Advertisement

ಕಲಬುರಗಿ: ಟ್ಯಾಂಕರ್-ಕಾರು ನಡುವೆ ಭೀಕರ ಅಪಘಾತ; ನಾಲ್ವರು ಸಾವು

08:24 AM Jul 20, 2021 | Team Udayavani |

ಕಲಬುರಗಿ: ಟ್ಯಾಂಕರ್ ಮತ್ತು ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ತಾಲೂಕಿನ ಕೋಟನೂರು ಬಳಿ ನಡೆದಿದೆ.

Advertisement

ರಾತ್ರಿ ಒಂದು ಗಂಟೆ ಸಮಯದಲ್ಲಿ ಈ ದುರಂತ ನಡೆದಿದ್ದು, ಅಪಘಾತದಲ್ಲಿ ರಾಹುಲ್ (25), ಖಾಸಿಂ (26), ಉಲ್ಲಾಸ್ (26), ಎಂಬವರು ಮೃತಪಟ್ಟಿದ್ದಾರೆ. ಇನ್ನೋರ್ವ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಮೃತರೆಲ್ಲಾ ಕಲಬುರಗಿ ನಗರದ ನಿವಾಸಿಗಳು.

ಅಪಘಾತದಲ್ಲಿ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜೇವರ್ಗಿ ಮಾರ್ಗದಿಂದ ಕಲಬುರಗಿ ನಗರಕ್ಕೆ ಕಾರು ಹಾಗೂ ಕಲಬುರಗಿ ನಗರದಿಂದ ಜೇವರ್ಗಿ ಕಡೆ ಟ್ಯಾಂಕರ್ ಹೊರಟಿತ್ತು ಎಂದು ತಿಳಿದುಬಂದಿದೆ. ಇಟೋಸ್ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಲಬುರಗಿ ನಗರ ಸಂಚಾರಿ 2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next