Advertisement

ಎಲ್ಲಾ ವಿಷಯದಲ್ಲಿ ಇತಿಹಾಸ ನಿರ್ಮಿಸಿದೆ ಕಲಬುರಗಿ ಸಾಹಿತ್ಯ ಸಮ್ಮೇಳನ

10:03 AM Feb 10, 2020 | keerthan |

ಕಲಬುರಗಿ: ಮೂರು ದಿನಗಳ ಕಾಲ ನಡೆದ ಅಖಿಲ ಭಾರತ 85ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯ ಎಲ್ಲಾ ವಿಧಗಳಲ್ಲೂ ಇತಿಹಾಸ ನಿರ್ಮಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದರು.

Advertisement

ಕನ್ನಡ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಅಂದಾಜು 5ರಿಂದ 6 ಲಕ್ಷ ಜನ ಬಂದಿರುವುದು, 22 ಸಾವಿರ ಪ್ರತಿನಿಧಿಗಳಾಗಿರುವುದು, ನಿರೀಕ್ಷೆ ಮೀರಿ ಪುಸ್ತಕ ವಹಿವಾಟು, ಎಲ್ಲೂ ಒಂದೂ ಅನಪೇಕ್ಷಿತ ಘಟನೆ ನಡೆಯದಿರುವುದು, ಯಾರಿಗೂ ಊಟದ ಕೊರೆತೆಯಾಗದಂತೆ ಸಮ್ಮೇಳನ ನಡೆದಿರುವುದು ದಾಖಲೆಯಾಗಿದೆ ಎಂದು ವಿವರಣೆ ನೀಡಿದರು.

ಸಮ್ಮೇಳನ ಯಶಸ್ವಿಯಲ್ಲಿ ಶಾಸಕ- ಜನಪ್ರತಿನಿಧಿಗಳ ನೇತೃತ್ವದ ಹಾಗೂ ಅಧಿಕಾರಿಗಳು ಒಳಗೊಂಡ ಕಾರ್ಯಾಧ್ಯಕ್ಷರು, ಇತರೆ ಅಧಿಕಾರಿಗಳ ತಂಡ ಶ್ರಮವಹಿಸಿದೆ. ಅದರಲ್ಲೂ ದಕ್ಷ, ದೂರದೃಷ್ಟಿಯುಳ್ಳ ಹಾಗೂ ಹಗಲಿರಳು ಶ್ರಮಿಸಿದ ಜಿಲ್ಲಾಧಿಕಾರಿ ಶರತ್ ಬಿ ಅವರ ಪಾತ್ರ, ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ಗೆ ಹೆಚ್ಚಿನ ಸಲ ಬಾರದೇ ಇದ್ದರೂ ದಿನಾಲು ಸಿದ್ಧತೆಗಳ ವಿವರಣೆ ಕೇಳುತ್ತಾ ಮಾರ್ಗದರ್ಶನ ನೀಡಿರುವುದು ಮತ್ತು ಬಹು ಮುಖ್ಯವಾಗಿ ನಾಡಿನ ಜ‌ನತೆ ಉತ್ಸುಕತೆ ಪಾಲ್ಗೊಂಡಿರುವುದು ಸಮ್ಮೇಳನ ಯಶಸ್ವಿಗೆ ಕಾರಣಗಳಾಗಿವೆ ಎಂದು ಸಿಂಪಿ ವಿವರಣೆ ನೀಡಿದರು.

ತಾನು ಒಂಬತ್ತು ಸಮ್ಮೇಳನದಲ್ಲಿ ಭಾಗವಹಿಸಿ ಎಲ್ಲವನ್ನೂ ನೋಡಿದ್ದೇನೆ. ಆದರೆ ಕಲಬುರಗಿ ಸಮ್ಮೇಳನ ಎಲ್ಲದರಲ್ಲೂ ಒಂದೆರಡು ಹೆಜ್ಜೆ ಮುಂದಿದೆ. ಹೀಗಾಗಿ ಎಲ್ಲರಿಗೂ ಶಿರಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ ಎಂದರು.

ಕಸಾಪ ಗೌರವ ಕಾಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ನಾಗರಹಳ್ಳಿ, ಖಜಾಂಚಿ ದೌಲತರಾವ ಮಾಲಿಪಾಟೀಲ್, ಇತರ ಪದಾಧಿಕಾರಿಗಳಾದ ಸೂರ್ಯಕಾಂತ‌ ಪಾಟೀಲ್, ಲಿಂಗರಾಜ ಸಿರಗಾಪುರ, ಆನಂದ ನಂದೂರಕರ್.ವಿಶ್ವನಾಥ ಭಕರೆ, ವೀರಸಂಗಪ್ಪ, ಪ್ರೇಮಕುಮಾರ, ರಮೇಶ ಕಡಾಳೆ, ಚಂದ್ರಶೇಖರ ಸೇರಿದಂತೆ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next