Advertisement
ಒಂದೇಡೆ ಕೋವಿಡ್ ಕಾಟ, ಮತ್ತೂಂದೆಡೆ ಪ್ರವಾಹ ಭೀತಿ. ಇದೆಲ್ಲರ ನಡುವೆ ಕೊಡ ಕುಡಿಯುವ ನೀರು ಸಿಗದ ಪರಿಸ್ಥಿತಿ. ಮನೆಯಲ್ಲಿದ್ದ ದವಸ-ಧಾನ್ಯಗಳು ನೀರು ಪಾಲಾಗಿ ಅಕ್ಷರಶಃ ಬೀದಿಗೆ ಬಿದ್ದ ದುಸ್ಥಿತಿ. ಮೇಲಾಗಿ ಸುಖ-ದುಃಖ ಹಂಚಿಕೊಳ್ಳಬೇಕೆಂದರೆ ಮೊಬೈಲ್ ಸಂಪೂರ್ಣ ಬಂದಾಗಿವೆ. ವಿದ್ಯುತ್ ಇಲ್ಲದಿದ್ದರೆ ಮೊಬೈಲ್‌ನಲ್ಲಿ ಚಾರ್ಜ್‌ವೂ ಇಲ್ಲ, ಸರ್ವಿಸವೂ ಇಲ್ಲ.
Related Articles
Advertisement
ಪ್ರವಾಹದ ಸಂಕಷ್ಟಕ್ಕೆ ಸಿಲುಕಿರುವ ಜನತೆಯನ್ನುಸಂರಕ್ಷಿಸಲು ಹಾಗೂ ತಕ್ಷಣವೇ ಸ್ಪಂದಿಸಲು ಜಿಲ್ಲಾಡಳಿತ ಸೂಕ್ತ ಅನುದಾನ ಬಿಡುಗಡೆ ಮಾಡುವುದರ ಜತೆಗೆ ಕೋವಿಡ್ ಇರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಶಾಲೆ-ದೇವಾಲಯ ಸೇರಿ ಇತರೆಡೆ ವ್ಯಾಪಕವಾಗಿ ಗಂಜಿ ಕೇಂದ್ರಗಳನ್ನು ತೆರೆದು ಶುದ್ಧ ಕುಡಿಯುವ ನೀರು ಹಾಗೂ ಊಟ ನೀಡಿದಲ್ಲಿ ಮಾತ್ರ ಜನರಿಗೆ ಸ್ವಲ್ಪ ಪ್ರಮಾಣದಲ್ಲಾದರೂ ಸ್ಪಂದಿಸಿದಂತಾಗುತ್ತದೆ ಎಂದು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿ ಈ ಹಿಂದೆ ನಿಭಾಸಿದ್ದರಕ್ಕಿಂತ ಹತ್ತು ಪಟ್ಟು ಜಾಸ್ತಿವಿದೆ. ಹೀಗಾಗಿ ಅಧಿಕಾರಿಗಳು ಮೈ ಮರೆಯಬಾರದು. ಉಸ್ತುವಾರಿ ಸಚಿವರು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸಂಕಷ್ಟದಲ್ಲಿರುವ ಜನರನ್ನು ಕಾಪಾಡುವುದು ಬಹುಮುಖ್ಯವಾಗಿದೆ. ಪರಿಹಾರ ಕ್ರಮಗಳು ಕೊನೆ ವ್ಯಕ್ತಿಗೆ ತಲುಪುವ ಕೆಲಸ ತುರ್ತಾಗಿ ಆಗಬೇಕಿದೆ.
ಕರ್ಜಗಿ ವಲಯದಲ್ಲಿ ವಿದ್ಯುತ್ ಇಲ್ಲದೇ 50ಕ್ಕೂ ಹೆಚ್ಚು ಹಳ್ಳಿಗಳು ಕಗ್ಗತ್ತಲಲ್ಲಿ ಮುಳುಗಿದ್ದರಿಂದ ಕುಡಿಯಲು ನೀರು ಸಿಗದೇ ಜನರು ಪರದಾಡುತ್ತಿದ್ದಾರೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಕೊಚ್ಚಿಕೊಂಡು ಹೋಗಿರುವ ರಸ್ತೆ ಸೇತುವೆಗಳನ್ನು ತಾತ್ಕಾಲಿಕ ಮಾಡಿದಾಗ ಮಾತ್ರ ಟ್ಯಾಂಕರ್‌ಗಳನ್ನು ಗ್ರಾಮಕ್ಕೆ ಹೋಗಲು ಸಾಧ್ಯವಾಗುತ್ತದೆ. ಹೀಗಾಗಿ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವುದು ಅವಶ್ಯಕವಿದೆ. -ಎಂ.ವೈ. ಪಾಟೀಲ್, ಶಾಸಕರು, ಅಫಜಲಪುರ
ಶುಕ್ರವಾರ ಕಂದಾಯ ಸಚಿವ ಆರ್. ಅಶೋಕ ಅವರು ಅತಿವೃಷ್ಟಿ ಹಾಗೂ ಪ್ರವಾಹ ಹಾನಿಯನ್ನು ಕಾಟಾಚಾರಕ್ಕೆ ವೀಕ್ಷಿಸಿದ್ದು, ಒಂದೇ ಒಂದು ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಲಿಲ್ಲ ಜತೆಗೆ ಪರಿಹಾರಕ್ಕೂ ಮುಂದಾಗಲಿಲ್ಲ. ಹಿಂದೆಂದು ಕಂಡರೀಯದಶತಮಾನದ ಮೇಘ ಸ್ಫೋಟವಾಗಿದ್ದರೂ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂಬುದು ಈ ಮೂಲಕ ತೋರಿಸುತ್ತದೆ. -ಡಾ| ಅಜಯಸಿಂಗ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ
–ವಿಶೇಷ ವರದಿ