ಕಾಪು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಪುನರಾಯ್ಕೆ ಬಯಸಿ, ಅವರ ಶ್ರೇಯೋಭಿವೃದ್ಧಿಗಾಗಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರೀ ಮಹಾಗಣಪತಿ ಅಥರ್ವಶೀರ್ಷ ಮಹಾಯಾಗ ನಡೆಯಿತು.
ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೇ. ಮೂ. ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ ವೇ.ಮೂ. ಕೊಡವೂರು ಸೀತಾರಾಮ ಆಚಾರ್ಯ ಆಚಾರ್ಯ ಅವರ ಆಚಾರ್ಯತ್ವದಲ್ಲಿ ಸುಮಾರು 20 ಮಂದಿ ಋತ್ವಿಜರ ನೇತೃತ್ವದಲ್ಲಿ, ಅರ್ಚಕ ವೇ.ಮೂ. ಕಳತ್ತೂರು ಕೇಶವ ತಂತ್ರಿಗಳ ಸಹಕಾರದೊಂದಿಗೆ ಗಣಪತಿ ಅಥರ್ವಶೀರ್ಷ ಮಹಾಯಾಗ ಸಂಪನ್ನಗೊಂಡಿತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪರವಾಗಿ ಬೆಂಗಳೂರಿನ ಉದ್ಯಮಿ ಸುಧಾಕರ್ ಕೆ. ಅವರು ಯಾಗದ ಸೇವಾರ್ಥಿಯಾಗಿ ಯಾಗದ ಪ್ರಾಯೋಜಕತ್ವ ವಹಿಸಿದ್ದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟರು ರತ್ನಾಕರ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಪಿ. ಶೆಟ್ಟಿ ಗುರ್ಮೆ, ಬಿಜೆಪಿ ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹಯಗ್ರೀವ ತಂತ್ರಿ, ರಂಗನಾಥ ಶೆಟ್ಟಿ, ಪುರುಷೋತ್ತಮ ಶೆಟ್ಟಿಗಾರ್, ವಿಷ್ಣುಮೂರ್ತಿ ಸರಳಾಯ, ಶಬರಿ ರಾಜೇಶ್ ಶೆಟ್ಟಿ, ಶಾರದೇಶ್ವರಿ ಗುರ್ಮೆ, ಮಮತಾ ಕಿರಣ್ ತಂತ್ರಿ, ರತ್ನಾಕರ ಮುಕಾರಿ, ಪ್ರಮುಖರಾದ ಅರುಣಾಕರ ಶೆಟ್ಟಿ ಕಳತ್ತೂರು, ವಾಸು ಶೆಟ್ಟಿ ಕಳತ್ತೂರು, ರಮೇಶ್ ಶೆಟ್ಟಿ ಅಂಗಡಿಗುತ್ತು, ಸುಧಾಕರ ಶೆಟ್ಟಿ, ಪ್ರವೀಣ್ ಭಂಡಾರಿ, ಜಗದೀಶ್ ಶೆಟ್ಟಿ, ನಾರಾಯಣ ಶೆಟ್ಟಿ ವಳದೂರು, ಶೇಖರ ಶೆಟ್ಟಿ, ಭಾರ್ಗವ ತಂತ್ರಿ, ವ್ಯವಸ್ಥಾಪಕ ಕೃಷ್ಣಮೂರ್ತಿ ರಾವ್, ಸ್ಥಳವಂದಿಗರು, ಕುತ್ಯಾರು, ಪಾದೂರು, ಕಳತ್ತೂರು ಗ್ರಾಮಸ್ಥರು, ಮೊದಲಾದವರು ಉಪಸ್ಥಿತರಿದ್ದರು.