Advertisement

ಜನರ ಸೇವೆಗೆ ನಿಂತ‌ ಕಲಾಲ ಸಹೋದರರು: ಪ್ರತಿಮನೆಗೂ ಕಿಟ್ ವಿತರಣೆ

12:38 PM May 29, 2021 | Team Udayavani |

ಗಂಗಾವತಿ: ಜನಿಸಿದ ಊರು ಸ್ವರ್ಗಕ್ಕೆ ಸಮ ಎಂದು ಹೇಳಲಾಗುತ್ತದೆ. ತಾಲೂಕಿನ ಮಲ್ಲಾಪೂರದಲ್ಲಿ ಜನಿಸಿದ ನಾಲ್ವರು ಕಲಾಲ ಸಹೋದರರು ಇಡೀ ಊರಿಗೆ ಆಹಾರದ ಕಿಟ್ ವಿತರಿಸಿ ಸಾರ್ಥಕ ಸೇವೆ ಮಾಡಿದ್ದಾರೆ.

Advertisement

ಮಲ್ಲಾಪೂರ ಗ್ರಾಮದ ಮೂಲ ನಿವಾಸಿಗಳಾದ ಮಂಜುನಾಥ ಕಲಾಲ, ಸಿದ್ದೋಜಿರಾವ್ ಕಲಾಲ, ಮಲ್ಲಿಕಾರ್ಜುನ ಕಲಾಲ, ಪರಶುರಾಮ ಕಲಾಲ ಸಹೋದರರು ತೀವ್ರ ಬಡತನದಿಂದ ದುಡಿಯಲು ಹೊಸಪೇಟೆಯ ಜಿಂದಾಲ್ ತೋರಣಗಲ್ಲು ಗ್ರಾಮಕ್ಕೆ ತೆರಳಿ ಅಲ್ಲಿ ಉದ್ಯಮ ನಡೆಸಿದ್ದಾರೆ. ಆದರೂ ಜನಿಸಿದ ಊರನ್ನು ಕಲಾಲ ಸಹೋದರರು ಎಂದಿಗೂ ಮರೆತಿಲ್ಲ. ಪ್ರತಿವರ್ಷ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ಪ್ರೌಢಶಾಲೆಗೆ ಡಿಜಿಟಲ್ ಬೋರ್ಡ್ ಕಂಪ್ಯೂಟರ್ ವಿತರಣೆ ಮಾಡಿದ್ದಾರೆ. ಇದೀಗ ಲಾಕ್ ಡೌನ್ ಸಂಕಷ್ಟದಲ್ಲಿ ಮಲ್ಲಾಪೂರ-ರಾಂಪೂರ ಗ್ರಾಮದ ಪ್ರತಿ ಮನೆಗೂ ಅಕ್ಕಿ ಬೇಳೆ ಸೇರಿ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಶ್ಲಾಘನೀಯ ಕಾರ್ಯ: ಕಲಾಲ ಸಹೋದರರು ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಮನೆಗೂ ರೇಶನ್ ಕಿಟ್ ವಿತರಿಸಿ ಮಾದರಿಯಾಗಿದ್ದಾರೆ. ಹುಟ್ಟಿದ ಊರನ್ನು ಎಂದಿಗೂ ಮರೆಯದ ಕಲಾಲ ಸಹೋದರರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶಾಸಕ ಪರಣ್ಣ ಮುನವಳ್ಳಿ ಸಾರ್ವಜನಿಕರಿಗೆ ಆಹಾರದ ಕಿಟ್ ವಿತರಿಸಿ ಶ್ಲಾಘಿಸಿದರು.

ಇದನ್ನೂ ಓದಿ:ಕೋವಿಡ್ ನಿಂದ ಮರಣ ಹೊಂದಿದ ಆಶಾ, ಅಂಗನವಾಡಿ ಕಾರ್ಯಕರ್ತರ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಿ

Advertisement

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಪಿಎಸ್ಐ ಜೆ.ದೊಡ್ಡಪ್ಪ, ಇಒ ಡಾ.ಮೋಹನ ಕುಮಾರ, ಎಚ್.ಸಿ.ಯಾದವ ವಕೀಲ, ಆನಂದಗೌಡ, ಅಂಜಿನಿಗೌಡ, ಸುಂಕಪ್ಪ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next