ನರಗುಂದ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ಮಹದಾಯಿ ನದಿ ಜೋಡಣೆ ಹಾಗೂ ಕಪ್ಪತ್ತಗುಡ್ಡ ಪ್ರವಾಸಿ ತಾಣವನ್ನಾಗಿ ರೂಪಿಸಲು ಆಗ್ರಹಿಸಿ ಕರವೇ ಪ್ರವೀಣಕುಮಾರ ಶೆಟ್ಟಿ ಬಣದಿಂದ ಬಂಡಾಯ ನಾಡು ನರಗುಂದ ಪಟ್ಟಣದಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ಪ್ರಾರಂಭಿಸಲಾಯಿತು.
Advertisement
ಕರವೇ ರಾಜ್ಯ ಘಟಕ, ಗದಗ ಹಾಗೂ ಧಾರವಾಡ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಜಿಲ್ಲಾ-ತಾಲೂಕುಗ ಳ ಪದಾಧಿ ಕಾರಿಗಳು ಇಂದು ಪಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟ ವೇದಿಕೆಯಲ್ಲಿ ಪಾದಯಾತ್ರೆಗೆ ಚಾಲನೆ ಪಡೆದು ನರಗುಂದ ರೈತ ಬಂಡಾಯದಲ್ಲಿ ಮಡಿದ ದಿ| ಈರಪ್ಪ ಕಡ್ಲಿಕೊಪ ಅವರ ವೀರಗಲ್ಲಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಯಿತು.
ಶಲವಡಿ ಮೂಲಕ ಸೆ. 20ರಂದು ಜಿಲ್ಲೆ ಪ್ರವೇಶಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕರವೇ ಪ್ರವೀಣಶೆಟ್ಟಿ ಬಣದ ಜಿಲ್ಲಾಧ್ಯಕ್ಷ ವೆಂಕಟೇಶ ಆರ್. ಬೇಲೂರ ತಿಳಿಸಿದರು. ಪಾದಯಾತ್ರೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರ, ರಾಜ್ಯ ಕಮಿಟಿ ಸದಸ್ಯ ದಾವಲಸಾಬ್ ಮುಳಗುಂದ, ಶ್ರೀನಿವಾಸ ಭಂಡಾರಿ, ತಿಮ್ಮಣ್ಣ ಡೋಣಿ, ಸಹದೇವ ಕೋಟಿ, ಪರಶುರಾಮ ಬಂಕದಮನಿ ಸೇರಿ ಇನ್ನಿತರರಿದ್ದರು.