Advertisement

ಬಿಹಾರಕ್ಕೆ ವಿಶೇಷ ರೈಲು: ಹೆಸರು ನೋಂದಣಿ ಮಾಡಲು ಸೂಚನೆ

04:29 PM May 17, 2020 | Naveen |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನೆಲೆಸಿರುವ ಬಿಹಾರದ ವಲಸಿಗರು ತವರಿಗೆ ಮರಳಲು ಕಲಬುರಗಿ ರೈಲ್ವೆ ನಿಲ್ದಾಣದಿಂದ ಮೇ 20ರಂದು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಬಿಹಾರ ರಾಜ್ಯದ ವಲಸೆ ಕಾರ್ಮಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ.

Advertisement

ರೈಲಿನಲ್ಲಿ ಪ್ರಯಾಣ ಬೆಳೆಸಲು ಇಚ್ಛಿಸುವ ಬಿಹಾರದ ವಲಸೆ ಕಾರ್ಮಿಕರು ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ನೋಡಲ್‌ ಅಧಿಕಾರಿ ಶ್ರೀಹರಿ ದೇಶಪಾಂಡೆ (86609 52314, 91640 46824) ಅವರನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ತವರು ರಾಜ್ಯಕ್ಕೆ ಮರಳುವ ಕಾರ್ಮಿಕರು ತಮ್ಮ ಪ್ರಯಾಣದ ವೆಚ್ಚವನ್ನೇ ತಾವು ಭರಿಸಬೇಕು ಎಂದು ಜಿಲ್ಲಾಧಿಕಾರಿ ಸ್ಪಪ್ಟಪಡಿಸಿದ್ದಾರೆ.

ಇಂದು ರೈಲಿಲ್ಲ: ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನೆಲೆಸಿರುವ ಬಿಹಾರದ 1,482 ವಲಸಿಗರು ತವರಿಗೆ ಮರಳಲು ಮುಂದಾಗಿದ್ದಾರೆ. ಅವರ ಸ್ಥಳಾಂತರಕ್ಕೆ ಕಲಬುರಗಿ ರೈಲ್ವೆ ನಿಲ್ದಾಣದಿಂದ ಮೇ 17ರಂದು ರಾತ್ರಿ 8:00ಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಬೇಕು ಎಂದು ಶರತ್‌ ಬಿ. ಶುಕ್ರವಾರ ಸೊಲ್ಲಾಪುರ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದು ಕೋರಿದ್ದರು. ಆದರೆ, ಬಿಹಾರದಲ್ಲಿ ವಲಸಿಗರ ಸಂದಣಿ ಹೆಚ್ಚಾಗಿರುವುದರಿಂದ ಮೇ 17ರಂದು ರೈಲು ರದ್ದು ಪಡಿಸಿ ಅದೇ ರೈಲನ್ನು ಮೇ 20ಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next