Advertisement

ಬಸವ ಜಯಂತಿ-ರಂಜಾನ್‌ ಸರಳವಾಗಿ ಆಚರಿಸಿ

03:54 PM Apr 24, 2020 | Naveen |

ಕಾಳಗಿ: ಏ.25ರಿಂದ ಆರಂಭವಾಗಲಿರುವ ರಂಜಾನ್‌ ಹಾಗೂ 26 ರಂದು ಜರುಗುವ ಬಸವ ಜಯಂತಿ ಹಬ್ಬಗಳನ್ನು ಹಿಂದು-ಮುಸ್ಲಿಂ ಬಾಂಧವರು ಅತ್ಯಂತ ಸರಳವಾಗಿ ಆಚರಿಸಿ ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ತಹಶೀಲ್ದಾರ್‌ ನೀಲಪ್ರಭ ಬಬಲಾದ ಹೇಳಿದರು.

Advertisement

ಪಟ್ಟಣದಲ್ಲಿ ನಡೆದ ಹಮ್ಮಿಕೊಂಡ ಬಸವ ಜಯಂತಿ, ರಂಜಾನ್‌ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವವನ್ನು ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಸಾಮಾಜಿಕ ಅಂತರ ಕಾಪಾಡುವುದು ಅನಿವಾರ್ಯವಾಗಿದೆ. ಸರ್ಕಾರ ಎಲ್ಲ ಧಾರ್ಮಿಕ ಆಚರಣೆಗಳನ್ನೂ ಸಾಮೂಹಿಕವಾಗಿ ಆಚರಿಸುವುದಕ್ಕೆ ನಿಷೇಧ ಹೇರಿದೆ. ಹೀಗಾಗಿ ಇದನ್ನು ಅರ್ಥ ಮಾಡಿಕೊಂಡು ಮುಸ್ಲಿಂ ಬಾಂಧವರು ಮನೆಯಲ್ಲೆ ಇದ್ದು ತಮ್ಮ ಪ್ರಾರ್ಥನೆ ಮಾಡಬೇಕು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಯಾರೊಬ್ಬರು ಮಸೀದಿಗೆ ಹೋಗಬಾರದು ಎಂದರು.

ಡಿವೈಎಸ್‌ಪಿ ವೆಂಕನಗೌಡ ಪಾಟೀಲ ಮಾತನಾಡಿ, ಜನಹಿತಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಪ್ರತಿಯೊಬ್ಬರೂ ಚಾಚು ತಪ್ಪದೇ ಪಾಲಿಸಬೇಕು ಎಂದು ಹೇಳಿದರು. ನಿಯಮ ಉಲ್ಲಂಘಿಸಿ 3-4 ಜನಕ್ಕಿಂತ ಹೆಚ್ಚು ಜನ ಗುಂಪುಗೂಡಿದ್ದು ಕಂಡುಬಂದರೆ ಮುಲಾಜಿಲ್ಲದೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ ಎಂದರು.

ಪಪಂ ಮುಖ್ಯಾಧಿಕಾರಿ ವೆಂಕಟೇಶ ತೆಲಾಂಗ್‌ ಮಾತನಾಡಿದರು. ಸಿಪಿಐ ಭೋಜರಾಜ ರಾಠೊಡ್‌, ಪಿಎಸ್‌ಐ ಬಸವರಾಜ ಚಿತಕೋಟಿ, ಮುಖಂಡರಾದ ಚಂದ್ರಕಾಂತ ವನಮಾಲಿ, ಶಿವಶರಣಪ್ಪ ಬಡಿಗೇರ, ರವಿದಾಸ ಪತಂಗೆ, ಚಂದ್ರಕಾಂತ ಜಾಧವ್‌, ಗುಡೂಸಾಬ್‌ ಕಮಲಾಪುರ, ಶಿವಶರಣಪ್ಪ ಕಮಲಾಪುರ, ರಾಘವೇಂದ್ರ ಗುತ್ತೇದಾರ, ಸೋಮಶೇಖರ ಮಾಕಪನೋರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next