನದಲ್ಲಿವೆ. ಮೂಲಭೂತ ಹಕ್ಕುಕಾಪಾಡಲು ಪ್ರತಿಯೊಂದು ಜಾತಿ, ಜನಾಂಗವನ್ನುಜೊತೆಗೂಡಿಸಿಕೊಂಡು ಬಸವಣ್ಣ ಹೋರಾಟಮಾಡಿದ್ದರು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದವರೇಗುಲಬರ್ಗಾ ವಿವಿ ಉಪ ಕುಲಪತಿ ಮತ್ತುಕುಲ ಸಚಿವರಾಗಬೇಕೆಂಬ ಕನಸಿಗೆ ಈಗರೆಕ್ಕೆ ಬಂದಂತಾಗಿದೆ. ಕಲ್ಯಾಣ ಭಾಗದವರೇಈಗ ಕುಲಪತಿ ಆಗಿರುವುದು ಹೆಮ್ಮೆ ವಿಷಯಎಂದರು.

ಗುವಿಗು ಉಪ ಕುಲಪತಿ ಪ್ರೊ| ದಯಾನಂದಅಗಸರ ಮಾತನಾಡಿ, 40 ವರ್ಷಗಳಿಂದಲೂ ಈಭಾಗದವರೇ ಗುಲಬರ್ಗಾ ವಿಶ್ವವಿದ್ಯಾಲಯದ
ಉಪ ಕುಲಪತಿ, ಕುಲ ಸಚಿವರಾಗಬೇಕೆಂದುಇದ್ದ ಕನಸು ಈಗ ಸಾಕಾರವಾಗಿದೆ ಎಂದುಹೇಳಿದರು.

Advertisement

ಮೃತ ಡಿ.ಕೆ. ರವಿ ಅವರು ಸೇಡಂ ಉಪವಿಭಾಗಾಧಿ ಕಾರಿ ಆಗಿದ್ದಾಗ ಮಳಖೇಡದಕಾಗಿಣಾ ನದಿ ಸಮೀಪದಲ್ಲಿ 25 ಎಕರೆ ಜಮೀನನ್ನು
ವಿವಿಗೆ ನೀಡಿದ್ದರು. ಬರುವ ದಿನಗಳಲ್ಲಿ ಅದೇಜಮೀನಿನಲ್ಲಿ ಜೀವನ ಕೌಶಲ್ಯ ಆಧಾರಿತ ಆಧುನಿಕಶಿಕ್ಷಣ ಕೇಂದ್ರ ಪ್ರಾರಂಭಿಸುವ ಪ್ರಸ್ತಾವನೆಯನ್ನು
ಶೀಘ್ರವೇ ಸರ್ಕಾರದ ಮುಂದಿಡಲಾಗುವುದುಎಂದು ತಿಳಿಸಿದರು.

ಗುವಿಗು ಉಪ ಕುಲಪತಿ ಪ್ರೊ| ದಯಾನಂದಅಗಸರ, ಆಡಳಿತ ಕುಲಸಚಿವ ಶರಣಬಸಪ್ಪಕೋಟೆಪ್ಪಗೋಳ, ಮೌಲ್ಯಮಾಪನ ಕುಲಸಚಿವ
ಪ್ರೊ| ಸೋನಾರ ನಂದಪ್ಪ, ಬೆಂಗಳೂರು ರಾಜೀವಗಾಂಧಿ  ಆರೋಗ್ಯ ವಿವಿ ಕುಲಸಚಿವ ಶಿವಾನಂದಕಾಪಶಿ ಅವರನ್ನು ಸನ್ಮಾನಿಸಲಾಯಿತು.

ಜಿಡಿಎ ಸಹಾಯಕ ಆಯುಕ್ತ ರಾಚಪ್ಪ, ಸಿಡಿಸಿಸದಸ್ಯ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಡಾ| ಶ್ರೀನಿವಾಸಮೊಕದಮ್‌, ಪುರಸಭೆ ಅಧ್ಯಕ್ಷ ಚನ್ನಮ್ಮ ಪಾಟೀಲ,ರಾಜಕುಮಾರ ಸಲಗರ, ಪ್ರಾಂಶುಪಾಲಪ್ರೊ| ಶಿವಶರಣಪ್ಪ ಧಾಬಾ, ರಾಮು ರಾಠೊಡವೇದಿಕೆಯಲ್ಲಿದ್ದರು.

ಸಿಡಿಸಿ ಸದಸ್ಯ ಬನ್ನಪ್ಪ ಕುಂಬಾರ ಸ್ವಾಗತಿಸಿ,ಪರಿಚಯಿಸಿದರು. ಶಾರದಾ, ಶಿವಾನಿಪ್ರಾರ್ಥಿಸಿದರು, ಪ್ರೊ| ಬಿ.ಆರ್‌. ಅಣ್ಣಾಸಾಗರನಿರೂಪಿಸಿದರು.

ಓದಿ :·ಅಶ್ವಿನ್ ಮ್ಯಾಜಿಕ್ ಗೆ ಗಂಟುಮೂಟೆ ಕಟ್ಟಿದ ಆಂಗ್ಲರು: ಭಾರತಕ್ಕೆ ಬೃಹತ್ ಮುನ್ನಡೆ

Advertisement

Udayavani is now on Telegram. Click here to join our channel and stay updated with the latest news.

Next