Advertisement

ಕಳಸ: 190 ಕ್ಕೂ ಹೆಚ್ಚು ಮಂದಿಗೆ ಹೋಂ ಕ್ವಾರಂಟೈನ್

03:39 PM Jul 10, 2020 | Naveen |

ಮೂಡಿಗೆರೆ: ಕಳಸ ಪಟ್ಟಣದಲ್ಲಿ ಕುಟುಂಬವೊಂದಕ್ಕೆ ಕೋವಿಡ್‌ ಸೋಂಕು ತಗಲಿರುವುದು ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಸೋಂಕು ಹಿನ್ನೆಲೆಯಲ್ಲಿ 190 ಕ್ಕೂ ಹೆಚ್ಚು ಜನರನ್ನು ಹೋಂ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಕುಟುಂಬವೊಂದರ ಇಬ್ಬರು ಮಹಿಳೆಯರಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಆ ಮನೆಯ ಸದಸ್ಯರು ಹಾಗೂ ಮನೆಯ ಸದಸ್ಯರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದ 120 ಜನರ ಪಟ್ಟಿಯನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಸಿದ್ಧಪಡಿಸಿಕೊಂಡು ಹೋಂ ಕ್ವಾರಂಟೈನ್‌ಗೆ ಮುಂದಾಗಿದೆ. ಇತ್ತ ಎಂ.ಎಲ್‌.ಸಿ. ಯೊಬ್ಬರಿಗೆ ಸೋಂಕು ತಗಲಿರುವುದರಿಂದ, ಅವರು ಜುಲೈ ಕೊನೆಯ ವಾರದಲ್ಲಿ ಕಳಸದ ಗ್ರಾಪಂ ಕಸ ವಿಲೇವಾರಿ ಘಟಕದ ಉದ್ಘಾಟನೆಗೆ ಬಂದಿದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 70 ಜನರನ್ನು ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊರನಾಡಿನ ಭೀಮೇಶ್ವರ ಜೋಷಿ, ಕಳಸ ಗ್ರಾಪಂ ಅಧ್ಯಕ್ಷರು ಸೇರಿದಂತೆ ಹಲವರನ್ನು ಈಗಾಗಲೇ ಹೋಂ ಕ್ವಾರಂಟೈನ್‌ ಗೆ ಒಳಪಡಿಸಲಾಗಿದೆ.

ಕಳಸದ ಕುಟುಂಬದ ಸೋಂಕಿತ ಮಹಿಳೆಯ ಮಗ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಬರೆದಿದ್ದು ಆತನ ಸಂಪರ್ಕದಲ್ಲಿ ಬಂದಿದ್ದ ಆತನ ಗೆಳೆಯರು, ಸಹಪಾಠಿಗಳು, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಪೈಕಿ ಹಲವರು ಹೋಂ ಕ್ವಾರಂಟೈನ್‌ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ತಿರುಗಾಡುತ್ತಿರುವುದನ್ನು ಸ್ಥಳೀಯರು ಆಕ್ಷೇಪಿಸಿದ್ದು, ಪ್ರಕರಣ ದಾಖಲಿಸುವಂತೆ ಒತ್ತಾಯ ಮಾಡಿದ್ದಾರೆ.

ಇದರ ನಡುವೆ ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿರುವ ಕಳಸ ಠಾಣಾಧಿಕಾರಿ ಮಂಜಯ್ಯ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕೆಲ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ, ಹೋಂ ಕ್ವಾರಂಟೈನ್‌ಗೆ ಒಳಗಾದ ಜನರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ‌ ನೀಡಿದ್ದಾರೆ. ಮಾಸ್ಕ್ ಧರಿಸದೆ ಇದ್ದ ಹಲವರಿಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next