Advertisement
ರಾಜ್ಯದಲ್ಲಿ ಒಟ್ಟು 1,50,53,297 ಕಾರ್ಡ್ ದಾರರ ಪೈಕಿ 22,62,403 ಕಾರ್ಡ್‌ದಾರರಲ್ಲಿ ಆದ್ಯತಾ ಮತ್ತು ಅಂತ್ಯೋದಯ ಕಾರ್ಡ್‌ದಾರರು 10,97,621 ಹಾಗೂ 1.20 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿದ 10,54,368 ಕಾರ್ಡ್ ದಾರರು, ಅಲ್ಲದೆ, 1,06,152 ಜನರು ಆದಾಯ ತೆರಿಗೆ ಕಟ್ಟುವವರು, 4272 ಸರ್ಕಾರಿ ನೌಕರರು ಅನರ್ಹ ಭೀತಿ ಎದುರಿಸುವಂತಾಗಿದೆ. ಈ ಎಲ್ಲ ಕಾರ್ಡ್‌ದಾರರ ನೈಜ ಸ್ಥಿತಿ ಪರಿಶೀಲಿಸಿ ಆಗಸ್ಟ್ 31ರೊಳಗೆ ವರದಿ ಕಳಿಸುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಸರ್ಕಾರ ಸೂಚನೆ ನೀಡಿದೆ. ಇದರ ಆಧಾರದಲ್ಲಿ ಒಟ್ಟು 22.62 ಲಕ್ಷ ಕಾರ್ಡ್ ದಾರರು ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ.
Related Articles
Advertisement
ನಾನು ವಯಸ್ಸಾದವ. ಕೂಲಿ ಮಾಡುತ್ತೇನೆ, ಹೆಂಡತಿ ಯೂ ಜತೆಯಲ್ಲಿಯೇ ಬರುತ್ತಾಳೆ. ಇಬ್ಬರದ್ದು ಸೇರಿಸಿ ದರೂ 400 ರೂ. ಸಿಗುವುದು ಕಷ್ಟ. ಆದರೆ, ಸರ್ಕಾರ ನಮ್ಮ ಆದಾಯ 1.20 ಲಕ್ಷ ರೂ. ಆಗಿದೆ ಎಂದು ತಪಾಸಣೆಗೆ ಸೂಚಿಸಿದೆ. ಇದೇನು ಲೆಕ್ಕವೋ ಗೊತ್ತಿಲ್ಲ. ನನಗೆ ಮಕ್ಕಳಿಲ್ಲ, ಕಾರ್ಡ್‌ನಲ್ಲಿ ಇಬ್ಬರ ಹೆಸರೇ ಇದೆ. ಕಾರ್ಡ್ ಹೋದರೆ ನಮ್ಮ ಗತಿ ಏನು? ●ಆನಂದಪ್ಪ(ಹೆಸರು ಬದಲಿಸಿದೆ), ಆಳಂದ ಪಟ್ಟಣದ ವೃದ್ಧ
ಕಲಬುರಗಿ ಜಿಲ್ಲೆ ಒಂದರಲ್ಲೇ 76 ಸಾವಿರಕ್ಕೂ ಹೆಚ್ಚು ಜನರು ಆದಾಯ ಮಿತಿ ಮತ್ತು ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಕಟ್ಟುವವರಿರುವ ಕಾರಣಕ್ಕೆ ಕಾಡ್ ìಗಳ ಕುರಿತು ತಪಾಸಣೆ ಮಾಡಿ ನೈಜ ವರದಿ ಕೊಡಲು ಸರ್ಕಾರ ಕೇಳಿದೆ. ಕುಟುಂಬದ ಎಲ್ಲ ಸದಸ್ಯರ ಆದಾಯವನ್ನು ಮಿತಿ ವ್ಯಾಪ್ತಿಗೆ ಪರಿಗಣಿಸಲಾಗು ತ್ತಿದೆ. ಮಕ್ಕಳ ಆದಾಯ ಪತ್ರವನ್ನು ಮಿತಿ ವ್ಯಾಪ್ತಿಗೆ ಪರಿಗಣಿಸಲು ಸೂಚಿಸಲಾಗಿದೆ. ●ಭೀಮರಾಯ ಕಲ್ಲೂರು ಉಪ ನಿರ್ದೇಶಕರು, ಆಹಾರ ಇಲಾಖೆ, ಕಲಬುರಗಿ
ಅನರ್ಹತೆ ಮಾನದಂಡ ಆಧಾರದಲ್ಲಿ ಆತುರವಾಗಿ ಕಾರ್ಡ್‌ಗಳನ್ನು ರದ್ದು ಮಾಡಿದರೆ ಬಹಳ ಕುಟುಂಬಕ್ಕೆ ತೊಂದರೆ ಆಗಲಿದೆ. ಅನ್ನಭಾಗ್ಯ ಅಥವಾ ಗ್ಯಾರಂಟಿ ಹೊಡೆತಕ್ಕೆ ಹೀಗೆ ಮಾಡುವುದೇ ಆದರೆ ಸ್ವಾಭಿಮಾನಿ ಕನ್ನಡಿಗರಿಗೆ, ಶಕ್ತ ಕನ್ನಡಿಗರಿಗೆ ಪಡಿತರ ಬಿಟ್ಟುಕೊಡಲು ಮುಖ್ಯಮಂತ್ರಿಗಳು ಕರೆ ನೀಡಲಿ. ಅದು ಬಿಟ್ಟು ಗದಾ ಪ್ರಹಾರ ಸರಿಯಲ್ಲ. ●ಸುನೀಲ ಮಾರುತಿ ಮಾನಪಡೆ, ಹೋರಾಟಗಾರ
-ಸೂರ್ಯಕಾಂತ್ ಎಂ.ಜಮಾದಾರ