ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಅಖೀಲ ಭಾರತ ಹಾಗೂ ರಾಜ್ಯಮಟ್ಟದ ರ್‍ಯಾಂಕಿಂಗನಲ್ಲಿ ಶರಣಬಸವೇಶ್ವರ ಶರಣಬಸವೇಶ್ವರ ಸಂಯುಕ್ತ ವಸತಿ ಪಿಯು (ಎಸ್‌ಬಿಆರ್) ಕಾಲೇಜ್ ಗಮನಾರ್ಹ ಸಾಧನೆ ಮಾಡಿರುವುದು ಶೈಕ್ಷಣಿಕ ಗುಣಮಟ್ಟತೆಗೆ ಹಿಡಿದ ಕನ್ನಡಿಯಾಗಿದೆ.
ಪಿಯು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಬುದ್ಧಿಮತ್ತೆ ಮತ್ತು ಉತ್ಸಾಹದಿಂದ ಉತ್ತಮ ಸಾಧನೆ ಮಾಡುವುದರ ಮೂಲಕ ಕಾಲೇಜು ಅಷ್ಟೇ ಅಲ್ಲದೇ ಶೈಕ್ಷಣಿಕವಾಗಿ ಹಿಂದುಳಿದ ಕಲಬುರಗಿ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.
2019ರ ನೀಟ್ ಫಲಿತಾಂಶವು ಶರಣಬಸವೇಶ್ವರ ಪಿಯು ಕಾಲೇಜಿಗೆ ಐತಿಹಾಸಿಕವಾಗಿದ್ದು. ಇಡೀ ಜಿಲ್ಲೆ ನೀಟ್ ರ್‍ಯಾಂಕ್‌ನಲ್ಲಿ ಹಿಂದುಳಿದಿದ್ದರೂ, ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ರಾಜ್ಯಮಟ್ಟದ ರ್‍ಯಾಂಕಿಂಗ್‌ನಲ್ಲಿ ಉತ್ತಮ ಅಂಕ ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ.
ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್, ನೀಟ್ ರ್‍ಯಾಂಕ್ ಮೂಲಕ ಕಾಲೇಜಿನ ಮೂನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ. 655ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ. ಇದರ ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಸಾಮಾನ್ಯ ಪ್ರವೇಶ ಪರೀಕ್ಷೆಗಳಾದ ಎಐಐಎಂಎಸ್ ಮತ್ತು ಜೆಇಇ ಪರೀಕ್ಷೆಗಳಲ್ಲೂ ಸಾಧನೆ ತೋರಿದ್ದಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದ ರ್‍ಯಾಂಕಿಂಗ್‌ನಲ್ಲಿ, ರಾಜ್ಯಮಟ್ಟದ ನೀಟ್ ರ್‍ಯಾಂಕಿಂಗನಲ್ಲಿ ಕಾಲೇಜಿನ ಫಲಿತಾಂಶ ಗಮನಾರ್ಹವಾಗಿದೆ.
ಈ ಐತಿಹಾಸಿಕ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಸಿಬ್ಬಂದಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅಭಿನಂದಿಸಿದ್ದಾರೆ.