Advertisement

Kalam World Records: ವಿಶ್ವ ದಾಖಲೆ ಬರೆದ 14 ತಿಂಗಳ ಪೋರಿ

01:32 PM Feb 19, 2024 | Team Udayavani |

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಡಿ.ಎಂ.ಧನಲಕ್ಷ್ಮೀ ಕುಮಾರಿ, ಕೆ.ಹುಲಿಯಪ್ಪಗೌಡ ಅವರ 14 ತಿಂಗಳ ಮಗು ಮನಸ್ಮಿತಾ ಕಲಾಂ ವರ್ಲ್ಡ್ ರೆಕಾರ್ಡ್ಸ್‌ ಪುಸ್ತಕ ಸೇರಿದ್ದಾಳೆ.

Advertisement

ಮಾ.3ರಂದು ಚೆನ್ನೈನ ಟೀಚ್‌ ಆಡಿಟೋರಿಯಂನಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆಯವರು ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೇವಲ 14 ತಿಂಗಳಿಗೆ ಈಕೆ ದಾಖಲೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಮಗುವಿನ ತಾಯಿ ಡಿ.ಎಂ.ಧನಲಕ್ಷ್ಮೀ ಕುಮಾರಿ ಗೃಹಿಣಿಯಾಗಿದ್ದು, ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.. ಮನಸ್ಮಿತಾ ಅವರು ಕನ್ನಡ ಮತ್ತು ಇಂಗ್ಲಿಷ್‌ ಅಕ್ಷರಮಾಲೆ, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರೀಯ ಪ್ರಾಣಿ, ಹಣ್ಣು, ಪಕ್ಷಿ, ಧ್ವಜ, ಹೂವು ಹೀಗೆ 500 ಪದಗಳನ್ನು ಗುರುತಿಸುತ್ತಾಳೆ. ಈಕೆಯ ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆಯನ್ನು ಕಲಾಂ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆ ಶ್ಲಾ ಸಿದೆ. ಈ ಸಾಧನೆ ಕಲಾಂ ಅವರ ವಿಶ್ವ ದಾಖಲೆಗಳಲ್ಲಿ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next